ಮನೆಯ ಕ್ಲೀನಿಂಗ್ ವಿಷಯಕ್ಕೆ ಬಂದಾಗ ಗೃಹಿಣಿಯರು ತುಂಬಾನೇ ತಲೆ ಕೆಡಿಸಿಕೊಳ್ಳುತ್ತಾರೆ. ಕೆಲವೊಂದು ವಸ್ತುಗಳ ಸ್ವಚ್ಛತೆಗೆ ದುಬಾರಿ ಕ್ಲೀನಿಂಗ್ ಏಜೆಂಟ್ ಗಳನ್ನು ಬಳಸಿದ್ರೆ, ಇನ್ನೂ ಕೆಲವು ವಸ್ತುಗಳ ಸ್ವಚ್ಛತೆಗೆ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಆದರೆ ಕೆಲವೊಂದು ವಸ್ತುಗಳ ಕ್ಲೀನಿಂಗ್ ಗೆ ಮನೆಯಲ್ಲಿಯೇ ಸಿಗುವ ವಸ್ತುಗಳು ಸಾಕು. ಟೂತ್ ಪೇಸ್ಟ್ ನಿಂದ ಮನೆಯ ಯಾವೆಲ್ಲಾ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ಎಂದು ಇಲ್ಲಿ ತಿಳಿಸಲಾಗಿದೆ.
1) ಒಡವೆಗಳನ್ನು ಹೊಳೆಯುವಂತೆ ಮಾಡಿ: ಚಿನ್ನದ ಆಭರಣಗಳನ್ನು ಹೊಳೆಯುವಂತೆ ಮಾಡಲು ನೀವು ಟೂತ್ ಪೇಸ್ಟ್ ಅನ್ನು ಬಳಸಬಹುದು. ಇದಕ್ಕಾಗಿ ಟೂತ್ ಪೇಸ್ಟ್ ನಲ್ಲಿ ನೀರು ಬೆರೆಸಿ ದ್ರಾವಣ ತಯಾರಿಸಿ. ಇದರಲ್ಲಿ ಒಡವೆಗಳನ್ನು ನೆನಸಿ. ನಂತರ ಮೃದುವಾದ ಬ್ರಷ್ ಅಥವಾ ಸ್ಕ್ರಬ್ ನಿಂದ ಉಜ್ಜುವ ಮೂಲಕ ಆಭರಣವನ್ನು ಸ್ವಚ್ಛಗೊಳಿಸಿ. ಇದು ನಿಮ್ಮ ಆಭರಣಗಳನ್ನು ಹೊಚ್ಚಹೊಸವಾಗಿ ಕಾಣುವಂತೆ ಮಾಡುತ್ತದೆ.
2) ಟ್ರಾಲಿ ಬ್ಯಾಗ್ ಕ್ಲೀನ್ ಮಾಡಿ: ಟ್ರಾಲಿ ಬ್ಯಾಗ್ ಮೇಲಿನ ಕಲೆಯನ್ನು ಸ್ವಚ್ಛಗೊಳಿಸಲು ಟೂತ್ ಪೇಸ್ಟ್ ನ ಸಹಾಯವನ್ನೂ ತೆಗೆದುಕೊಳ್ಳಬಹುದು. ಇದಕ್ಕಾಗಿ ಅರ್ಧ ಚಮಚ ಟೂತ್ ಪೇಸ್ಟ್ ಗೆ 1 ಚಮಚ ಅಡುಗೆ ಸೋಡಾ ಬೆರೆಸಿ ಟ್ರಾಲಿ ಬ್ಯಾಗ್ ಗೆ ಹಚ್ಚಿ. ನಂತರ ಸ್ವಚ್ಛವಾದ ಬಟ್ಟೆಯಿಂದ ಒರೆಸಿ ಬ್ಯಾಗ್ ಅನ್ನು ಕ್ಲೀನ್ ಮಾಡಿ. ಇದು ನಿಮ್ಮ ಟ್ರಾಲಿ ಬ್ಯಾಗ್ ಅನ್ನು ಹೊಸದಾಗಿ ಮತ್ತು ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ.
5) ನೀರಿನ ಟ್ಯಾಪ್ ಅನ್ನು ಸ್ವಚ್ಛಗೊಳಿಸಿ: ಟೂತ್ ಪೇಸ್ಟ್ ಮತ್ತು ಬಿಳಿ ವಿನೆಗರ್ ಬಳಸಿ, ನೀವು ಬಾತ್ರೂಮ್ ನಲ್ಲಿನ ಟ್ಯಾಪ್ ಅನ್ನು ಹೊಳೆಯುವಂತೆ ಮಾಡಬಹುದು. ಇದಕ್ಕಾಗಿ, ಟೂತ್ ಪೇಸ್ಟ್ ನಲ್ಲಿ ಬಿಳಿ ವಿನೆಗರ್ ಅನ್ನು ಮಿಶ್ರಣ ಮಾಡಿ ಮತ್ತು ಅದನ್ನು ಟ್ಯಾಪ್ ಮೇಲೆ ಹಚ್ಚಿ. ನಂತರ ಟ್ಯಾಪ್ ಅನ್ನು ಸ್ಕ್ರಬ್ ಮಾಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ಬಿಳಿ ವಿನೆಗರ್ ಬದಲಿಗೆ ನೀವು ನಿಂಬೆ ರಸವನ್ನು ಸಹ ಬಳಸಬಹುದು.
6) ಕನ್ನಡಿ ಹೊಳೆಯುವಂತೆ ಮಾಡುತ್ತೆ: ಮನೆಯ ಕನ್ನಡಿಗಳ ಮೇಲೆ ನೀರು ಅಥವಾ ಮಂಜಿನ ಗುರುತುಗಳು ಹೆಚ್ಚಾಗಿ ಬೀಳುತ್ತವೆ. ಈ ಕಾರಣದಿಂದಾಗಿ ಗಾಜು ಕೊಳಕು ಮತ್ತು ಮಬ್ಬಾಗಿ ಕಾಣುತ್ತದೆ. ಆಗ ನೀವು ಗಾಜನ್ನು ಸ್ವಚ್ಛಗೊಳಿಸಲು ಟೂತ್ ಪೇಸ್ಟ್ ಬಳಸಬಹುದು. ಇದಕ್ಕಾಗಿ, ಬಟ್ಟೆಯ ಮೇಲೆ ಟೂತ್ ಪೇಸ್ಟ್ ತೆಗೆದುಕೊಂಡು ಗಾಜನ್ನು ಉಜ್ಜಿ. ನಂತರ ಸ್ವಚ್ಛವಾದ ಬಟ್ಟೆಯಿಂದ ಕನ್ನಡಿಯನ್ನು ಒರೆಸಿ. ಇದು ನಿಮ್ಮ ಗಾಜು ಸುಲಭವಾಗಿ ಹೊಳೆಯುವಂತೆ ಮಾಡುತ್ತದೆ.