ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ಜೀವನದಲ್ಲಿ ಒಂದು ಹಂತದಲ್ಲಿ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಕೆಲವೊಮ್ಮೆ ಪ್ರೀತಿಯಲ್ಲಿ ಮುಳುಗಿ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಜೊತೆಗೆ ತಪ್ಪಾದವರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅದಕ್ಕಿಂತ ಹೆಚ್ಚಾಗಿ ಕೆಲವರು ತಾವು ಈಗಾಗಲೇ ಮದುವೆಯಾಗಿದ್ದೇವೆ ಎಂಬ ಸತ್ಯವನ್ನು ಮುಚ್ಚಿಟ್ಟು ಪ್ರೀತಿ ಮಾಡುತ್ತಾರೆ. ಈ ವಂಚನೆಯ ಜಾಲದಲ್ಲಿ ಸಿಕ್ಕಿಹಾಕಿಕೊಂಡಾಗ ನಮಗೆ ತುಂಬಾ ನಿರಾಶೆಯಾಗುತ್ತದೆ ಮತ್ತು ಒಂದಲ್ಲಾ ಒಂದು ದಿನ ಸತ್ಯ ಹೊರಬರುತ್ತದೆ.
ಕೆಲವು ಸಮಯಗಳಲ್ಲಿ ಕಾರ್ಯನಿರತ: ನೀವು ಬಯಸಿದ ಸಮಯದಲ್ಲಿ ನಿಮ್ಮ ಪ್ರೇಮಿಯನ್ನು ಭೇಟಿ ಮಾಡಲು ಅಥವಾ ಮಾತನಾಡಲು ಸಾಧ್ಯವಾಗದೇ ಇರುವುದು. ಅವರು ವಾರದ ಕೆಲವು ದಿನಗಳಲ್ಲಿ ಮಾತ್ರ ನಿಮ್ಮನ್ನು ಭೇಟಿಯಾಗಲು ಸಮಯವನ್ನು ಮಾಡಿಕೊಳ್ಳುತ್ತಾರೆ. ಇತರ ಸಮಯದಲ್ಲಿ ಅವರು ಏನು ಮಾಡುತ್ತಾರೆ ಎಂದು ನೀವು ಯೋಚಿಸುತ್ತಿದ್ದರೆ ಆಶ್ಚರ್ಯ ಪಡುತ್ತೀರಾ. ಏಕೆಂದರೆ ಅವರು ಹೆಚ್ಚಾಗಿ, ತಮ್ಮ ನಿಜವಾದ ಹೆಂಡತಿಯೊಂದಿಗೆ ಇರುತ್ತಾರೆ.
ನಿಮ್ಮನ್ನು ಮನೆಗೆ ಆಹ್ವಾನಿಸುವುದಿಲ್ಲ: ಸಾಮಾನ್ಯವಾಗಿ ಯಾವುದೇ ಗೆಳೆಯ ನಿಮ್ಮನ್ನು ಇದ್ದಕ್ಕಿದ್ದಂತೆ ಮನೆಗೆ ಕರೆದುಕೊಂಡು ಹೋಗುವುದಿಲ್ಲ. ಆದರೆ ಕೆಲವು ಹಂತದಲ್ಲಿ ಅವರು ನಿಮ್ಮನ್ನು ಮನೆಯವರಿಗೆ ಪರಿಚಯಿಸಲು ಪ್ರಯತ್ನಿಸಬೇಕು. ಇದಕ್ಕೆ ವ್ಯತಿರಿಕ್ತವಾಗಿ, ಕುಟುಂಬ ಸಮಾರಂಭಗಳಿಗೆ ಕರೆದುಕೊಂಡು ಹೋಗಲು ತಪ್ಪಿಸಿದರೇ, ಸಾರ್ವಜನಿಕ ಸ್ಥಳಗಳಿಗೆ ಹೋದಾಗ ಸ್ನೇಹಿತರು ಮತ್ತು ಸಂಬಂಧಿಕರು ನೋಡುತ್ತಾರೆ ಎಂಬ ಭಯದಿಂದ ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬಹುದು.