ವಯಸ್ಸು ನಲವತ್ತು ಆಗುತ್ತಿದ್ದಂತೆ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಜೊತೆಗೆ ಚಯಾಪಚಯ (ತಿನ್ನುವ ಆಹಾರದಿಂದ ದೇಹದಲ್ಲಿ ಶಕ್ತಿ ಉತ್ಪಾದನೆ) ನಿಧಾನವಾಗುತ್ತದೆ. ಸಕ್ಕರೆ ಪದಾರ್ಥ ತಿನ್ನುವ ಕಡುಬಯಕೆ ಹೆಚ್ಚಾಗುತ್ತದೆ. ದೇಹದಲ್ಲಿ ಶಕ್ತಿಯ ಕೊರತೆ ಉಂಟಾಗುತ್ತದೆ. ಅಕ್ಕಿ, ಪಾಸ್ಟಾ, ಬ್ರೆಡ್ ಸೇವನೆಯ ಬಯಕೆ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ತೂಕ ಸಮಸ್ಯೆ ತಂದೊಡ್ಡುತ್ತದೆ.
ನಲವತ್ತು ವಯಸ್ಸಿನ ನಂತರ ನಿಮ್ಮನ್ನು ನೀವು ಫಿಟ್ ಆಗಿರಿಸಲು ಕೆಲವು ಹೆಲ್ದೀ ಲೈಫ್ ಸ್ಟೈಲ್ ಫಾಲೋ ಮಾಡಿ. ಅದರಲ್ಲಿ ಮೊದಲು ಸ್ನಾಯುಗಳು ಬಲಿಷ್ಠವಾಗಿರಲು ಕ್ಯಾಲ್ಸಿಯಂ ಸಮೃದ್ಧ ಪದಾರ್ಥ ಸೇವನೆ ಮಾಡಿ. ದೇಹದಲ್ಲಿ ಸರಿಯಾದ ಪ್ರಮಾಣದ ಕ್ಯಾಲ್ಸಿಯಂ ಹೊಂದುವುದು ಮುಖ್ಯ. ಇದು ಮೂಳೆ ನಷ್ಟ, ದೌರ್ಬಲ್ಯ ತಡೆಯುತ್ತದೆ. ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು, ಮಸೂರ, ಸೋಯಾಬೀನ್, ಕಪ್ಪು ಎಳ್ಳು ಇತ್ಯಾದಿ ಸೇವಿಸಿ.
ಕಡಿಮೆ ಕೊಬ್ಬಿನಂಶ ಕಡಿಮೆ ಮತ್ತು ನಾರಿನಂಶ ಹೆಚ್ಚಿರುವ ಆಹಾರ ತಿನ್ನಿ. ಹೆಚ್ಚಿನ ಫೈಬರ್ ಆಹಾರ ಸೇವಿಸಿ. ಧಾನ್ಯ, ಬೇಳೆಕಾಳು, ಬೀನ್ಸ್, ಹಣ್ಣು, ತರಕಾರಿ, ಬೀಜ ಸೇವಿಸಿ. ಖನಿಜಗಳು ಮತ್ತು ವಿಟಮಿನ್ ಸಮೃದ್ಧ ಪದಾರ್ಥ ತಿನ್ನಿ. ಇದು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ತ್ವಚೆಯ ಅಂದ ಕಾಪಾಡುತ್ತದೆ. ಪ್ರೋಟೀನ್ ಭರಿತ ಆಹಾರ ತಿನ್ನಿ. ಇದು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ.
ದೈಹಿಕ ಚಟುವಟಿಕೆಯ ಮೇಲೆ ಹೆಚ್ಚು ಗಮನಹರಿಸಿ. ವಯಸ್ಸಾದಂತೆ ದೇಹವು ದುರ್ಬಲವಾಗುತ್ತದೆ. ಹೆಚ್ಚು ವಿಶ್ರಾಂತಿ ಬೇಕೆನ್ನಿಸುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಮತ್ತು ತೂಕ ಹೆಚ್ಚಾಗುವಿಕೆ ತಡೆಯಲು ಯೋಗ, ಧ್ಯಾನ, ವ್ಯಾಯಾಮ, ನೃತ್ಯ ಹೀಗೆ ವಿವಿಧ ಚಟುವಟಿಕೆಗಳ ಮೂಲಕ ದೇಹವನ್ನು ಸಕ್ರಿಯವಾಗಿರಿಸಿ. ಇದು ಚಯಾಪಚಯ ಹೆಚ್ಚಿಸುತ್ತದೆ. ಒಟ್ಟಾರೆ ದೇಹವು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.