Weight Loss: ಇಳಿಕೆಯಾದ ತೂಕ ಮತ್ತೆ ಹೆಚ್ಚುತ್ತಿದೆಯೇ? ಡೋಂಟ್ ವರಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ಇತ್ತೀಚಿನ ದಿನಗಳಲ್ಲಿ ತೂಕ ನಷ್ಟ ಸಹ ಟ್ರೆಂಡಿಂಗ್ ಆಗಿದೆ. ವಿವಿಧ ವರ್ಕೌಟ್ ಗಳು, ಯೋಗಾಸನಗಳು, ಡಯಟ್ ಆಕರ್ಷಿಸುತ್ತದೆ. ಇದು ತೂಕ ನಷ್ಟಕ್ಕೆ ಪ್ರಚೋದನೆ ನೀಡುತ್ತಿದೆ. ತಾವು ಕೂಡ ಸುಂದರವಾಗಿ ಕಾಣಬೇಕೆಂದು ಎಷ್ಟೋ ಜನ ತೂಕ ನಷ್ಟಕ್ಕೆ ಮುಂದಾಗುತ್ತಾರೆ. ಕೆಲವರು ಮೊದಲು ತೂಕ ಇಳಿಸಿದ್ದರೂ ಮತ್ತೆ ತೂಕ ಹೆಚ್ಚುತ್ತದೆ. ಇದನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ನೋಡೋಣ.

First published:

  • 18

    Weight Loss: ಇಳಿಕೆಯಾದ ತೂಕ ಮತ್ತೆ ಹೆಚ್ಚುತ್ತಿದೆಯೇ? ಡೋಂಟ್ ವರಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಎಲ್ಲರೂ ಫಿಟ್ ಆಗಿರಬೇಕು. ತಾವೂ ಸಹ ಬಣ್ಣ ಬಣ್ಣದ ಸುಂದರ ಬಟ್ಟೆ ತೊಟ್ಟು, ಅಲಂಕಾರ ಮಾಡಿಕೊಂಡು ಮಿಂಚಬೇಕು. ಇಷ್ಟದ ವಸ್ತುಗಳನ್ನು ಕೊಳ್ಳಬೇಕು ಅಂದುಕೊಳ್ತಾರೆ. ಆದರೆ ಇದಕ್ಕೆ ತೂಕ ಹೆಚ್ಚಳ, ಸ್ಥೂಲಕಾಯ ಅಡ್ಡಿ ಪಡಿಸುತ್ತದೆ. ಆದರೆ ಇದನ್ನು ತೊಡೆದು ಹಾಕಲು ನೀವು ಕೆಲವು ಸಲಹೆ ಪಾಲಿಸಬೇಕು.

    MORE
    GALLERIES

  • 28

    Weight Loss: ಇಳಿಕೆಯಾದ ತೂಕ ಮತ್ತೆ ಹೆಚ್ಚುತ್ತಿದೆಯೇ? ಡೋಂಟ್ ವರಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ನೀವು ಈಗಾಗಲೇ ತೂಕ ಇಳಿಸಿದ್ದರೆ, ಆದರೆ ತೂಕ ಮತ್ತೆ ಹೆಚ್ಚುತ್ತಿದ್ದರೆ, ಅಂಥವರು ಜಾಗ್ರತೆ ವಹಿಸಿ. ದಿನವೂ ಯೋಗಾ, ಡಯಟ್ ಮೂಲಕ ತೂಕ ಮೆಂಟೇನ್ ಮಾಡಿ. ಉತ್ತಮ ಆಹಾರ ಕ್ರಮ ಫಾಲೋ ಮಾಡಿ. ಹೇಗೆ ಬೇಕೋ ಹಾಗೇ, ಸಿಕ್ಕಿದ್ದೆಲ್ಲವನ್ನೂ ತಿನ್ನಬೇಡಿ. ದಿನವೂ ತಪ್ಪದೇ ವಾಕಿಂಗ್ ಮಾಡಿ.

    MORE
    GALLERIES

  • 38

    Weight Loss: ಇಳಿಕೆಯಾದ ತೂಕ ಮತ್ತೆ ಹೆಚ್ಚುತ್ತಿದೆಯೇ? ಡೋಂಟ್ ವರಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಯಾಕಂದ್ರೆ ನೀವು ಎಷ್ಟೋ ಕಷ್ಟ ಪಟ್ಟು ಇಳಿಸಿದ ತೂಕ ಮತ್ತೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಮುಖ್ಯ. ನಿಮ್ಮ ತೂಕ ನಷ್ಟದ ಕಠಿಣ ಶ್ರಮ ವ್ಯರ್ಥವಾಗಿ ಹೋಗದಿರಲಿ. ನಿಮ್ಮ ಸಾಮಾನ್ಯ ದಿನಚರಿಯಲ್ಲಿ ವ್ಯಾಯಾಮ ಮತ್ತು ಯೋಗ ಮಾಡುವುದನ್ನು ನಿಲ್ಲಿಸಬೇಡಿ. ಹೊರಗಿನ ಫಾಸ್ಟ್ ಫುಡ್ ಹೆಚ್ಚು ತಿನ್ನಬೇಡಿ.

    MORE
    GALLERIES

  • 48

    Weight Loss: ಇಳಿಕೆಯಾದ ತೂಕ ಮತ್ತೆ ಹೆಚ್ಚುತ್ತಿದೆಯೇ? ಡೋಂಟ್ ವರಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಹೆಚ್ಚು ಸಕ್ಕರೆ ಮತ್ತು ಕರಿದ ಪದಾರ್ಥ ತಿನ್ನಬೇಡಿ. ಪ್ಯಾಕ್ ಮಾಡಿದ ಆಹಾರ ತಪ್ಪಿಸಿ. ತಂಪು ಪಾನೀಯ, ಬಾಯಿ ರುಚಿ ಹೆಚ್ಚಿಸುವ ಖಾರ ಸೇರಿ ಸಕ್ಕರೆ ಮಿಶ್ರಿತ ಆಹಾರ ತಪ್ಪಿಸಿ. ಹೆಚ್ಚು ಹಣ್ಣು ಮತ್ತು ತರಕಾರಿ ಸಲಾಡ್ ತಿನ್ನಿ. ಇದು ತೂಕ ನಷ್ಟದ ನಂತರ ಅದನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    MORE
    GALLERIES

  • 58

    Weight Loss: ಇಳಿಕೆಯಾದ ತೂಕ ಮತ್ತೆ ಹೆಚ್ಚುತ್ತಿದೆಯೇ? ಡೋಂಟ್ ವರಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ತೂಕ ನಷ್ಟದ ನಂತರ ನಿಮ್ಮ ತೂಕ ಕಾಪಾಡಿಕೊಳ್ಳಲು ಸದಾ ಹೆಚ್ಚು ನೀರು ಕುಡಿಯಿರಿ. ದೇಹವನ್ನು ಯಾವಾಗಲೂ ಹೈಡ್ರೇಟ್ ಮಾಡಿ. ಹಗಲಿನಲ್ಲಿ ಸಾಕಷ್ಟು ನೀರು ಕುಡಿಯಿರಿ, ವಿಶೇಷವಾಗಿ ಬಾಯಾರಿಕೆಯಾದಾಗ ನೀರು ಕುಡಿಯುವುದು ಬಿಡಬೇಡಿ. ನೀರು ಕ್ಯಾಲೊರಿ ಸುಡುತ್ತದೆ. ಚಯಾಪಚಯ ಕ್ರಿಯೆಗೆ ಸಹಕಾರಿ.

    MORE
    GALLERIES

  • 68

    Weight Loss: ಇಳಿಕೆಯಾದ ತೂಕ ಮತ್ತೆ ಹೆಚ್ಚುತ್ತಿದೆಯೇ? ಡೋಂಟ್ ವರಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಪ್ರತೀದಿನ ಒಂದೇ ಬಾರಿಗೆ ಹೆಚ್ಚು ಆಹಾರ ತಿನ್ನಬೇಡಿ. ಇಡಿ ದಿನವೂ ನಿಮ್ಮ ಆಹಾರವನ್ನು ನಾಲ್ಕು ಭಾಗಗಳಾಗಿ ಮಾಡಿ. ತೂಕ ನಷ್ಟಕ್ಕೆ ಊಟವನ್ನು ಚಿಕ್ಕ ಚಿಕ್ಕ ಮೀಲ್ ತಿನ್ನಿ. ಆಹಾರದಲ್ಲಿ ದಾಲ್ಚಿನ್ನಿ, ಅರಿಶಿನ ಮತ್ತು ಜಾಯಿಕಾಯಿ ಸೇರಿಸಿ. ಇದು ಚಯಾಪಚಯ ಹೆಚ್ಚಿಸುತ್ತದೆ. ತೂಕ ನಿಯಂತ್ರಿಸುತ್ತದೆ.

    MORE
    GALLERIES

  • 78

    Weight Loss: ಇಳಿಕೆಯಾದ ತೂಕ ಮತ್ತೆ ಹೆಚ್ಚುತ್ತಿದೆಯೇ? ಡೋಂಟ್ ವರಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಹೊಟ್ಟೆ ತುಂಬಿದ ನಂತರವೂ ಮತ್ತೆ ತಿನ್ನುವುದನ್ನು ತಪ್ಪಿಸಿ. ನಿಮ್ಮ ಆಹಾರದಲ್ಲಿ ಕಾಲು ಭಾಗ ನೀರು, ಊಟಕ್ಕೂ ಜಾಗವಿರಿಸಿ. ಹೊಟ್ಟೆ ಮುಕ್ಕಾಲು ಭಾಗ ತುಂಬಿದೆ ಅನ್ನಿಸಿದಾಗ ಊಟ ನಿಲ್ಲಿಸಿ. ಇದು ತೂಕ ನಿಯಂತ್ರಿಸಲು ಸಹಕಾರಿ.

    MORE
    GALLERIES

  • 88

    Weight Loss: ಇಳಿಕೆಯಾದ ತೂಕ ಮತ್ತೆ ಹೆಚ್ಚುತ್ತಿದೆಯೇ? ಡೋಂಟ್ ವರಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

    ಆರೋಗ್ಯಕರ ತಿಂಡಿಗಳ ನ್ನು ತಿನ್ನಿ. ತೂಕ ಇಳಿಕೆ ನಂತರ ಸಂಸ್ಕರಿಸಿದ, ಪ್ಯಾಕ್ ಮಾಡಿದ, ಜಂಕ್ ಮತ್ತು ಫಾಸ್ಟ್ ಫುಡ್ ಗಳನ್ನು ತಿನ್ನಬೇಡಿ. ವ್ಯಾಯಾಮ ರಹಿತ ಜೀವನಶೈಲಿ ಬದಲಾಯಿಸಿ. ದಿನವೂ ವ್ಯಾಯಾಮ ಮತ್ತು ಯೋಗ ಮಾಡಿ. ದೈಹಿಕ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ತೂಕ ಇಳಿಸಿ, ಫಿಟ್ ಆಗಿರಿ.

    MORE
    GALLERIES