ನಾಯಿಗಳು ಮನುಷ್ಯರ ಅತ್ಯುತ್ತಮ ಒಡನಾಡಿಗಳು. ಕೆಲ ಮಂದಿ ಸಾಕು ಪ್ರಾಣಿಗಳನ್ನು ಸಾಕಲು ಇಷ್ಟಪಡುವುದಿಲ್ಲ. ಮನುಷ್ಯರಿಗಿಂತ ನಾಯಿಗೆ ನಿಯತ್ತು ಜಾಸ್ತಿ. ನಾಯಿಗಳು ಮನುಷ್ಯರಿಗೆ ಹೆಚ್ಚು ಪ್ರೀತಿ, ವಾತ್ಸಲ್ಯ ಮತ್ತು ರಕ್ಷಣೆಯನ್ನು ನೀಡುತ್ತವೆ. ಹಾಗಾಗಿ, ವೃದ್ಧರು ನಾಯಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದು ಒಡನಾಟಕ್ಕಾಗಿ ಮಾತ್ರವಲ್ಲದೆ, ರಕ್ಷಣೆಗಾಗಿಯೂ ಸಹ. ಹಾಗಾದ್ರೆ ವಯಸ್ಸಾದವರು ನಾಯಿಗಳನ್ನು ಹೊಂದಲು ಬಯಸಿದರೆ, ಅವರು ಈ ಕೆಳಗೆ ನೀಡಲಾಗಿರುವ ತಳಿಗಳನ್ನು ಆಯ್ಕೆ ಮಾಡಬಹುದು.