ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಹೀಗಿದ್ದರೂ ಚಟನೋ, ಶೋಕಿನೋ ಅದೆಷ್ಟೋ ಮಂದಿ ಧೂಮಪಾನಕ್ಕೆ ದಾಸರಾಗಿದ್ದಾರೆ. ದಿನೇ, ದಿನೇ ಧೂಮಪಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಚಿಕ್ಕ ವಯಸ್ಸಿನಲ್ಲಿಯೇ ಈ ಚಟಕ್ಕೆ ಬೀಳುವ ಜನರು ನಂತ್ರ ಚಟ ಬಿಡಲು ಸಾಧ್ಯವಾಗದೆ ತೊಂದರೆ ಅನುಭವಿಸ್ತಾರೆ. ಸಣ್ಣ ವಯಸ್ಸಿನಲ್ಲಿಯೇ ಸಾವು ತಂದುಕೊಂಡವರ ಸಂಖ್ಯೆ ಹೆಚ್ಚಿದೆ. ಧೂಮಪಾನ ಹಾಗೂ ಗುಟ್ಕಾ ಸೇವನೆಯಿಂದ ಹಲವು ಗಂಭೀರ ಕಾಯಿಲೆಗಳು ಬರುವ ಅಪಾಯವಿದೆ. (ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ)