Kitchen Hacks: ಹಸಿ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಉರಿಯುತ್ತಿದ್ದರೆ ಈ ಸಿಂಪಲ್ ಟಿಪ್ಸ್ ಪಾಲಿಸಿ

Chili Cutting Tips: ಹಸಿ ಮೆಣಸಿನಕಾಯಿ ಇಲ್ಲದೆ ಬಹುತೇಕ ಭಾರತೀಯ ಖಾದ್ಯಗಳು ಅಪೂರ್ಣ. ಹಸಿರು ಮೆಣಸಿನಕಾಯಿ ಪ್ರತಿ ಅಡುಗೆ ಮನೆಯ ಕಾಯಂ ನಿವಾಸಿ. ಆದರೆ ಅದನ್ನು ಕತ್ತರಿಸಿದ ನಂತರ ಕೈಯಲ್ಲಿ ಉರಿ ಪ್ರಾರಂಭವಾಗುತ್ತದೆ. ಹಲವು ಬಾರಿ ಕೈ ತೊಳೆದರೂ ಕಡಿಮೆಯಾಗುವುದಿಲ್ಲ. ಇದನ್ನು ತಪ್ಪಿಸಲು ಕೆಲವೊಂದು ಉಪಯುಕ್ತ ಟಿಪ್ಸ್ ಇಲ್ಲಿದೆ.

First published:

  • 17

    Kitchen Hacks: ಹಸಿ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಉರಿಯುತ್ತಿದ್ದರೆ ಈ ಸಿಂಪಲ್ ಟಿಪ್ಸ್ ಪಾಲಿಸಿ

    ಇಲ್ಲಿ ಉಲ್ಲೇಖಿಸಿರುವ ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳವ ಮೂಲಕ ಉರಿಯನ್ನು ನಿಯಂತ್ರಿಸಬಹುದು. ಈ ವಿಧಾನಗಳು ನಿಮ್ಮ ಕೈಯಲ್ಲಿನ ಸುಡುವ ಸಂವೇದನೆಯನ್ನು ತೊಡೆದು ಹಾಕುತ್ತದೆ. ಜೊತೆಗೆ ಮೆಣಸಿನಕಾಯಿಯನ್ನು ಕತ್ತರಿಸುವ ಸರಿಯಾದ ವಿಧಾನವನ್ನು ಸಹ ನೀವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

    MORE
    GALLERIES

  • 27

    Kitchen Hacks: ಹಸಿ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಉರಿಯುತ್ತಿದ್ದರೆ ಈ ಸಿಂಪಲ್ ಟಿಪ್ಸ್ ಪಾಲಿಸಿ

    ಅಲೋವೆರಾ ಜೆಲ್ ಅನ್ನು ಹಚ್ಚಿ: ಹಸಿರು ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ನಿಮ್ಮ ಕೈಗಳ ಉರಿಯನ್ನು ಹೋಗಲಾಡಿಸಲು ನೀವು ಅಲೋವೆರಾ ಜೆಲ್ ಅನ್ನು ಬಳಸಬಹುದು. ಇದಕ್ಕಾಗಿ ಒಂದು ಚಮಚ ಅಲೋವೆರಾ ಜೆಲ್ ಅನ್ನು ನಿಮ್ಮ ಅಂಗೈಗಳ ಮೇಲೆ ತೆಗೆದುಕೊಂಡು ನಾಲ್ಕೈದು ನಿಮಿಷಗಳ ಕಾಲ ನಿಮ್ಮ ಕೈಗಳನ್ನು ಮಸಾಜ್ ಮಾಡಿ. ಸ್ವಲ್ಪ ಸಮಯದಲ್ಲೇ ಸುಡುವ ಸಂವೇದನೆಯಿಂದ ಮುಕ್ತಿ ಪಡೆಯುತ್ತೀರಿ.

    MORE
    GALLERIES

  • 37

    Kitchen Hacks: ಹಸಿ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಉರಿಯುತ್ತಿದ್ದರೆ ಈ ಸಿಂಪಲ್ ಟಿಪ್ಸ್ ಪಾಲಿಸಿ

    ಹಿಟ್ಟನ್ನು ಬೆರೆಸಿಕೊಳ್ಳಿ: ಕೈಗಳಲ್ಲಿ ಮೆಣಸಿನಕಾಯಿಯಿಂದ ಉರಿಯುವ ಸಂವೇದನೆಯನ್ನು ತೆಗೆದುಹಾಕಲು ನೀವು ಹಿಟ್ಟನ್ನು ಬೆರೆಸಬಹುದು. ಇದು ಕೈಗಳ ಉರಿಯುವಿಕೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

    MORE
    GALLERIES

  • 47

    Kitchen Hacks: ಹಸಿ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಉರಿಯುತ್ತಿದ್ದರೆ ಈ ಸಿಂಪಲ್ ಟಿಪ್ಸ್ ಪಾಲಿಸಿ

    ಕೂಲಿಂಗ್ ಆಯಿಲ್: ನಿಮ್ಮ ಕೈಯಲ್ಲಿ ಉರಿಯನ್ನು ತೊಡೆದುಹಾಕಲು ತಣ್ಣನೆಯ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ ನೀವು ಪುದೀನಾ ಎಣ್ಣೆಯ ಸಹಾಯವನ್ನು ತೆಗೆದುಕೊಳ್ಳಬಹುದು. ಇದರಿಂದ ತಂಪಾದ ಅನುಭವ ಉಂಟಾಗುತ್ತದೆ.

    MORE
    GALLERIES

  • 57

    Kitchen Hacks: ಹಸಿ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಉರಿಯುತ್ತಿದ್ದರೆ ಈ ಸಿಂಪಲ್ ಟಿಪ್ಸ್ ಪಾಲಿಸಿ

    ಮೊಸರು ಹಚ್ಚಿ: ಮೆಣಸಿನಕಾಯಿ ಕತ್ತರಿಸುವುದರಿಂದ ಕೈಗಳ ಉರಿಯನ್ನು ಹೋಗಲಾಡಿಸುವಲ್ಲಿ ಮೊಸರು ಉತ್ತಮವಾಗಿ ಕೆಲಸ ಮಾಡುತ್ತೆ. ತಣ್ಣನೆಯ ಮೊಸರನ್ನು ಅಂಗೈಗಳ ಮೇಲೆ ತೆಗೆದುಕೊಂಡು ಐದು ನಿಮಿಷಗಳ ಕಾಲ ಕೈಗಳನ್ನು ಮಸಾಜ್ ಮಾಡಿ. ಶೀಘ್ರದಲ್ಲೇ ನೀವು ಕಿರಿಕಿರಿಯಿಂದ ಪರಿಹಾರವನ್ನು ಪಡೆಯುತ್ತೀರಿ.

    MORE
    GALLERIES

  • 67

    Kitchen Hacks: ಹಸಿ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಉರಿಯುತ್ತಿದ್ದರೆ ಈ ಸಿಂಪಲ್ ಟಿಪ್ಸ್ ಪಾಲಿಸಿ

    ಮೆಣಸಿನಕಾಯಿಯನ್ನು ಕತ್ತರಿಸುವ ಮೊದಲು ಕೈಗವಸುಗಳನ್ನು ಧರಿಸಿ: ಮೆಣಸಿನಕಾಯಿಯನ್ನು ಕತ್ತರಿಸುವ ಮೊದಲು ಕೈಯಲ್ಲಿ ಕೈಗವಸುಗಳನ್ನು ಧರಿಸುವುದು ಉತ್ತಮ. ಇದರಿಂದ ಕೈಯಲ್ಲಿ ಸುಡುವ ಸಂವೇದನೆಯ ಸಮಸ್ಯೆಯನ್ನು ತಪ್ಪಿಸಬಹುದು. ಆದರೆ ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ, ಕೈಗವಸುಗಳನ್ನು ತೆಗೆಯುವಾಗ ಜಾಗರೂಕರಾಗಿರಿ ಮತ್ತು ಅವುಗಳನ್ನು ತಲೆಕೆಳಗಾಗಿ ತೆಗೆದುಹಾಕಿ.

    MORE
    GALLERIES

  • 77

    Kitchen Hacks: ಹಸಿ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಉರಿಯುತ್ತಿದ್ದರೆ ಈ ಸಿಂಪಲ್ ಟಿಪ್ಸ್ ಪಾಲಿಸಿ

    ಚಾಪಿಂಗ್ ಬೋರ್ಡ್ ಬಳಸಿ: ಮೆಣಸಿನಕಾಯಿಯನ್ನು ಕತ್ತರಿಸಲು ಚಾಪಿಂಗ್ ಬೋರ್ಡ್ ಅಥವಾ ಕತ್ತರಿ ಬಳಸುವುದು ಉತ್ತಮ. ಕತ್ತರಿಸುವಾಗ ಮೆಣಸಿನಕಾಯಿಯನ್ನು ಮುಟ್ಟುವ ಗೋಜಿಗೇ ಹೋಗಬೇಡಿ. ಚಾಕುವಿನಿಂದ ಕತ್ತರಿಸಿ, ಚಾಪಿಂಗ್ ಬೋರ್ಡ್ ಸಹಾಯದಿಂದ ನೇರವಾಗಿ ಅಡುಗೆಗೆ ಹಾಕಿ.

    MORE
    GALLERIES