ಸಾಮಾನ್ಯವಾಗಿ ಮನೆಯಲ್ಲೊಂದು ಕಾಟಕೊಡಬಲ್ಲ ಪ್ರಾಣಿ ಇದೆ ಎಂದರೆ ಅದು ಇಲಿ. ಎಷ್ಟೇ ಮದ್ದು ಮಾಡಿದ್ರೂ ಒಂದಾದರು ಇಲಿ ಮನೆಯಲ್ಲಿ ಇದ್ದೇ ಇರುತ್ತದೆ. ಆದರೆ ಇದು ಬಂದ್ರೆ ಸಾಕಾ, ಬಂದು ಪುಸ್ತಕ, ಬಟ್ಟೆ, ತರಕಾರಿ ಹೀಗೆ ಹಲವಾರು ವಸ್ತುಗಳನ್ನು ಹಾಳು ಮಾಡಿಬಿಡುತ್ತದೆ. ಆದರೆ ಈ ಸಿಂಪಲ್ ಟ್ರಿಕ್ಸ್ ಅನ್ನು ಫಾಲೋ ಮಾಡಿದ್ರೆ ನಿಮ್ಮ ಮನೆಗೆ ಇನ್ಯಾವತ್ತೂ ಇಲಿಗಳ ಕಾಟನೇ ಇರಲ್ಲ.
ಈರುಳ್ಳಿ: ಇನ್ನು ಬೆಳ್ಳುಳ್ಳಿಯಂತೆ ಈರುಳ್ಳಿ ವಾಸನೆ ಸಹ ಇಲಿಗಳಿಗೆ ಆಗುವುದಿಲ್ಲ. ಇದರಿಂದ ಇಲಿಗಳು ಬಹಳಷ್ಟು ಕಿರಿಕಿರಿಯಾಗುತ್ತದೆ. ಆದ್ದರಿಂದ ನೀವು ಇಲಿಗಳನ್ನು ಮನೆಯಿಂದ ಓಡಿಸಲು ಈರುಳ್ಳಿ ಸಿಪ್ಪೆ ಅಥವಾ ಕತ್ತರಿಸಿದ ಈರುಳ್ಳಿ ಬಳಸಬಹುದು. ಇದಕ್ಕಾಗಿ ಇಲಿಗಳು ಮನೆಯಲ್ಲಿ ಎಲ್ಲೆಲ್ಲಿ ಓಡಾಡುತ್ತಿವೆಯೋ ಅಲ್ಲೆಲ್ಲಾ ಈರುಳ್ಳಿಯನ್ನು ಇಡಿ. ಇದರಿಂದ ನಿಮ್ಮ ಮನೆಯಿಂದ ಇಲಿಗಳನ್ನು ಓಡಿಸಬಹುದು.