ರೋಗ ನಿರೋಧಕ ಶಕ್ತಿ ಕಡಿಮೆ ಆದ್ರೆ ಅನೇಕ ರೀತಿಯ ಕಾಯಿಲೆಗಳು ಬರುತ್ತವೆ. ಇದರಿಂದ ಹಲವು ರೀತಿಯ ಆರೋಗ್ಯ ಅಸ್ವಸ್ಥತೆ ಕಾಡುತ್ತದೆ. ಉರಿಯೂತ ಎಂದು ಕರೆಯುವ ಊತವು ರೋಗಗಳ ಕಾರಣಗಳಲ್ಲಿ ಒಂದಾಗಿದ್ದು, ಅದು ದೇಹವನ್ನು ಬಹಳಷ್ಟು ಬಾಧಿಸುತ್ತದೆ. ನಿಮ್ಮ ಆಹಾರದಲ್ಲಿ ಕೆಲವು ಆಹಾರ ಪದಾರ್ಥ ಸೇರಿಸಿದರೆ ಅದು ನೈಸರ್ಗಿಕವಾಗಿ ಉರಿಯೂತ ಕಡಿಮೆ ಮಾಡುತ್ತದೆ. ಹಾಗಿದ್ರೆ ಉರಿಯೂತ ನಿರೋಧಕ ಅಂಶವಿರುವ ಆ ಗಿಡಮೂಲಿಕೆಗಳು ಯಾವುವು? ಅವುಗಳ ಗುಣಲಕ್ಷಣಗಳೇನು? ಎಂಬುದನ್ನು ಇಲ್ಲಿ ತಿಳಿಯೋಣ.
ಕರಿಮೆಣಸು: ಕರಿಮೆಣಸು ಮತ್ತು ಅದರ ಮುಖ್ಯ ಸಕ್ರಿಯ ಸಂಯುಕ್ತವಾದ ಪೈಪರಿನ್ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪಾತ್ರವಹಿಸುತ್ತದೆ. ಕರಿಮೆಣಸು ಒಂದು ತೀಕ್ಷ್ಣವಾದ ಮತ್ತು ಬಲವಾದ ಸುವಾಸನೆಯನ್ನು ಹೊಂದಿರುವ ವಿಶೇಷ ಮಸಾಲೆಯಾಗಿದ್ದು, ಇದನ್ನು ಬಹುತೇಕ ಎಲ್ಲಾ ಆಹಾರಗಳಲ್ಲೂ ಬಳಸಲಾಗುತ್ತದೆ. ಭಾರತೀಯರಿಂದ ಹಿಡಿದು ವಿದೇಶದ ಎಲ್ಲ ಕಡೆಗೂ ಈ ಮಸಾಲೆಯನ್ನು ಬಳಸಲಾಗುತ್ತದೆ.ಆದ್ದರಿಂದ ಇದು ಉರಿಯೂತದ ಸಮಸ್ಯೆಯಿದ್ದವರಿಗೆ ಉತ್ತಮವಾಗಿದೆ.