ಚಳಿಗಾಲ ಮುಗಿದು ಬೇಸಿಗೆ ಆರಂಭವಾಗಿದೆ. . ಈ ವಾತಾವರಣಕ್ಕೆ ತಕ್ಕಂತೆ ಬಟ್ಟೆ ಬದಲಾಯಿಸಿಕೊಳ್ಳದಿದ್ದರೆ ಸುಡು ಬಿಸಿಲನ್ನು ತಡೆದುಕೊಳ್ಳುವುದಕ್ಕೆ ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ. ಹಾಗಾದ್ರೆ ಇದಕ್ಕೆ ಏನು ಮಾಡಬೇಕು ಅಂತ ಯೋಚಿಸುತ್ತಿದ್ದೀರಾ? ಡೋಂಟ್ವರಿ ದಪ್ಪಗಿರುವ ಮಹಿಳೆಯರು ಸ್ಲಿಮ್ ಆಗಿ ಕಾಣಲು ನಿಮ್ಮ ಸೈಜ್ಗೆ ಸರಿಹೊಂದುವಂತಹ ಬಟ್ಟೆಯನ್ನು ಹುಡುಕುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಯಾವ ರೀತಿಯ ಬಟ್ಟೆಗಳನ್ನು ನೀವು ಸ್ಲಿಮ್ ಆಗಿ ಕಾಣಲು ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ವಿ-ನೆಕ್ಲೈನ್ಗಳಿರುವ ಬಟ್ಟೆ ಆರಿಸುವುದು : ಪುರುಷರಿಗಿಂತ ಮಹಿಳೆಯರು ಬಟ್ಟೆಯ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರೆ. ಇನ್ನೂ ದಪ್ಪಗಿರುವ ಕೆಲವು ಮಹಿಳೆಯರು ಯಾವುದರಲ್ಲಿ ಉತ್ತಮವಾಗಿ ಕಾಣುತ್ತಾರೆ? ಯಾವುದರಲ್ಲಿ ದಪ್ಪಗೆ ಕಾಣುವುದಿಲ್ಲ ಎಂದು ಬಟ್ಟೆಯನ್ನು ಹುಡುಕುವುದು ಸಾಮಾನ್ಯ ಸಂಗತಿಯಾಗಿದೆ. ನಿಮ್ಮ ದೇಹಕ್ಕೆ ಶೇಪ್ ನೀಡಲು ನೀವು ಬಯಸಿದರೆ, ವಿ-ನೆಕ್ಲೈನ್ ಹೊಂದಿರುವ ಉಡುಪುಗಳನ್ನು ಆಯ್ಕೆ ಮಾಡಬಹುದು. ಇದು ನಿಮ್ಮ ತಲೆ ಎತ್ತರವಾಗಿ ಕಾಣುವಂತೆ ಮಾಡುತ್ತದೆ ಮತ್ತು ನಿಮಗೆ ತೆಳ್ಳಗಿನ ಲುಕ್ ನೀಡುತ್ತದೆ.
ಶೇಪ್ ವೇರ್ ಗಳನ್ನು ಬಳಸಿ: ದಪ್ಪಗಿರುವ ಮಹಿಳೆಯರು ಶೇಪ್ವೇರ್ಗಳನ್ನು ಧರಿಸಲು ಬಯಸಿದರೆ ಶೇಪ್ವೇರ್ಗಳನ್ನು ಆಯ್ಕೆ ಮಾಡುತ್ತಾರೆ. ವಿಶೇಷವಾಗಿ ಬೇಸಿಗೆಯಲ್ಲಿ ಕಾಟನ್ ಸೀರೆಗಳನ್ನು ಧರಿಸುವಾಗ ನೀವು ದಪ್ಪಗಿರುವಂತೆ ಕಾಣದಿರಲು ಬಯಸಿದರೆ ಇದು ನಿಮಗೆ ಬೆಸ್ಟ್ ಅಂತ ಹೇಳಬಹುದು. ಸೊಂಟ, ತೊಡೆ ಮತ್ತು ಹೊಟ್ಟೆಯಲ್ಲಿ ದೇಹದ ಕೊಬ್ಬನ್ನು ಕಡಿಮೆ ಮಾಡಲು ಈ ಉಡುಗೆ ಸಹಕಾರಿಯಾಗಿದೆ.