Diabetes: ಮಧುಮೇಹಿಗಳೇ ಅಲರ್ಟ್; ಈ 5 ತರಕಾರಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತವೆ

5 Vegetables To Control Diabetes: ಭಾರತದಲ್ಲಿ ಬಹುತೇಕರ ಆರೋಗ್ಯ ಸಮಸ್ಯೆ ಡಯಾಬಿಟೀಸ್. ಮಧುಮೇಹ ರೋಗಿಗಳು ಸರಿಯಾಗಿ ತಿನ್ನುವುದು ಬಹಳ ಮುಖ್ಯ. ನಿರ್ಲಕ್ಷ್ಯವಹಿಸಿದರೆ ರಕ್ತದಲ್ಲಿನ ಸಕ್ಕರೆಯು ವೇಗವಾಗಿ ಹೆಚ್ಚಾಗುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಕೆಲವು ತರಕಾರಿಗಳನ್ನು ಸೇರಿಸಬೇಕು. ಅವು ಯಾವುವು ಎಂದು ಇಲ್ಲಿ ತಿಳಿಯೋಣ.

First published:

  • 17

    Diabetes: ಮಧುಮೇಹಿಗಳೇ ಅಲರ್ಟ್; ಈ 5 ತರಕಾರಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತವೆ

    ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವ ತರಕಾರಿಗಳನ್ನು ಹೆಚ್ಚು ತಿಂದರೆ, ಮಧುಮೇಹವನ್ನು ನಿಯಂತ್ರಿಸಬಹುದು. ಸಕ್ಕರೆ ರೋಗಿಗಳಿಗೆ ಯಾವ ತರಕಾರಿಗಳು ಪ್ರಯೋಜನಕಾರಿ ಎಂಬ ಮಾಹಿತಿ ಇಲ್ಲಿದೆ.

    MORE
    GALLERIES

  • 27

    Diabetes: ಮಧುಮೇಹಿಗಳೇ ಅಲರ್ಟ್; ಈ 5 ತರಕಾರಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತವೆ

    1) ಟೊಮ್ಯಾಟೋ: ಟೊಮ್ಯಾಟೋ ಸೇವನೆಯಿಂದ ಮಧುಮೇಹಿಗಳು ಅಧಿಕ ರಕ್ತದ ಸಕ್ಕರೆಯ ಸಮಸ್ಯೆಯನ್ನು ಹೋಗಲಾಡಿಸಬಹುದು. ಮೆಡಿಕಲ್ ನ್ಯೂಸ್ ಟುಡೇ ವರದಿಯ ಪ್ರಕಾರ ಟೊಮ್ಯಾಟೋದಲ್ಲಿ ಪೋಷಕಾಂಶಗಳು ತುಂಬಿವೆ. ಇದು ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕದಿಂದ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 37

    Diabetes: ಮಧುಮೇಹಿಗಳೇ ಅಲರ್ಟ್; ಈ 5 ತರಕಾರಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತವೆ

    2) ಎಲೆಕೋಸು: ಸಕ್ಕರೆ ರೋಗಿಗಳಿಗೆ ಎಲೆಕೋಸು ಬಹಳ ಪ್ರಯೋಜನಕಾರಿ ತರಕಾರಿ ಎಂದು ಪರಿಗಣಿಸಲಾಗಿದೆ. ಎಲೆಕೋಸಿನಲ್ಲಿರುವ ಪೋಷಕಾಂಶಗಳು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಎಲೆಕೋಸು ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದನ್ನು ತಡೆಯುತ್ತದೆ. ಈ ತರಕಾರಿ ಸೇವನೆಯಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.

    MORE
    GALLERIES

  • 47

    Diabetes: ಮಧುಮೇಹಿಗಳೇ ಅಲರ್ಟ್; ಈ 5 ತರಕಾರಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತವೆ

    3) ಸೌತೆಕಾಯಿ: ಇದು ಬೇಸಿಗೆಯಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಸೌತೆಕಾಯಿ ಸಾಕಷ್ಟು ನೀರನ್ನು ಹೊಂದಿರುತ್ತದೆ. ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 2022 ರ ಸಂಶೋಧನೆಯು ಸೌತೆಕಾಯಿಯನ್ನು ತಿನ್ನುವುದು ಮಧುಮೇಹ ಮತ್ತು ಉರಿಯೂತದಿಂದ ಪರಿಹಾರವನ್ನು ನೀಡುತ್ತದೆ ಎಂದು ಕಂಡುಹಿಡಿದಿದೆ.

    MORE
    GALLERIES

  • 57

    Diabetes: ಮಧುಮೇಹಿಗಳೇ ಅಲರ್ಟ್; ಈ 5 ತರಕಾರಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತವೆ

    4) ಪಾಲಕ್ : ಪೋಷಕಾಂಶಗಳ ಸಂಗ್ರಹಣೆಯಿಂದಾಗಿ ಪಾಲಕನ್ನು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಶುಗರ್ ರೋಗಿಗಳಿಗೆ ಪಾಲಕ್ ಸೇವನೆಯು ಪ್ರಯೋಜನಕಾರಿಯಾಗಿದೆ. ನ್ಯೂಟ್ರಿಷನ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪಾಲಕವು ಥೈಲಾಕೋಯ್ಡ್ಸ್ ಎಂಬ ಪೊರೆಯನ್ನು ಸಹ ಹೊಂದಿದೆ. ಇದು ಇನ್ಸುಲಿನ್ ಅನ್ನು ಸುಧಾರಿಸುವ ಮೂಲಕ ಸಕ್ಕರೆಯನ್ನು ನಿಯಂತ್ರಿಸುತ್ತದೆ.

    MORE
    GALLERIES

  • 67

    Diabetes: ಮಧುಮೇಹಿಗಳೇ ಅಲರ್ಟ್; ಈ 5 ತರಕಾರಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತವೆ

    5) ಕ್ಯಾರೆಟ್: ಕ್ಯಾರೆಟ್ ಸೇವನೆಯಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ. ಸಿಹಿ ರುಚಿಯಿಂದಾಗಿ ಮಧುಮೇಹ ರೋಗಿಗಳು ಕ್ಯಾರೆಟ್ ಅನ್ನು ಮಿತವಾಗಿ ತಿನ್ನಬೇಕು. ಕ್ಯಾರೆಟ್ ನಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 77

    Diabetes: ಮಧುಮೇಹಿಗಳೇ ಅಲರ್ಟ್; ಈ 5 ತರಕಾರಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತವೆ

    ಆರೋಗ್ಯವಾಗಿರಲು ಪ್ರತಿಯೊಬ್ಬರೂ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸೇವಿಸಬೇಕೆಂದು US ಕೃಷಿ ಇಲಾಖೆ ಶಿಫಾರಸು ಮಾಡುತ್ತದೆ. ಮಹಿಳೆಯರಿಗೆ ದಿನಕ್ಕೆ 2 ರಿಂದ 3 ಕಪ್ ತರಕಾರಿಗಳು ಬೇಕಾಗುತ್ತವೆ. ಪುರುಷರಿಗೆ ದಿನಕ್ಕೆ 3 ರಿಂದ 4 ಕಪ್ ತರಕಾರಿಗಳು ಬೇಕಾಗುತ್ತವೆ. ಈ ರೀತಿ ತಿಂದರೆ ರೋಗಗಳಿಂದ ಮುಕ್ತಿ ದೊರೆಯುತ್ತದೆ.

    MORE
    GALLERIES