ಚಳಿಗಾಲದ ವೇಳೆ ಅನೇಕ ಮಂದಿ ತಲೆ ಹೊಟ್ಟು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅನೇಕ ಬಾರಿ ತಲೆಹೊಟ್ಟು ಸಮಸ್ಯೆಯು ಜನರಿಗೆ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇದರಿಂದ ತುರಿಕೆ ಪ್ರಾರಂಭವಾಗುತ್ತದೆ ಮತ್ತು ಕೂದಲಿನಿಂದ ಬಿಳಿ ಪದರವು ಉದುರಿಹೋಗುತ್ತದೆ. ಅಲ್ಲದೇ ಹೊಟ್ಟು ಬಟ್ಟೆಯ ಮೇಲೆ ಹರಡುತ್ತದೆ. ಈ ಎಲ್ಲ ಕಾರಣಗಳು ಅನೇಕ ಬಾರಿ ನಿಮ್ಮನ್ನು ಇತರರ ಮುಂದೆ ಮುಜುಗರಕ್ಕೊಳಪಡಿಸಬಹುದು.
ತೆಂಗಿನೆಣ್ಣೆ ಮತ್ತು ಕರ್ಪೂರದ ಮಿಶ್ರಣವು ತಲೆಹೊಟ್ಟು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ ತೆಂಗಿನೆಣ್ಣೆ ಮತ್ತು ಕರ್ಪೂರವು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ತಲೆಹೊಟ್ಟು ಮತ್ತು ತುರಿಕೆಯನ್ನು ಕಡಿಮೆ ಮಾಡಲು ತೆಂಗಿನ ಎಣ್ಣೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡ ಸಮೃದ್ಧವಾಗಿದೆ.
ಒಣ ನೆತ್ತಿಯನ್ನು ಆರ್ಧ್ರಕಗೊಳಿಸಲು ಇದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಕರ್ಪೂರವನ್ನು ಕೂದಲಿನ ಆರೋಗ್ಯ ಮತ್ತು ತಲೆಹೊಟ್ಟಿನ ಮೇಲೆ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ತಲೆಹೊಟ್ಟು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಅಲ್ಲದೇ ಇದು ರಕ್ತ ಪರಿಚಲನೆಯನ್ನು ವೇಗಗೊಳಿಸುತ್ತದೆ. ಕೂದಲು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.
ಹೀಗೆ ಲೇಪಿಸಬೇಕು: ಕೊಬ್ಬರಿ ಮತ್ತು ಕರ್ಪೂರದ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಬೇಕು. ಕರ್ಪೂರ ಕೊಬ್ಬರಿ ಎಣ್ಣೆಯನ್ನು ಹಚ್ಚಿದ ನಂತರ ರಾತ್ರಿಯಿಡೀ ಹಾಗೆಯೇ ಬಿಡಿ. ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಿದ ನಂತರ ಬೆಳಗ್ಗೆ ಅಥವಾ ಒಂದು ಗಂಟೆಯ ನಂತರ ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)