ವಯಸ್ಕರು ಮತ್ತು ಮಕ್ಕಳಲ್ಲಿ ಸ್ಥೂಲಕಾಯ ಹೆಚ್ಚಾಗಲು ದೈಹಿಕ ಚಟುವಟಿಕೆಯ ಕೊರತೆ ಕಾರಣವಾಗಿದೆ. ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕೂರುವುದು, ದೀರ್ಘಕಾಲ ಕುಳಿತು ಮೊಬೈಲ್, ಟಿವಿ ನೋಡುವುದು ಯಾವುದೇ ದೈಹಿಕ ಚಟುವಟಿಕೆ ಇಲ್ಲದೇ ಇರುವುದು ತೂಕ ಹೆಚ್ಚಿಸುತ್ತದೆ. ಮಕ್ಕಳು ಹೆಚ್ಚು ಜಂಕ್ ಫುಡ್, ಚಿಪ್ಸ್, ಫಿಂಗರ್ ಚಿಪ್ಸ್, ಪಿಜ್ಜಾ ಸೇವಿಸುವುದು ತೂಕ ಹೆಚ್ಚಳಕ್ಕೆ ಕಾರಣವಾಗಿದೆ.
ಹೈಪೋಥೈರಾಯ್ಡಿಸಮ್ ಕೂಡ ತೂಕ ಹೆಚ್ಚಳಕ್ಕೆ ಕಾರಣ. ಥೈರಾಯ್ಡ್ ಮಟ್ಟವು ಕಡಿಮೆಯಾದರೆ ಚಯಾಪಚಯ ನಿಧಾನಗೊಳ್ಳುತ್ತದೆ. ನಂತರ ದೇಹದ ಕೊಬ್ಬು ನಿಧಾನವಾಗಿ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಇದು ತೂಕ ಹೆಚ್ಚಿಸುತ್ತದೆ. ಇನ್ನು ಕೆಲವು ಜೀನ್‌ಗಳು ಬೊಜ್ಜು ಮತ್ತು ಅಧಿಕ ತೂಕಕ್ಕೆ ಕಾರಣವಾಗಿವೆ. ಇದು ಜೀವನಶೈಲಿಯ ಆಯ್ಕೆಗಳ ಮೇಲೆ ಪ್ರಭಾವ ಬೀರುತ್ತದೆ. ಸ್ಥೂಲಕಾಯಕ್ಕೆ ಕಾರಣವಾಗುತ್ತದೆ.