ತಿಂದ ತಕ್ಷಣ ವಾಂತಿ ಆಗುವ ಸಮಸ್ಯೆ ತಪ್ಪಿಸಲು ಹುರಿದ ಮತ್ತು ಮಸಾಲೆಯುಕ್ತ ಆಹಾರ ಸೇವನೆ ತ್ಯಜಿಸಬೇಕು. ಒಂದೇ ಬಾರಿಗೆ ಹೆಚ್ಚಿನ ಆಹಾರ ಸೇವಿಸಬೇಡಿ. ಊಟ ಮಾಡುತ್ತಾ ಚಹಾ, ಕಾಫಿ, ಕಾರ್ಬೊನೇಟೆಡ್ ನೀರು, ಎನರ್ಜಿ ಡ್ರಿಂಕ್ಸ್ ಇತ್ಯಾದಿ ಕೆಫೀನ್ ಪದಾರ್ಥ ಸೇವಿಸಬೇಡಿ. ತುಂಬಾ ಹೊತ್ತು ಖಾಲಿ ಹೊಟ್ಟೆಯಲ್ಲಿ ಇರಬೇಡಿ. ಆಹಾರ ತಿಂದ ತಕ್ಷಣ ವ್ಯಾಯಾಮ ಮಾಡಬೇಡಿ.