ನಮ್ಮ ದೇಹದಲ್ಲಿನ ಕ್ಯಾಲೊರಿಗಳನ್ನು ಅಧಿಕ ಪ್ರಮಾಣದ ಕರಗುವಂತೆ ಮಾಡಿ, ತೂಕ ಕಡಿಮೆ ಮಾಡುವಲ್ಲಿ ಸಕ್ರಿಯ ಚಯಾಪಚಯ ಕ್ರಿಯೆಯು ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಚಯಾಪಚಯ ಕ್ರಿಯೆಯು ನೀವು ಕರಗಿಸುವ ಕ್ಯಾಲೋರಿಗಳ ದರವನ್ನು ನಿರ್ಧರಿಸುತ್ತದೆ ಮತ್ತು ದೇಹದಲ್ಲಿನ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ನಮ್ಮ ಕೆಲವೊಂದು ಅಭ್ಯಾಸಗಳು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಅಂತಹ ಆರು ಅಭ್ಯಾಸಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
1. ಕಡಿಮೆ ತಿನ್ನುವುದು- ಕಡಿಮೆ ಕ್ಯಾಲೊರಿಗಳನ್ನು ಸೇವಿಸುವುದರಿಂದ ತೂಕ ಇಳಿಯುತ್ತದೆ ಎಂಬ ತಪ್ಪು ಕಲ್ಪನೆ ಬಹಳಷ್ಟು ಮಂದಿಯಲ್ಲಿದೆ. ಆದರೆ ಕ್ಯಾಲೊರಿ ಸೇವನೆ ಪ್ರಮಾಣವನ್ನು ಅತಿಯಾಗಿ ಸೀಮಿತಗೊಳಿಸುವುದರಿಂದ ಚಯಾಪಚಯ ಕ್ರಿಯೆಗೆ ತೊಂದರೆ ಉಂಟಾಗಬಹದು. ತೂಕ ಇಳಿಸಬೇಕೆಂದರೆ ಕ್ಯಾಲೊರಿ ಸೇವನೆ ಪ್ರಮಾಣ ಕಡಿಮೆ ಮಾಡಬೇಕು ಎನ್ನುವುದು ನಿಜವಾದರೂ, ಅತ್ಯಂತ ಕಡಿಮೆ ಕ್ಯಾಲೊರಿಗಳನ್ನು ತಿನ್ನುವುದು ಕೂಡ ನಿಮಗೆ ಉಲ್ಟಾ ಹೊಡೆಯಬಹುದು. ಇಂತಹ ಸಂದರ್ಭಗಳಲ್ಲಿ ದೇಹವು ಆಹಾರದ ಕೊರತೆಯನ್ನು ಗಮನಿಸಿ, ಕ್ಯಾಲೊರಿಗಳನ್ನು ಕರಗಿಸುವ ರೇಟ್ ಕಡಿಮೆ ಮಾಡುತ್ತದೆ.
2. ಜಡ ಜೀವನಶೈಲಿ -ಜಡ ಜೀವನ ಶೈಲಿ ನೀವು ಪ್ರತಿದಿನ ಕರಗಿಸುವ ಕ್ಯಾಲೊರಿಯ ಸಂಖ್ಯೆ ಇಳಿಮುಖವಾಗಲು ಕಾರಣ ಆಗಬಹುದು. ಕೊರೋನಾ ವೈರಸ್ ಸಾಂಕ್ರಮಿಕದ ಕಾರಣದಿಂದ ನಮ್ಮಲ್ಲಿ ಹೆಚ್ಚಿನವರು ಮನೆಯಲ್ಲೇ ಕೂತು ಕೆಲಸ ಮಾಡುತ್ತಿದ್ದೇವೆ. ಅದು ಚಯಾಪಚಯ ಕ್ರಿಯೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ನಿಲ್ಲುವುದು, ಸ್ವಚ್ಚ ಮಾಡುವುದು, ಮೆಟ್ಟಿಲು ಹತ್ತಿ ಇಳಿಯುವುದು, ಅಡುಗೆ ಮಾಡುವುದು ಇತ್ಯಾದಿ ಕ್ರಿಯೆಗಳು ಕ್ಯಾಲೊರಿ ಕರಗಿಸಲು ಸಹಾಯ ಮಾಡುತ್ತದೆ.
3. ಪ್ರೋಟೀನ್ ಸೇವಿಸದೆ ಇರುವುದು- ತೂಕ ಇಳಿಸಲು ಸಾಕಷ್ಟು ಪ್ರೋಟೀನ್ ಸೇವನೆ ಮಾಡುವುದು ಅತ್ಯಗತ್ಯ. ಪ್ರೋಟೀನ್ ನಿಮಗೆ ಬಹಳ ಸಮಯ ಹಸಿವಾಗದಂತೆ ತಡೆಯುತ್ತದೆ ಮತ್ತು ಕ್ಯಾಲೊರಿಗಳನ್ನು ಕರಗಿಸುವ ದರವನ್ನು ಹೆಚ್ಚಿಸುತ್ತದೆ. ನೀವು ಆಹಾರವನ್ನು ಜೀರ್ಣಿಸಿಕೊಂಡಾಗ ಚಯಾಪಚಯ ಕ್ರಿಯೆಯಲ್ಲಿ ಹೆಚ್ಚಳವಾಗುತ್ತದೆ , ಅದನ್ನು ಆಹಾರದ ಉಷ್ಣ ಪರಿಣಾಮ ಎಂದು ಕರೆಯಲಾಗುತ್ತದೆ. ಹಾಗಾಗಿ, ಪ್ರೊಟೀನಿನ ಉಷ್ಣ ಪರಿಣಾಮವು, ಕೊಬ್ಬು ಅಥವಾ ಕಾರ್ಬ್ಗಳಿಗಿಂತ ಅಧಿಕವಿರುತ್ತದೆ. ಕೇವಲ ಪ್ರೊಟೀನ್ ತಿನ್ನುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಶೇ. 20-30ರಷ್ಟು ಹೆಚ್ಚುತ್ತದೆ. ಆದರೆ ಕಾರ್ಬ್ನಲ್ಲಿ ಅದರ ಪ್ರಮಾಣ ಶೇಕಡಾ 5-10 ಮತ್ತು ಕೊಬ್ಬಿನಲ್ಲಿ ಶೇಕಡಾ 3ರಷ್ಟು ಮಾತ್ರ.
4. ಸಾಕಷ್ಟು ನಿದ್ದೆ ಮಾಡದಿರುವುದು- ಸಾಕಷ್ಟು ಪ್ರಮಾಣದ ನಿದ್ರೆ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಅಗತ್ಯ. ಕಡಿಮೆ ಅವಧಿಯ ನಿದ್ರೆ, ಹೃದಯದ ಕಾಯಿಲೆ, ಮಧುಮೇಹ ಮತ್ತು ಖಿನ್ನತೆಯಂತಹ ರೋಗಗಳ ಅಪಾಯ ಹೆಚ್ಚಿಸುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನಿದ್ರೆ ಮಾಡದೇ ಇರುವುದರಿಂದ ನಿಮ್ಮ ಚಯಾಪಚಯ ಕ್ರಿಯೆಗೆ ತೊಂದರೆ ಉಂಟಾಗಬಹುದು ಮತ್ತು ತೂಕ ಕೂಡ ಹೆಚ್ಚಬಹುದು. ಸರಿಯಾದ ಸಮಯಕ್ಕೆ ನಿದ್ರೆ ಮಾಡದಿರುವುದು ನಿಮ್ಮ ನಿದ್ರೆಯ ಚಕ್ರಕ್ಕೆ ಅಡ್ಡಿ ಉಂಟು ಮಾಡಬಹುದು ಮತ್ತು ನಿಮ್ಮ ದೇಹದ ಸಿರ್ಕಾಡಿಯನ್ ಲಯಕ್ಕೆ ತೊಂದರೆ ಉಂಟು ಮಾಡಬಹುದು.
5. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳ ಅಧಿಕ ಸೇವನೆ- ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು ಸಂಕೀರ್ಣ ಕಾರ್ಬೋಹೈಡ್ರೇಟ್ಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಅವು ಸುಲಭವಾಗಿ ಜೀರ್ಣವಾಗುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಕೆಗೆ ಕಾರಣವಾಗುತ್ತವೆ ಮತ್ತು ನಿಮ್ಮ ದೇಹವು ಅವುಗಳನ್ನು ಕರಗಿಸಲು ಕಡಿಮೆ ಶಕ್ತಿಯನ್ನು ಬಳಸುತ್ತದೆ.ಆದ್ದರಿಂದ ಹೆಚ್ಚು ಕಾರ್ಬ್ಗಳನ್ನು ತಿನ್ನುವುದು ದೇಹದ ಚಯಾಪಚಯ ಕ್ರಿಯೆಯನ್ನು ಕುಂಠಿತಗೊಳಿಸುತ್ತದೆ.