Orange Blossom: ಕಿತ್ತಳೆ ಹಣ್ಣಿನಿಂದ ಮಾತ್ರ ಅಲ್ಲ ಅದರ ಹೂವಿನಿಂದ ಸಹ ಇದೆ ಸಾವಿರ ಪ್ರಯೋಜನ
Benefits of Orange Blossom: ಕಿತ್ತಳೆ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸೀಸನ್ ಸಮಯದಲ್ಲಿ ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ನಿಮಗೆ ಕಿತ್ತಳೆ ಹೂವಿನ ಬಗ್ಗೆ ಗೊತ್ತಾ? ಹಲವಾರು ಜನರಿಗೆ ಗೊತ್ತಿಲ್ಲದ ಈ ಕಿತ್ತಳೆ ಹೂವಿನ ಪ್ರಯೋಜನಗಳನ್ನು ನಾವಿಲ್ಲಿ ನೀಡಿದ್ದೇವೆ.
ಟೋನರ್ ಆಗಿ ಬಳಸಬಹುದು: ನೀವು ಕಿತ್ತಳೆ ಹೂವಿನ ನೀರನ್ನು ಮಾಡಿಕೊಂಡು ಅದನ್ನು ಟೋನರ್ ರೀತಿ ಸಹ ಬಳಕೆ ಮಾಡಬಹುದು. ಸ್ವಲ್ಪ ಹೂವುಗಳನ್ನು ತೆಗೆದುಕೊಂಡು, ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಪೂರ್ತಿ ತಣ್ಣಗಾದ ನಂತರ ಸ್ಪ್ರೇ ಬಾಟಲಿಗೆ ಹಾಕಿ ನಿಮಗೆ ಬೇಕಾದಾಗ ಬಳಕೆ ಮಾಡಬಹುದು.
2/ 8
ತ್ವಚೆಯನ್ನು ಮೃದುಗೊಳಿಸುತ್ತದೆ: ಈ ಕಿತ್ತಳೆ ಹೂವಿನ ನೀರನ್ನು ರೋಸ್ ವಾಟರ್ ರೀತಿ ಸಹ ಬಳಕೆ ಮಾಡಬಹುದು. ನೀವು ರಾತ್ರಿ ಮಲಗುವಾಗ ಹತ್ತಿಯಲ್ಲಿ ಇದನ್ನು ಮುಖಕ್ಕೆ ಹಚ್ಚಿ ಬಿಡಿ. ನಿಮ್ಮ ಚರ್ಮ ಬಹಳ ಮೃದುವಾಗುತ್ತದೆ.
3/ 8
ದೇಹವನ್ನು ರಿಫ್ರೆಶ್ ಮಾಡುತ್ತದೆ: ಕೆಲಸದ ಕಾರಣದಿಂದ ನಮ್ಮ ದೇಹಕ್ಕೆ ಬಹಳ ಆಯಾಸ ಆಗುತ್ತದೆ. ಅದಕ್ಕೆ ಈ ಕಿತ್ತಳೆ ಹೂವಿನ ನೀರು ಪ್ರಯೋಜನ ನೀಡುತ್ತದೆ. ನಿಮ್ಮ ಸ್ನಾನದ ನೀರಿನಲ್ಲಿ ಈ ಇದನ್ನು ಮಿಶ್ರಣ ಮಾಡಿದರೆ ದೇಹ ರಿಫ್ರೆಶ್ ಆಗುತ್ತದೆ. ಅರೋಮಾ ಥೆರಪಿಯಲ್ಲಿ ಸಹ ಇದನ್ನು ಬಳಸಲಾಗುತ್ತದೆ.
4/ 8
ಅಜೀರ್ಣ ಸಮಸ್ಯೆಗೆ ಪರಿಹಾರ: ಈ ಕಿತ್ತಳೆ ಹೂವು ಸಹ ಹಣ್ಣಿನಂತೆಯೇ ಹಲವು ಪೋಷಕಾಂಶಗಳನ್ನು ಹೊಂದಿದ್ದು, ಅಜೀರ್ಣ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಅದರಲ್ಲೂ ಮಕ್ಕಳಲ್ಲಿ ಕಾಡುವ ಹೊಟ್ಟೆ ನೋವಿಗೆ ಇದು ಮನೆಮದ್ದು ಎನ್ನಬಹುದು.
5/ 8
ಉಗುರಿನ ಆರೋಗ್ಯಕ್ಕೆ: ಉಗುರಿನ ಆರೋಗ್ಯವನ್ನು ಸಹ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಈ ನೈಲ್ ಪಾಲಿಶ್ ಹಾಗೂ ರಿಮೂವರ್ ಬಳಕೆ ಮಾಡುವುದರಿಂದ ಉಗುರು ಹಾಳಾಗುತ್ತದೆ. ಅದಕ್ಕೆ ನೀವು ಕಿತ್ತಳೆ ಹೂವಿನ ನೀರಿನಲ್ಲಿ ಉಗುರುಗಳನ್ನು ಆಗಾಗ ನೆನೆಸಿಡುವುದು ಸಹಾಯ ಮಾಡುತ್ತದೆ.
6/ 8
ಕೂದಲಿನ ಬೆಳವಣಿಗೆಗೆ: ಈ ಕಿತ್ತಳೆ ಹೂವಿನ ನೀರು ನಿಮ್ಮ ಕೂದಲಿನ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ. ತಲೆಸ್ನಾನ ಮಾಡುವಾಗ ಶಾಂಪೂ ಹಾಕುವ ಮುನ್ನ ಕಿತ್ತಳೆ ಹೂವಿನ ನೀರನ್ನು ಹಚ್ಚಿ ಅಥವಾ ತಲೆಸ್ನಾನಕ್ಕೂ 30 ನಿಮಿಷ ಮೊದಲು ಈ ನೀರನ್ನು ಹಚ್ಚಿ ದರೆ ಕೂದಲು ಉದುರುವುದು ನಿಲ್ಲುತ್ತದೆ.
7/ 8
ತುರಿಕೆ ಹೋಗಲಾಡಿಸುತ್ತದೆ: ಚರ್ಮದ ಸಮಸ್ಯೆಗಳಿಗೆ ಸಹ ಈ ಕಿತ್ತಳೆ ನೀರು ಪ್ರಯೋಜನ ನೀಡುತ್ತದೆ. ನಿಮಗೆ ತುರಿಕೆ ಆಗುತ್ತಿದ್ದರೆ ಅಥವಾ ಅಲರ್ಜಿ ಆಗಿದ್ದರೆ ಹತ್ತಿಯಲ್ಲಿ ಈ ನೀರನ್ನು ಹಚ್ಚಿದರೆ ಸಾಕು.
8/ 8
ಸಾಕು ಪ್ರಾಣಿಗಳಿಗೆ: ನಿಮ್ಮ ಸಾಕು ಪ್ರಾಣಿಗಳಿಗೆ ಗಾಯವಾಗಿದ್ದರೆ ಈ ಕಿತ್ತಳೆ ನೀರು ಹಚ್ಚಿ. ಸಣ್ಣ ಪುಟ್ಟ ಗಾಯಗಳನ್ನು ಬೇಗ ಗುಣಪಡಿಸುವ ಶಕ್ತಿ ಈ ನೀರಿಗಿದೆ.