ಹೇರ್ ಡ್ರೈಯರ್ನ ಸಹಾಯವನ್ನು ತೆಗೆದುಕೊಳ್ಳಿ: ಅನೇಕ ಬಾರಿ ಒದ್ದೆಯಾದ ಬಟ್ಟೆ ಐರನ್ ಮಾಡುವುದರಿಂದ ಡ್ರೆಸ್ಗಳು ಸ್ವಲ್ಪ ಸುಕ್ಕು ಆಗುತ್ತದೆ. ಈ ಡ್ರೆಸ್ಗಳನ್ನು ತೊಟ್ಟರೆ ಲುಕ್ ಕೂಡ ಹಾಳಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಬಟ್ಟೆಯನ್ನು ಒಣಗಿಸಲು ನೀವು ಹೇರ್ ಡ್ರೈಯರ್ ಸಹಾಯವನ್ನು ತೆಗೆದುಕೊಳ್ಳಬಹುದು. ಅದಕ್ಕಾಗಿ ಬಟ್ಟೆಯ ಮೇಲೆ ನೀರನ್ನು ಸಿಂಪಡಿಸಿ, ನಂತರ ಬಟ್ಟೆಯ ಮೇಲೆ ಹೇರ್ ಡ್ರೈಯರ್ ಅನ್ನು ಬಳಸಿ. ಇದರೊಂದಿಗೆ ಬಟ್ಟೆಗಳು ಕೆಲವೇ ಸೆಕೆಂಡುಗಳಲ್ಲಿ ಸುಕ್ಕು ಮುಕ್ತವಾಗುತ್ತವೆ. (Image-Canva)
ಐರನ್ ಮಾಡುವ ಮಾರ್ಗ: ಕೆಲವೊಮ್ಮೆ ಬಟ್ಟೆಗಳನ್ನು ಐರನ್ ಮಾಡಲು ಸಾಕಷ್ಟು ಸಮಯ ಮತ್ತು ಶ್ರಮ ಬೇಕಾಗುತ್ತದೆ. ಅಲ್ಲದೇ ಸರಿಯಾಗಿ ಐರನ್ ಮಾಡದೇ ಇರುವುದು ಕೂಡ ಸುಕ್ಕುಗಳಿಗೆ ಕಾರಣವಾಗುತ್ತದೆ. ಹಾಗಾಗಿ ಮೊದಲನೇಯದಾಗಿ ಹಗುರವಾದ ಮತ್ತು ದಪ್ಪ ಬಟ್ಟೆಗಳನ್ನು ಪ್ರತ್ಯೇಕವಾಗಿ ಇರಿಸಿ. ಈಗ ಸಾಮಾನ್ಯ ಶಾಖದಲ್ಲಿ ಬಟ್ಟೆಗಳನ್ನು ಐರನ್ ಮಾಡಿ. ಆಗ ದಪ್ಪವಾದ ಕಾಟನ್ ಬಟ್ಟೆಗಳನ್ನು ಒತ್ತಿ ಐರನ್ ಮಾಡುವ ಅಗತ್ಯವಿರುವುದಿಲ್ಲ. (Image-Canva)
ಹ್ಯಾಂಗರ್ಗಳನ್ನು ಬಳಸಿ: ಬಟ್ಟೆಗಳನ್ನು ತೊಳೆದ ನಂತರ, ಸುಕ್ಕಾಗದಂತೆ ತಡೆಯಲು ನೀವು ಹ್ಯಾಂಗರ್ಗಳನ್ನು ಬಳಸಬಹುದು. ವಿಶೇಷವಾಗಿ ಭಾರವಾದ ಬಟ್ಟೆಗಳನ್ನು ತೊಳೆದ ನಂತರ ಮತ್ತು ವಾಷಿಂಗ್ ಮೆಷಿನ್ನಲ್ಲಿ ಶರ್ಟ್ ಮತ್ತು ಪ್ಯಾಂಟ್ಗಳನ್ನು ತೊಳೆದ ನಂತರ ಒಣಗಲು ಹ್ಯಾಂಗರ್ಗಳಲ್ಲಿ ನೇತುಹಾಕಿ. ಆಗ ಬಟ್ಟೆಗಳ ಮೇಲೆ ಹೆಚ್ಚಿನ ಸುಕ್ಕುಗಳು ಇರುವುದಿಲ್ಲ ಮತ್ತು ಇಸ್ತ್ರಿ ಮಾಡಲು ಹೆಚ್ಚು ಸಮಯ ಮತ್ತು ಶ್ರಮ ವ್ಯರ್ಥವಾಗುವುದಿಲ್ಲ. (Image-Canva)
ಲೇಸ್ ಬಟ್ಟೆಗಳನ್ನು ಐರನ್ ಮಾಡಲು ಸಲಹೆಗಳು: ಕೆಲವೊಮ್ಮೆ ಲೇಸ್ ಬಟ್ಟೆಗಳನ್ನು ಐರನ್ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಂತಹ ವೇಳೆ ಈ ಬಟ್ಟೆಗಳನ್ನುಐರನ್ ಮಾಡಲು, ವೃತ್ತಪತ್ರಿಕೆಯ ಹಾಳೆಯನ್ನು ತೆಗೆದುಕೊಂಡು ಅದರ ಮಧ್ಯದಲ್ಲಿ ಬಟ್ಟೆಯನ್ನು ಇರಿಸಿ. ಇದರ ನಂತರ, ಪ್ರೆಸ್ ಅನ್ನು ಮಧ್ಯಮಕ್ಕೆ ಹೊಂದಿಸುವ ಮೂಲಕ ಬಟ್ಟೆಯನ್ನು ಐರನ್ಗೊಳಿಸಿ. ಆಗ ಐರನ್ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲ ಮತ್ತು ಬಟ್ಟೆಯನ್ನು ಸಹ ಚೆನ್ನಾಗಿ ಐರನ್ ಮಾಡಬಹುದು. (Image-Canva)