

ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳು ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಅದರಲ್ಲೂ ಕೆಲವರಿಗಂತು ಮೊಬೈಲ್ ಇಲ್ಲದಿದ್ದರೆ ಏನನ್ನೋ ಕಳೆದುಕೊಂಡ ಭಾವನೆ ಇರುತ್ತದೆ. ಹೀಗಾಗಿ ಬಿಡುವಿನ ವೇಳೆಯಲ್ಲೆಲ್ಲಾ ಮೊಬೈಲ್ ಮೇಲೆ ಕೈಯಾಡಿಸುತ್ತಿರುತ್ತಾರೆ. ಆದರೆ ಎಲ್ಲೆಂದರಲ್ಲಿ ಮೊಬೈಲ್ ಬಳಸುವುದರಿಂದ ಆಗುವ ದುಷ್ಫರಿಣಾಮಗಳು ಕೂಡ ಹೆಚ್ಚಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.


ಮೊಬೈಲ್ನಿಂದ ಹೆಚ್ಚು ಪ್ರಯೋಜನಗಳಿವೆ ಎಂಬುದು ನಿಜ. ಆದರೆ ಅದರ ಬಳಕೆಯು ಮಿತಿಯಲ್ಲಿದ್ದರೆ ಮಾತ್ರ. ಆದರೆ ಕೆಲ ಸ್ಥಳಗಳಲ್ಲಿ ಫೋನ್ ಬಳಸುವುದು ಹೆಚ್ಚು ಅಪಾಯಕಾರಿಯಾಗಿದೆ.


ದಿಂಬುಗಳ ಭಾಗಗಳಲ್ಲಿ - ನಿಮ್ಮಲ್ಲಿ ನಿದ್ರಾಹೀನತೆಯ ಸಮಸ್ಯೆ ಕಾಣಿಸಿಕೊಳ್ಳಲು ನಿಮ್ಮ ಫೋನ್ ಕೂಡ ಕಾರಣವಂತೆ. ಮಲಗುವಾಗ ದಿಂಬುಗಳ ಭಾಗದಲ್ಲಿ ಮೊಬೈಲ್ಗಳನ್ನು ಇಡುವುದರಿಂದ ನಿದ್ದೆಯು ಕ್ಷೀಣಿಸುತ್ತದೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ ಮೊಬೈಲ್ ನೆಟ್ವರ್ಕ್ನ ತರಂಗಗಳು. ಇದು ನಿಮ್ಮ ಮೆದುಳಿನ ಮೇಲೆ ಪ್ರಭಾವ ಬೀರುವುದಲ್ಲದೆ, ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ.


ವಾಶ್ರೂಮ್- ಟಾಯ್ಲೆಟ್ ಸೇರಿದಂತೆ ಎಲ್ಲ ರೀತಿಯ ವಾಶ್ರೂಮ್ಗಳಲ್ಲಿ ಮೊಬೈಲ್ ಬಳಸುವುದು ಉತ್ತಮವಲ್ಲ. ಇಂತಹ ಸ್ಥಳಗಳಲ್ಲಿ ರೋಗ ಹರಡುವ ಸೂಕ್ಷ್ಮಾಣು ಜೀವಿಗಳಿರುತ್ತದೆ. ಇದು ಫೋನ್ಗಳ ಮೇಲೆ ಹರಡಿಕೊಳ್ಳುತ್ತದೆ. ನೀವು ಮೊಬೈಲ್ನ್ನು ಬಳಸುತ್ತಾ ಆಹಾರ ಸೇವಿಸುವಾಗ ಇಲ್ಲ ಫೋನ್ ಬಳಸಿದ ಕೈಯಿಂದ ಆಹಾರ ತಿಂದರೆ ಕೀಟಾಣುಗಳು ಹೊಟ್ಟೆ ಸೇರುತ್ತದೆ. ಇದರಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.


ಮುಖದ ಸಮೀಪ- ಮೊಬೈಲ್ ಫೋನ್ಗಳನ್ನು ಬಳಸುವಾಗ ಸಾಧ್ಯವಾದಷ್ಟು ಹಿಯರ್ ಫೋನ್ಗಳನ್ನು ಬಳಸಿ. ಸಾಮಾನ್ಯವಾಗಿ ಹೆಚ್ಚಿನವರು ಕೆನ್ನೆಗೆ ಮೊಬೈಲ್ನ್ನು ಒತ್ತಿಕೊಂಡು ಮಾತನಾಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆದರೆ ಇದರಿಂದ ಚರ್ಮ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತದೆ. ಮೊಡವೆ ಸೇರಿದಂತೆ ತ್ವಚೆಯ ಅಲರ್ಜಿಗಳಿಗೂ ಮುಖದ ಸಮೀಪವಿಟ್ಟು ಮೊಬೈಲ್ ಬಳಸುವುದು ಕಾರಣವಾಗುತ್ತದೆ.


ಗ್ಲೊ ಕಂಪಾರ್ಟ್ಮೆಂಟ್- ವಾಹನಗಳ ಡ್ಯಾಶ್ ಬೋರ್ಡ್ನಲ್ಲಿ ಸಣ್ಣ ರೀತಿಯ ಕ್ಯಾಬಿನೆಟ್ಗಳಿರುತ್ತದೆ. ಇಲ್ಲಿ ಸಾಮಾನ್ಯವಾಗಿ ಕಾಗದ ಸೇರಿದಂತೆ ಸಣ್ಣ ಪುಟ್ಟ ವಸ್ತುಗಳನ್ನು ಇಡಲಾಗುತ್ತದೆ. ಆದರೆ ಇದೇ ಪ್ರದೇಶದಲ್ಲಿ ಮೊಬೈಲ್ಗಳನ್ನು ಇಡುವುದು ಸುರಕ್ಷಿತವಲ್ಲ. ಇಲ್ಲಿ ವಾಹನದಿಂದ ಬಿಡುಗಡೆಯಾಗುವ ಉಷ್ಣಾಂಶವು ಹೆಚ್ಚಾಗಿರುವುದರಿಂದ ಮೊಬೈಲ್ ಬ್ಯಾಟರಿ ಸ್ಪೋಟಿಸುವ ಸಾಧ್ಯತೆ ಹೆಚ್ಚಿರುತ್ತದೆ.