ದೈನಂದಿನ ಜೀವನದಲ್ಲಿ ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಾದರೆ, ಮೊದಲಿಗೆ ನೀವು ಅವುಗಳನ್ನು ನಿಮ್ಮ ಆಪ್ತರ ಬಳಿ ಮುಕ್ತವಾಗಿ ಹೇಳಿಕೊಳ್ಳಬೇಕು. ಅನಂತರವಷ್ಟೆ ನಿಮ್ಮ ಅಗತ್ಯತೆಗಳನ್ನು ನೀವು ಪೂರೈಸಿಕೊಳ್ಳಲು ಸಾಧ್ಯವಾಗಬಹುದು. ಮದುವೆಗೂ ಮುಂಚೆ ಮಕ್ಕಳು ತಮ್ಮ ಅಗತ್ಯತೆಗಳನ್ನು ಅವರ ಪೋಷಕರ ಬಳಿ ಹೇಳಿಕೊಳ್ಳುವ ಹಾಗೆ ಮದುವೆಯಾದ ನಂತರದಲ್ಲಿ ತಮ್ಮ ಸಂಗಾತಿಯ ಮುಂದೆ ತಮ್ಮ ಅಗತ್ಯತೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲು ಎಷ್ಟೋ ಜನರು ಹಿಂಜರಿಯುತ್ತಾರೆ.
ಆದ್ದರಿಂದ, ನಿಮ್ಮ ಅಗತ್ಯತೆಗಳನ್ನು ನಿಮ್ಮ ಸಂಗಾತಿಯ ಎದುರಿಗೆ ಮುಕ್ತವಾಗಿ ಮಾತಾಡಲು ನೀವು ಹೆಣಗಾಡುತ್ತಿದ್ದರೆ, ಅದಕ್ಕೆ ಏನು ಕಾರಣಗಳು ಇರಬಹುದು ಅಂತ ಮೊದಲು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ" ಎಂದು ಪರವಾನಗಿ ಪಡೆದ ಚಿಕಿತ್ಸಕ ಮತ್ತು ಸಂಬಂಧ ತಜ್ಞ ಜೋರ್ಡಾನ್ ಗ್ರೀನ್ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಮಾಡಿಕೊಂಡ ಪೋಸ್ಟ್ ನಲ್ಲಿ ಹೇಳುತ್ತಾರೆ.