ನೆನೆಸಿದ ಖರ್ಜೂರ ಸೇವನೆಯು ನಿಮಗೆ ಜೀರ್ಣಿಸಿಕೊಳ್ಳಲು ಸಹಕಾರಿ. ಇದು ಸಾಕಷ್ಟು ಆರೋಗ್ಯ ಲಾಭ ನೀಡುತ್ತದೆ. ಕಬ್ಬಿಣ, ಸತು, ಫೈಬರ್, ಕಾರ್ಬೋಹೈಡ್ರೇಟ್ಗಳು, ವಿಟಮಿನ್ ಹಾಗೂ ಇತರೆ ಪೋಷಕಾಂಶ ಸಮೃದ್ಧ ಖರ್ಜೂರವು ರೋಗ ನಿರೋಧಕ ಶಕ್ತಿ ವರ್ಧಕವಾಗಿದೆ. ಫ್ಲೇವನಾಯ್ಡ್‌ಗಳು, ಕ್ಯಾರೊಟಿನಾಯ್ಡ್ಗಳು ಮತ್ತು ಫೀನಾಲಿಕ್ ಆಮ್ಲ ಇದರಲ್ಲಿದೆ.