ಎಷ್ಟೋ ಮಂದಿ ಬೆಳಗ್ಗೆ, ಮಧ್ಯಾಹ್ನಾ, ರಾತ್ರಿ ಮೂರು ಬಾರಿ ಕೂಡ ಅನ್ನ ಸೇವಿಸುತ್ತಾರೆ. ಕಾಲೇಜು ಅಥವಾ ಕಚೇರಿಗೆ ಹೋಗುವವರಿಗಂತೂ ತಾಯಂದಿರು ಅನ್ನ ತಿನ್ನದೇ ಹೋಗುವುದಕ್ಕೆ ಬಿಡುವುದಿಲ್ಲ. ಆದರೆ 3 ಬಾರಿಯೂ ಅನ್ನವನ್ನೇ ಸೇವಿಸುವುದರಿಂದ ದೇಹ ತೂಕ ಹೆಚ್ಚಾಗುತ್ತದೆ ಎಂದು ಅದೆಷ್ಟೋ ಮಂದಿಗೆ ತಿಳಿದಿರುವುದಿಲ್ಲ. ಆದರೆ ನೀವು ತೆಳ್ಳಗಿರಬೇಕು ಎಂದರೆ, ಮೊದಲು ಅನ್ನ ಹೆಚ್ಚಾಗಿ ತಿನ್ನುವುದನ್ನು ನಿಯಂತ್ರಿಸಬೇಕು. ಅಲ್ಲದೇ ಅನ್ನಕ್ಕಿಂತ ಹೆಚ್ಚಅದ ರುಚಿಕರ ಆಹಾರಗಳಿವೆ.
ಅನ್ನ ಮತ್ತು ಬ್ರೆಡ್ ತಿನ್ನಲು ಇಷ್ಟವಿಲ್ಲವೇ? ಹಾಗಾದ್ರೆ ಚಪಾತಿ ಜೊತೆಗೆ ಇದನ್ನು ತಿನ್ನಿ. ಮೆಂತ್ಯ, ಈರುಳ್ಳಿ, ಟೊಮ್ಯಾಟೊ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಮೊಳಕೆ ಕಾಳು ಮಿಶ್ರಣ ಮಾಡಿ ಅದಕ್ಕೆ ಮೇಯನೇಸ್ ಸೇರಿಸಿ ಮತ್ತು ಬ್ರೆಡ್ನಲ್ಲಿ ಸುತ್ತಿಕೊಂಡು ತಿನ್ನಿ. ಊಟ ಮಾಡಬೇಕೆಂದು ಅನಿಸುವುದು ಕಡಿಮೆಯಾಗುತ್ತದೆ ಮತ್ತು ತೂಕ ಇಳಿಸುವುದಕ್ಕೆ ಇದು ಅತ್ಯುತ್ತಮ ಆಹಾರವಾಗಿದೆ.