Men Health: ಈ ಆಹಾರಗಳಿಂದ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಂತೆ
Wellness: ಇತ್ತೀಚಿನ ಒತ್ತಡ ಜೀವನ ಮತ್ತು ಆಹಾರ ಪುರುಷರ ಲೈಂಗಿಕ ಆಸಕ್ತಿಯ ಮೇಲೆ ಸಹ ಪರಿಣಾಮ ಬೀರಿದೆ. ಕೆಲವೊಂದು ಆಹಾರಗಳನ್ನು ಪುರುಷರು ಸೇವನೆ ಮಾಡುವುದರಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಯಾವುವು ಆ ಆಹಾರಗಳು ಇಲ್ಲಿದೆ ಲಿಸ್ಟ್
ಬದಲಾಗುತ್ತಿರುವ ಜೀವನ ಪರಿಸ್ಥಿತಿಗಳು ಲೈಂಗಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಹಲವು ಆಸ್ಪತ್ರೆಗಳತ್ತ ಮುಖ ಮಾಡಬೇಕಾಗಿದೆ. ಆದರೂ ಒಂದಿಷ್ಟು ಮುಂಜಾಗ್ರತೆ ವಹಿಸಿದರೆ ಸಮಸ್ಯೆಯಿಂದ ಪಾರಾಗಬಹುದು ಎನ್ನುತ್ತಾರೆ ತಜ್ಞರು.
2/ 7
ಮನಸ್ಸಿನಲ್ಲಿ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ರೀತಿಯ ಆಹಾರಗಳು ಮನಸ್ಸಿನಲ್ಲಿ ಉತ್ಸಾಹವನ್ನು ಹೆಚ್ಚಿಸಿದರೆ ಕೆಲವು ಆಸೆಗಳನ್ನು ಖತಂ ಮಾಡುತ್ತದೆ.
3/ 7
ಚೀಸ್ ರುಚಿಕರ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಆದರೆ ಚೀಸ್ನಲ್ಲಿ ಸಿಂಥಟಿಕ್ ಹಾರ್ಮೋನುಗಳು ಇರುತ್ತವೆ. ಇದು ನಿಮ್ಮ ದೇಹದಲ್ಲಿನ ಹಾರ್ಮೋನುಗಳೊಂದಿಗೆ ಸೇರಿಕೊಂಡಾಗ, ಇದು ಈಸ್ಟ್ರೋಜನ್ ಮತ್ತು ಟೆಸ್ಟೋಸ್ಟೆರಾನ್ನ ಅಸಮತೋಲತೆಯನ್ನು ಸೃಷ್ಟಿಸುತ್ತದೆ.
4/ 7
ಚಾಕ್ಲೆಟ್: ಚಾಕ್ಲೆಟ್ಗಳು ರುಚಿಕರ ಆದರೆ ಈ ಚಾಕ್ಲೆಟ್ ಆಕ್ಸಿಟೋಸಿನ್ ಉತ್ಪಾದನೆಯನ್ನು ಮಾಡದೆ, ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ನೇರವಾಗಿ ನಿರ್ಧರಿಸುತ್ತದೆ. ಇದು ಒಬ್ಬ ವ್ಯಕ್ತಿಯ ಬಯಕೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.
5/ 7
ಜಂಕ್ ಆಹಾರಗಳು: ಆಹಾರವನ್ನು ಹುರಿಯಲು ಬಳಸುವ ಹೈಡ್ರೋಜನೇಟೆಡ್ ಎಣ್ಣೆ ಬಯಕೆಯನ್ನು ಕಡಿಮೆ ಮಾಡುತ್ತದೆ. ಇದನ್ನು ಸೇವನೆ ಮಾಡುವುದರಿಂದ ಪುರುಷರ ಟೆಸ್ಟೋಸ್ಟೆರಾನ್ ಮಟ್ಟಗಳು ಕಡಿಮೆಯಾಗುತ್ತವೆ.
6/ 7
ಪುದೀನಾ: ಪುದೀನಾ ಜನರನ್ನು ವಿಪರೀತವಾಗಿ ಆಕರ್ಷಿಸುತ್ತದೆ. ಒಳ್ಳೆಯ ಸುವಾಸನೆ ಇರುತ್ತದೆ. ಹೇಗಾದರೂ ಹೆಚ್ಚಿನ ಪುದೀನ ಸೇವನೆ ಬಯಕೆಗಳನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ತಜ್ಞರು.
7/ 7
ಆಲ್ಕೋಹಾಲ್: ತುಂಬಾ ಜನರಿಗೆ ಆಲ್ಕೋಹಾಲ್ ಜೀವನದಲ್ಲಿ ಒಂದು ಭಾಗ. ಆದರೆ ಇದು ನಿಮ್ಮ ಸೆಕ್ಸ್ ಜೀವನದಲ್ಲಿ ಡಿಪ್ರೆಷನ್ಗೆ ಸಹ ದಾರಿ ಮಾಡಿಕೊಡುತ್ತದೆ.