Actor Shaam: ಚೆನ್ನೈನಲ್ಲಿ ಖ್ಯಾತ ನಟ ಶಾಮ್ ಅರೆಸ್ಟ್..!
actor Shaam: ರಮ್ಯಾ-ರಕ್ಷಿತಾ ಜೋಡಿ ಜೊತೆಯಾಗಿ ಕಾಣಿಸಿಕೊಂಡ ತನನಂ ತನನಂ ಚಿತ್ರದ ಮೂಲಕ ಶಾಮ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದರ ಬಳಿಕ ಅರ್ಜುನ್ ಸರ್ಜಾ ಅಭಿನಯದ ಗೇಮ್ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು
ಲಾಕ್ಡೌನ್ ನಿಯಮ ಮೀರಿ ಗುಂಪು ಸೇರಿಕೊಂಡು ಜೂಜಾಟ ನಡೆಸುತ್ತಿದ್ದ ಬಹುಭಾಷಾ ನಟ ಶಾಮ್ ಸೇರಿದಂತೆ 12 ಮಂದಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
2/ 9
ಇಂದು ನುಂಗಮ್ಬಕಮ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಶಾಮ್ ಅಲ್ಲದೆ, ಚಿತ್ರರಂಗದ ಕೆಲವು ಕಲಾವಿದರು ಸೇರಿ ಜೂಜಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಿಢೀರ್ ದಾಳಿ ನಡೆಸಿ ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.
3/ 9
ಒಂದು ಮೂಲದ ಪ್ರಕಾರ ಜೂಜಾಟದಲ್ಲಿ ಕಾಲಿವುಡ್ನ ಖ್ಯಾತನಾಮರೂ ಕೂಡ ಇದ್ದು, ನಟರೊಬ್ಬರು ಲಕ್ಷಾಂತರ ರೂ ಕಳೆದುಕೊಂಡಿದ್ದಾರಂತೆ. ಇದೇ ವಿಷಯವಾಗಿ ಜೂಜಾಡುತ್ತಿರುವ ವಿಷಯ ಬಹಿರಂಗವಾಗಿದೆ ಎನ್ನಲಾಗಿದೆ.
4/ 9
ಇನ್ನು ಈ ಜೂಜಾಟಕ್ಕೆ ಹಣದ ರೂಪದಲ್ಲಿ ಟೋಕನ್ ಗಳನ್ನು ಬಳಸಲಾಗಿತ್ತು. ಹೀಗಾಗಿ ಪ್ರತಿ ಟೋಕನ್ಗೆ ಎಷ್ಟು ಮೌಲ್ಯವಿಡಲಾಗಿದೆ ಎಂಬುದು ವಿಚಾರಣೆ ಬಳಿಕ ಬಹಿರಂಗವಾಗಲಿದೆ.
5/ 9
ಲಕ್ಷಾಂತರ ಮೌಲ್ಯದ ಜೂಜಾಟ ನಡೆದಿರುವ ಸಾಧ್ಯತೆಯಿದ್ದು, ಹೀಗಾಗಿ ಟೋಕನ್ಗಳನ್ನು ಬಳಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಚಿತ್ರರಂಗದಲ್ಲಿ ಪೊಲೀಸ್ ರೋಲ್ಗಳ ಮೂಲಕ ಒಂದಷ್ಟು ಹೆಸರುಗಳಿಸಿದ್ದ ನಟ ಶಾಮ್ ಇದೀಗ ಜೂಜಾಟದೊಂದಿಗೆ ಸುದ್ದಿಯಾಗಿರುವುದು ವಿಪರ್ಯಾಸ.
6/ 9
ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಶಾಮ್, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಇನ್ನು ಕನ್ನಡದಲ್ಲಿ ಕಾಲಿವುಡ್ ನಟ ನಾಲ್ಕು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
7/ 9
ರಮ್ಯಾ-ರಕ್ಷಿತಾ ಜೋಡಿ ಜೊತೆಯಾಗಿ ಕಾಣಿಸಿಕೊಂಡ ತನನಂ ತನನಂ ಚಿತ್ರದ ಮೂಲಕ ಶಾಮ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದರ ಬಳಿಕ ಅರ್ಜುನ್ ಸರ್ಜಾ ಅಭಿನಯದ ಗೇಮ್ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು.
8/ 9
ಹಾಗೆಯೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದಲ್ಲಿ ಶಾಮ್ ನೆಗೆಟಿವ್ ರೋಲ್ನಲ್ಲಿ ಅಬ್ಬರಿಸಿದ್ದರು. ಸದ್ಯ ಯುಎ ಹೆಸರಿನ ಕನ್ನಡ ಚಿತ್ರದಲ್ಲೂ ಶಾಮ್ ಬಣ್ಣ ಹಚ್ಚುತ್ತಿದ್ದಾರೆ.