ಕಚೇರಿಗೆ ತಿಳಿಸಿ: ನಿಮ್ಮ ಗರ್ಭಿಣಿಯಾಗಿರುವ ವಿಚಾರವನ್ನು ತಿಳಿಸಲು ಹಿಂಜರಿಯಬೇಡಿ. ಈ ವಿಷಯವನ್ನು ನಿಮ್ಮ ಕಂಪನಿಯ ಆಡಳಿತದೊಂದಿಗೆ ಸಂತೋಷವಾಗಿ ಹಂಚಿಕೊಳ್ಳಿ. ಆಗ ಅವರು ನಿಮಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಿಮಗೆ ಕೆಲಸದ ಸಮಯ, ಕೆಲಸದ ಹೊರೆ ಇತ್ಯಾದಿಗಳನ್ನು ಕಡಿಮೆ ಮಾಡಬಹುದು. ಸಾಧ್ಯವಾದರೆ ಮನೆಯಿಂದಲೇ ಕೆಲಸ ಮಾಡಿ.
ಮಧ್ಯಂತರ ವಿಶ್ರಾಂತಿ: ಒಂದೇ ಸ್ಥಳದಲ್ಲಿ ಕುಳಿತು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದು ನಿಮ್ಮ ಆರೋಗ್ಯದ ಮೇಲೆ ಅನೇಕ ರೀತಿ ಪರಿಣಾಮ ಬೀರುತ್ತದೆ. ಆದ್ದರಿಂದ, ಕಾಲಕಾಲಕ್ಕೆ ವಿಶ್ರಾಂತಿ ತೆಗೆದುಕೊಳ್ಳಿ. ಇದು ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಗೊಂದಲವನ್ನು ನಿವಾರಿಸುತ್ತದೆ. ವಿಶ್ರಾಂತಿ ಇಲ್ಲದೇ ನಿರಂತರ ಕೆಲಸ ಮಾಡುವುದು ಹೆಚ್ಚಿನ ಒತ್ತಡ ಮತ್ತು ಆಯಾಸಕ್ಕೆ ಕಾರಣವಾಗಬಹುದು.
ದೈನಂದಿನ ವ್ಯಾಯಾಮ: ಗರ್ಭಾವಸ್ಥೆಯಲ್ಲಿ ನಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದರಿಂದ ನಮ್ಮ ಮನಸ್ಸು ಕೂಡ ಫ್ರೆಶ್ ಆಗಿರುತ್ತದೆ. ಯೋಗ ಮತ್ತು ಧ್ಯಾನದಂತಹ ವ್ಯಾಯಾಮಗಳು ಸಹಾಯ ಮಾಡುತ್ತವೆ. ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯುವುದು ಸಹ ನಿಮಗೆ ಪ್ರಯೋಜನವನ್ನು ನೀಡುತ್ತದೆ. ನೀವು ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ವಾಕಿಂಗ್ ಮಾಡಿ. ಆದರೆ ಯಾವುದೇ ಕಾರಣಕ್ಕೂ ಶ್ರಮದಾಯಕ ವ್ಯಾಯಾಮಗಳನ್ನು ಮಾಡಬೇಡಿ.
ವಾಕರಿಕೆ ಆಹಾರಗಳನ್ನು ತಪ್ಪಿಸಿ: ವಾಕರಿಕೆ ಮತ್ತು ವಾಂತಿಗೆ ಬರುವಂತಹ ಆಹಾರವನ್ನು ತಿನ್ನಬೇಡಿ. ಗರ್ಭಾವಸ್ಥೆಯಲ್ಲಿ ಬಾಯಿಯಲ್ಲಿ ಕಹಿ ರುಚಿ ಮತ್ತು ವಾಕರಿಕೆ ಅನುಭವಿಸುವುದು ಸಹಜ. ನಿಂಬೆ ಮತ್ತು ಮಾವಿನಕಾಯಿಯಂತಹ ಹುಳಿ ಆಹಾರಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು. ಹಠಾತ್ ಶಕ್ತಿ ಕಡಿಮೆ ಆದಾಗ, ಅದನ್ನು ಸರಿದೂಗಿಸಲು ನೀವು ಸೇಬು, ಪೇರಲ, ಬಾಳೆಹಣ್ಣು ಇತ್ಯಾದಿಗಳನ್ನು ತಿನ್ನಬಹುದು. (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)