Weight Loss: ತೂಕ ಇಳಿಸಿಕೊಂಡ ನಂತರ ವಿವಾಹವಾದ ಹಾಸ್ಯ ನಟಿ Vidyullekha Raman
ಬಹುಭಾಷಾ ನಟಿ ಹಾಗೂ ಹಾಸ್ಯ ನಟಿ ವಿದ್ಯುಲೇಖಾ ರಾಮನ್ ಅವರು ಪ್ರೀತಿಸಿದ ಯುವಕನ ಜೊತೆ ಸಪ್ತಪದಿ ತುಳಿದಿದ್ದಾರೆ. ಹಿಂದೂ ಸಂಪ್ರದಾಯದಂತೆ ವಿದ್ಯುಲ್ಲೇಖಾ ಹಾಗೂ ಸಂಜಯ್ ವಿವಾಹವಾಗಿದ್ದಾರೆ. ವಿವಾಹಕ್ಕೂ ಮೊಲದು ಈ ಹಾಸ್ಯ ನಟಿ ದೇಹದ ತೂಕ ಇಳಿಸಿಕೊಂಡಿದ್ದು ವಿಶೇಷ. (ಚಿತ್ರಗಳು ಕೃಪೆ: ವಿದ್ಯುಲ್ಲೇಖಾ ಇನ್ಸ್ಟಾಗ್ರಾಂ ಖಾತೆ)
Vidyullekha Raman: ಕಾಲಿವುಡ್, ಟಾಲಿವುಡ್ ಸೇರಿದಂತೆ ಕನ್ನಡದಲ್ಲೂ ನಟಿಸಿರುವ ಹಾಸ್ಯ ನಟಿ ವಿದ್ಯುಲ್ಲೇಖಾ ರಾಮನ್ ಕಳೆದ ವರ್ಷ ಆಗಸ್ಟ್ನಲ್ಲಿ ಮದುವೆಯಾಗುವ ನಿರ್ಧಾರಕ್ಕೆ ಬಂದು, ಪ್ರೀತಿಸಿದ ಹುಡುಗನೊಂದಿಗೆ ಇತ್ತೀಚೆಗಷ್ಟೆ ರೋಕಾ ಮಾಡಿಕೊಂಡಿದ್ದರು.
2/ 10
ಕೆಲವೇ ದಿನಗಳ ಹಿಂದೆ ವಿದ್ಯುಲ್ಲೇಖಾ ಅವರು ವಿವಾಹವಾಗಿದ್ದು, ತಮ್ಮ ವಿವಾಹದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ನಟಿ ವಿವಾಹಕ್ಕೂ ಮೊದಲು ದೇಹದ ತೂಕ ಇಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದಾರೆ.
3/ 10
ಬಹಳ ಸಮಯದಿಂದ ಪ್ರೀತಿಸುತ್ತಿದ್ದ ವಿದ್ಯುಲ್ಲೇಖಾ ಹಾಗೂ ಸಂಜಯ್ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. 2020ರ ಆಗಸ್ಟ್ 26ಕ್ಕೆ ರೋಕಾ ಶಾಸ್ತ್ರ ಮುಗಿಸಿಕೊಂಡಿದ್ದರು.
4/ 10
ವಿದ್ಯುಲ್ಲೇಖಾ ಅವರ ವಿವಾಹ ತಮಿಳು ಸಂಪ್ರದಾಯದಂತೆ ನಡೆದಿದ್ದು, ನಂತರ ಉತ್ತರ ಭಾರತ ಶೈಲಿಯಲ್ಲಿ ಆರತಕ್ಷತೆಯಲ್ಲಿ ಮಿಂಚಿದ್ದಾರೆ ಈ ಜೋಡಿ.
5/ 10
ಸಂಜಯ್ ಉತ್ತರ ಭಾರತದವರಾಗಿದ್ದು, ಡಯಟೀಷಿಯನ್ ಹಾಗೂ ಫಿಟ್ನೆಸ್ ತರಬೇತುದಾರರಾಗಿದ್ದಾರೆ. ಈ ಜೋಡಿ ಬಹಳ ಸಮಯದಿಂದ ಪ್ರೀತಿಸುತ್ತಿದ್ದು, ಈಗ ಅವರ ಪ್ರೀತಿಗೆ ಮದುವೆಯ ಮುದ್ರೆಯಾಕಿದ್ದಾರೆ.
6/ 10
ದೇಹದ ತೂಕ ಇಳಿಸಿಕೊಂಡ ನಂತರ ವಿದ್ಯುಲ್ಲೇಖಾ ಅವರು ಸಿಕ್ಕಾಪಟ್ಟೆ ಸಪೂರವಾಗಿದ್ದು, ಅವರು ತಮ್ಮ ಮದುವೆಯ ಲೆಹೆಂಗಾದಲ್ಲಿ ಸಖತ್ ಆಗಿ ಮಿಂಚಿದ್ದಾರೆ.
7/ 10
ಜನಪ್ರಿಯ ನಟ ಮೋಹನ್ ರಾಮನ್ ಅವರ ಪುತ್ರಿ ವಿದ್ಯುಲ್ಲೇಖಾ 2012 ರಲ್ಲಿ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ತೆಲುಗು ಮತ್ತು ತಮಿಳಿನ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಹಾಸ್ಯನಟರಾಗಿ ಜನಪ್ರಿಯತೆ ಪಡೆದಿದ್ದಾರೆ.
8/ 10
7 ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ ಇವರು 2012 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ತಾವು ನಟಿಸಿದ ನೀತಾನೆ ಎನ್ ಪೊನ್ವಸಂತಮ್ ಎಂಬ ಮೊದಲ ಚಿತ್ರದಲ್ಲೇ ಮಿಂಚಿ ವಿಜಯ್ ಅವಾರ್ಡ್ನ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟ್ರೆಸ್ಗೆ ಆಯ್ಕೆಯಾಗಿದ್ದರು.
9/ 10
ಕಾಲಿವುಡ್ ಸಿನಿಮಾಗಳ ಜೊತೆಗೆ ತೆಲುಗು ಹಾಗೂ ಕನ್ನಡದಲ್ಲೂ ವಿದ್ಯುಲ್ಲೇಖಾ ನಟಿಸಿದ್ದಾರೆ. ಶಿವಣ್ಣನ ಜತೆ ಸಹ ತೆರೆ ಹಂಚಿಕೊಂಡಿದ್ದಾರೆ ಈ ನಟಿ.
10/ 10
ತಮ್ಮ ದೇಹದ ತೂಕ ಇಳಿಸಿಕೊಂಡ ಕುರಿತಾಗಿ ಸಾಕಷ್ಟು ಪೋಸ್ಟ್ಗಳನ್ನು ಮಾಡುವ ಈ ನಟಿ, ದೇಹದ ತೂಕ ಇಳಿಸಿಕೊಳ್ಳುವ ಬಗೆ ಸಾಕಷ್ಟು ಟಿಪ್ಸ್ ಕೊಡುತ್ತಿರುತ್ತಾರೆ.