Akshaya Tritiya: ಈ ಅಕ್ಷಯ ತೃತೀಯಾಗೆ ಕಡಿಮೆ ಬೆಲೆಯಲ್ಲಿ ಬ್ಯೂಟಿಫುಲ್ ಚಿನ್ನಾಭರಣಗಳು
Trend: ನಾಳೆ ಅಕ್ಷಯ ತೃತೀಯ. ಇದು ಹೊಸ ಆರಂಭವನ್ನು ಮಾಡಲು ವರ್ಷದ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ ಎನ್ನಲಾಗುತ್ತದೆ. . ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯದಂದು ಈ ದಿನ ಬರುತ್ತದೆ. ಈ ದಿನ ಬಂಗಾರವನ್ನು ಖರೀದಿ ಮಾಡಿದರೆ ಶುಭ ಎನ್ನುತ್ತಾರೆ. ಈ ದಿನ ಈ ಬಾರಿಯ ಹೊಸ ಡಿಸೈನ್ ಆಭರಣಗಳನ್ನು ನೀವು ಹುಡುಕುತ್ತಿದ್ದರೆ ನಿಮಗೆ ನಾವು ಸಹಾಯ ಮಾಡುತ್ತೇವೆ. ಅಲ್ಲದೇ ಈ ದಿನ ಜ್ಯೂವೆಲರಿ ಅಂಗಡಿಗಳು ಸಹ ವಿಭಿನ್ನ ಆಫರ್ಗಳನ್ನು ನೀಡುತ್ತಿದ್ದು, ಯಾವೆಲ್ಲಾ ಆಫರ್ಗಳಿವೆ, ಯಾವುದು ಟ್ರೆಂಡಿ ಇಲ್ಲಿದೆ ಫುಲ್ ಡೀಟೈಲ್ಸ್.
ತನಿಷ್ಕ್ ಈ ಸುಂದರವಾದ ನೆಕ್ಲೇಸ್ ಹಬ್ಬದ ಆಫರ್ನಲ್ಲಿ ಕಡಿಮೆ ಬೆಲೆಗೆ ಲಭ್ಯವಿದ್ದು ಹಬ್ಬ ಮಾತ್ರವಲ್ಲದೇ ಯಾವುದೇ ಶುಭ ಸಮಾರಂಭಕ್ಕೆ ಒಪ್ಪುವಂತಿದೆ. ಇನ್ನು ತನಿಷ್ಕ್ ಚಿನ್ನ ಮತ್ತು ವಜ್ರದ ಆಭರಣಗಳ ಮೇಕಿಂಗ್ ಶುಲ್ಕದಲ್ಲಿ ಶೇಕಡಾ 20 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ನಂತರ, ಸಾದಾ ಆಭರಣಗಳ ಮೇಲೆ ಪ್ರತಿ ಗ್ರಾಂಗೆ ರೂ 200 ಕಡಿತ ಮಾಡುತ್ತಿದೆ.
2/ 8
ಸ್ವಲ್ಪ ಹೆವಿ ಎನಿಸುವ ಈ ನೆಕ್ಲೇಸ್ ಮತ್ತು ಕಿವಿ ಓಲೆ ಸಧ್ಯ ಟ್ರೆಂಡ್ನಲ್ಲಿದ್ದು GRT ಜ್ಯುವೆಲರಿಯಲ್ಲಿ ಹಲವಾರು ಆಫರ್ಗಳ ಜೊತೆ ಲಭ್ಯವಿದ್ದು, ಈ ಹಬ್ಬಕ್ಕೆ ಇದನ್ನು ಖರೀದಿಸಿ.
3/ 8
ಈ ಉದ್ದದ ಚಿನ್ನದ ಸರ ಹವಳಗಳಿಂದ ಕೂಡಿದ್ದು, ನಿಜಕ್ಕೂ ಸೂಪರ್ ಲುಕ್ ನೀಡುತ್ತದೆ. ಈ ಬಾರಿ ಅಕ್ಷಯ ತೃತೀಯಾಗೆ ಉದ್ದದ ಸರ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದರೆ, ಇದು ಬೆಸ್ಟ್ ಆಯ್ಕೆ. ಇನ್ನು ಈ ಸರ ಲಲಿತಾ ಜ್ಯುವೆಲರಿಯಲ್ಲಿ ಲಭ್ಯವಿದೆ.
4/ 8
ಈ ಸುಂದರವಾದ 2 ನೆಕ್ಲೆಸ್ಗಳು ಭಾರಿ ಎನಿಸಿದರೂ ಬಹಳ ಸುಂದರವಾಗಿದ್ದು,, ಸಧ್ಯ ಟ್ರೆಂಡ್ನಲ್ಲಿರುವ ನೆಕ್ಲೇಸ್ಗಳಲ್ಲಿ ಇದು ಒಂದು.
5/ 8
ಅತ್ಯಾಧುನಿಕ ನೆಕ್ಲೇಸ್ಗಳು ಕೇವಲ ಸಾಂಪ್ರದಾಯಿಕ ಉಡುಗೆಗೆ ಮಾತ್ರವಲ್ಲದೇ ವೆಸ್ಟರ್ನ್ ಉಡುಗೆಗಗಳಿಗೂ ಸಹ ಇದು ಸೂಕ್ತ ಎನ್ನಬಹುದು. ತುಂಬಾ ಸಿಂಪಲ್ ಆಗಿದ್ದರೂ ಸಹ ವಿಭಿನ್ನ ಲುಕ್ ನೀಡುತ್ತದೆ.
6/ 8
ಇದನ್ನ ನೋಡಿದ ತಕ್ಷಣ ಪ್ರತಿಯೊಬ್ಬರಿಗೂ ಇಷ್ಟವಾಗದೇ ಇರದು. ಈ ನೆಕ್ಲೇಸ್ ಸಧ್ಯ ಹೆಚ್ಚು ಪ್ರಚಲಿತದಲ್ಲಿದ್ದು, ಹೆಚ್ಚೆಚ್ಚು ಜನರು ಖರೀದಿ ಮಾಡುತ್ತಿದ್ದಾರೆ. ಇದರ ಉದ್ದನೆಯ ಕಿವಿ ಓಲೆ, ಡಿಫರೆಮಟ್ ಡಿಸೈನ್ ಇರುವ ನೆಕ್ಲೇಸ್ ನಿಮ್ಮ ಕಲೆಕ್ಷನ್ನಲ್ಲಿ ಇರಬೇಕು.
7/ 8
ಈ ನೆಕ್ಲೇಸ್ಗಳು ಸ್ವಲ್ಪ ಹಳೆಯ ಕಾಲದ ಡಿಸೈನ್ ಆಗಿದ್ರೂ ಸಹ ಇತ್ತೀಚಿನ ಟ್ರೆಂಡ್ ಆಗಿ ಬದಲಾಗಿದೆ. ಕೇವಲ ಒಂದು ನೆಕ್ಲೇಸ್ ನಿಮ್ಮ ಫುಲ್ ಲುಕ್ ಅನ್ನು ಬದಲಾಯಿಸುತ್ತದೆ. ಈ ಆಭರಣಗಳು ನೋಡಲು ಅತಿ ದುಬಾರಿ ಎನಿಸಿದರೂ ಸಹ, ಅಕ್ಷಯ ತೃತೀಯ ವಿಶೇಷ ಆಫರ್ ಲಭ್ಯವಿದೆ.
8/ 8
ಸಧ್ಯ ಎಲ್ಲಾ ಆಭರಣದ ಟ್ರೆಂಡ್ ಅನ್ನು ಮೀರಿಸಿ ಸುದ್ದಿಯಲ್ಲಿರುವುದು ಎಂದರೆ ಈ ಆಭರಣದ ಡಿಸೈನ್ಗಳು. ವಿಭಿನ್ನ ರೀತಿಯ ಪೆಂಡೆಂಟ್ , ಅದಕ್ಕೆ ತಕ್ಕ ಕಿವಿ ಓಲೆ, ಒಮ್ಮೆ ನೋಡಿದರೆ ಖರೀದಿಸಲೇಬೇಕು ಅನಿಸುವಂತಿದೆ.