Weight Loss: ನೀವು ಸ್ಲಿಮ್​ ಆ್ಯಂಡ್​ ಫಿಟ್​ ಆಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ!

ನಿಮಗೆ ಜಿಮ್​ಗೆ ಹೋಗಲು ಅಥವಾ ಡಯಟ್ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ದಿನಚರಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಸಣ್ಣ ನಿಯಮಗಳನ್ನು ನೀವು ಶ್ರದ್ಧೆಯಿಂದ ಪಾಲಿಸಬೇಕು. ಇದರಿಂದ ನಿಮ್ಮ ತೂಕವು ನಿಯಂತ್ರಣಕ್ಕೆ ಬರುವುದನ್ನು ನೀವು ಕಾಣಬಹುದು.

First published:

  • 17

    Weight Loss: ನೀವು ಸ್ಲಿಮ್​ ಆ್ಯಂಡ್​ ಫಿಟ್​ ಆಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಮೊದಲೆಲ್ಲಾ ತೂಕ ಹೆಚ್ಚಳವನ್ನು ಒಂದು ಕಾಯಿಲೆ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಆದರೆ ಬದಲಾಗುತ್ತಿರುವ ವಾತಾವರಣದಲ್ಲಿ ಬೊಜ್ಜು ಮತ್ತು ಹೊಟ್ಟೆಯ ಕೊಬ್ಬು ದೊಡ್ಡ ಕಾಯಿಲೆಯ ರೂಪವನ್ನು ಪಡೆದುಕೊಳ್ಳುತ್ತಿದೆ. ಸ್ಥೂಲಕಾಯತೆಯು ಇಂದಿನ ಯುಗದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹಾಗಾಗಿ ಜನರು ಜಿಮ್ಗೆ ಹೋಗುತ್ತಿದ್ದಾರೆ, ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಮತ್ತು ಕಠಿಣ ಆಹಾರಕ್ರಮವನ್ನು ಅನುಸರಿಸುತ್ತಿದ್ದಾರೆ. ಹೀಗಿದ್ದರೂ ಸ್ಥೂಲಕಾಯತೆ ಕಡಿಮೆಯಾಗುತ್ತಿಲ್ಲ. ಸ್ಥೂಲಕಾಯತೆಯಿಂದ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ. ಜೊತೆಗೆ ಅನೇಕ ಮಾರಣಾಂತಿಕ ಕಾಯಿಲೆಗಳನ್ನು ಆಹ್ವಾನಿಸುತ್ತದೆ.

    MORE
    GALLERIES

  • 27

    Weight Loss: ನೀವು ಸ್ಲಿಮ್​ ಆ್ಯಂಡ್​ ಫಿಟ್​ ಆಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ನಿಮಗೆ ಜಿಮ್ಗೆ ಹೋಗಲು ಅಥವಾ ಡಯಟ್ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ದಿನಚರಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಸಣ್ಣ ನಿಯಮಗಳನ್ನು ನೀವು ಶ್ರದ್ಧೆಯಿಂದ ಪಾಲಿಸಬೇಕು. ಇದರಿಂದ ನಿಮ್ಮ ತೂಕವು ನಿಯಂತ್ರಣಕ್ಕೆ ಬರುವುದನ್ನು ನೀವು ಕಾಣಬಹುದು.

    MORE
    GALLERIES

  • 37

    Weight Loss: ನೀವು ಸ್ಲಿಮ್​ ಆ್ಯಂಡ್​ ಫಿಟ್​ ಆಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಹೆಚ್ಚಿಗೆ ನೀರು ಕುಡಿಯಿರಿ: ನೀವು ಪ್ರತಿದಿನ ನೀರು ಕುಡಿಯುತ್ತಿರಬೇಕು. ಅದರಲ್ಲಿಯೂ ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ದಿನಕ್ಕೆ ಕನಿಷ್ಠ ಎಂಟು ಲೋಟ ನೀರನ್ನಾದರೂ ಕುಡಿಯಬೇಕು. ಸಾಕಷ್ಟು ನೀರು ಕುಡಿಯುವುದು ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ ಎಂದು ಸಾಬೀತುಪಡಿಸುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿರುತ್ತದೆ. ಬೇಸಿಗೆಯಲ್ಲಿ ನಿರ್ಜಲೀಕರಣವು ಬೇಗನೆ ಸಂಭವಿಸುತ್ತದೆ ಮತ್ತು ಅದಕ್ಕಾಗಿಯೇ ನೀವು ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ಇದರಿಂದ ನೀವು ಬೇಗ ಸಣ್ಣ ಆಗುತ್ತೀರಾ.

    MORE
    GALLERIES

  • 47

    Weight Loss: ನೀವು ಸ್ಲಿಮ್​ ಆ್ಯಂಡ್​ ಫಿಟ್​ ಆಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಬೆಳಗಿನ ಉಪಾಹಾರವನ್ನು ತಿನ್ನಬೇಕು: ದಿನದ ಶಕ್ತಿಗೆ ಬೆಳಗಿನ ಉಪಾಹಾರ ಬಹಳ ಮುಖ್ಯ. ಅನೇಕ ಜನರು ತುಂಬಾ ಬ್ಯುಸಿಯಾಗಿರುತ್ತಾರೆ. ಹಾಗಾಗಿ ಅವಸರದಲ್ಲಿ ಉಪಹಾರವನ್ನು ಮರೆತುಬಿಡುತ್ತಾರೆ. ಬರೀ ಚಹಾ ಕುಡಿದು ಹೊರಡುತ್ತಾರೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಬೆಳಗಿನ ಉಪಾಹಾರವನ್ನು ಅಪ್ಪಿತಪ್ಪಿಯೂ ಬಿಟ್ಟು ಬಿಡಬಾರದು. ಬೆಳಗಿನ ಉಪಾಹಾರವು ಇಡೀ ದಿನಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿಸಿರುತ್ತದೆ. ನೀವು ಇತರ ಆಹಾರ ಪದಾರ್ಥಗಳತ್ತ ಗಮನ ಹರಿಸುವುದಿಲ್ಲ. ನೀವು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಲು ಬಯಸಿದರೆ, ಬೆಳಗಿನ ಉಪಾಹಾರ ಮಾತ್ರವಲ್ಲದೆ ಸಮಯಕ್ಕೆ ಸರಿಯಾಗಿ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಮಾಡಿ. ಇದರಿಂದ ನಿಮ್ಮ ಬೊಜ್ಜು ಬೇಗ ಕಡಿಮೆಯಾಗುತ್ತದೆ.

    MORE
    GALLERIES

  • 57

    Weight Loss: ನೀವು ಸ್ಲಿಮ್​ ಆ್ಯಂಡ್​ ಫಿಟ್​ ಆಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಜಂಕ್ ಫುಡ್ ತ್ಯಜಿಸಿ: ಜಂಕ್ ಫುಡ್ಗಳು ನಿಮ್ಮ ದೇಹವನ್ನು ಜಂಕ್ ಮಾಡುತ್ತದೆ. ಹಾಗಾಗಿ ಪಿಜ್ಜಾ ಬರ್ಗರ್, ಚಿಪ್ಸ್, ಚಾಕೊಲೇಟ್, ಬಿಸ್ಕತ್ತುಗಳು, ಬೇಕರಿ ಉತ್ಪನ್ನಗಳು ಇತ್ಯಾದಿಗಳನ್ನು ತಿನ್ನಬೇಡಿ. ಜಂಕ್ ಫುಡ್ ಮತ್ತು ತಂಪು ಪಾನೀಯಗಳು ಇತ್ಯಾದಿಗಳಲ್ಲಿ ತುಂಬಾ ಕ್ಯಾಲೋರಿಗಳಿವೆ. ಅದು ನಿಮ್ಮ ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ನೀವು ಆರೋಗ್ಯಕರ ಆಹಾರದತ್ತ ಗಮನ ಹರಿಸಿದರೆ ತೂಕವನ್ನು ಕಳೆದುಕೊಳ್ಳುವುದು ಸುಲಭ.

    MORE
    GALLERIES

  • 67

    Weight Loss: ನೀವು ಸ್ಲಿಮ್​ ಆ್ಯಂಡ್​ ಫಿಟ್​ ಆಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ಮದ್ಯಪಾನ ಬಿಟ್ಟುಬಿಡಿ: ಮದ್ಯಪಾನ ಹೇಗಿದ್ದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಮದ್ಯವನ್ನು ತ್ಯಜಿಸಿದರೆ, ಶೀಘ್ರದಲ್ಲೇ ಬೊಜ್ಜು ನಿಮ್ಮ ದೇಹವನ್ನು ಸೇರುವುದಿಲ್ಲ. ಆಲ್ಕೋಹಾಲ್ನಲ್ಲಿ ಬಹಳಷ್ಟು ಕ್ಯಾಲೋರಿಗಳು ನಿಮ್ಮ ತೂಕವನ್ನು ಹೆಚ್ಚಿಸುತ್ತಲೇ ಇರುತ್ತವೆ. ಹಾಗಾಗಿ ನೀವು ಆಲ್ಕೋಹಾಲ್ ಮತ್ತು ಇತರ ಅನಾರೋಗ್ಯಕರ ಪಾನೀಯಗಳಿಂದ ದೂರವಿರಬೇಕು.

    MORE
    GALLERIES

  • 77

    Weight Loss: ನೀವು ಸ್ಲಿಮ್​ ಆ್ಯಂಡ್​ ಫಿಟ್​ ಆಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್​ ಫಾಲೋ ಮಾಡಿ!

    ವ್ಯಾಯಾಮ ಮಾಡಿ: ನೀವು ವರ್ಕೌಟ್ಗಳನ್ನು ಮಾಡದಿದ್ದರೆ, ಇಂದಿನಿಂದಲೇ ಮಾಡಲು ಪ್ರಾರಂಭಿಸಿ. ನಿಮ್ಮ ತೂಕವನ್ನು ನಿಯಂತ್ರಿಸಲು ನೀವು ದಿನಕ್ಕೆ ಕನಿಷ್ಠ ಒಂದು ಗಂಟೆ ವ್ಯಾಯಾಮ ಮಾಡಬೇಕು. ತೂಕವನ್ನು ನಿಯಂತ್ರಿಸಲು ದೈಹಿಕ ಚಟುವಟಿಕೆ ಬಹಳ ಮುಖ್ಯ. ದೈನಂದಿನ ವ್ಯಾಯಾಮವು ನಿಮ್ಮ ಕ್ಯಾಲೋರಿಗಳನ್ನು ಸುಡುತ್ತದೆ ಮತ್ತು ನೀವು ಫಿಟ್ ಆಗಿರಲು ಸಹಾಯ ಮಾಡುತ್ತದೆ. ನಿಮಗೆ ಸಮಯದ ಕೊರತೆಯಿದ್ದರೆ, ನೀವು ಓಟ, ಜಾಗಿಂಗ್, ವಾಕಿಂಗ್, ಸ್ಕಿಪ್ಪಿಂಗ್, ಮೆಟ್ಟಿಲು ಹತ್ತುವುದು ಮುಂತಾದ ಸಾಮಾನ್ಯ ವ್ಯಾಯಾಮಗಳನ್ನು ಸಹ ಮಾಡಬಹುದು.

    MORE
    GALLERIES