ಸಿಲಿಕಾನ್ ಸಿಟಿ ಆಫ್ ಇಂಡಿಯಾ ಎಂದೇ ಪ್ರಸಿದ್ದಿ ಪಡೆದಿರುವ ಬೆಂಗಳೂರು ಎಲ್ಲರಿಗೂ ಅಚ್ಚುಮೆಚ್ಚು. ಬೆಂಗಳೂರು ನಗರ ಕೇವಲ ಟೆಕ್ನಿಕಲ್ ಅಲ್ಲಿ ಮಾತ್ರ ಮುಂದಿರದೇ, ಅದು ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ, ರಮಣೀಯ ನೈಸರ್ಗಿಕ ಸೌಂದರ್ಯ ಮತ್ತು ನೈಟ್‌ಲೈಫ್‌ಗೆ ಹೆಸರುವಾಸಿಯಾದ ಭಾರತದಲ್ಲಿಯೇ ಫೇಮಸ್ ನಗರ ಎಂದ್ರೂ ತಪ್ಪಾಗಲಾರದು. ಇಷ್ಟೆನಾ ಬೆಂಗಳೂರು ಅಂತ ನೀವು ಪ್ರಶ್ನೆ ಮಾಡಿದ್ರೆ ಅದ್ಕೆ ಉತ್ತರ ಎಂಬುದಾಗಿದೆ. ಬೆಂಗಳೂರಿನಲ್ಲಿ ಇನ್ನು ಅನೇಕ ಪ್ರವಾಸಿ ತಾಣಗಳು ಕೂಡ ಇವೆ. ಬೆಂಗಳೂರು ಬಳಿ ಹಲವಾರು ಸುಂದರ ಬೆಟ್ಟದ ತಾಣ ಅಥವಾ ಹಿಲ್ ಸ್ಟೇಷನ್‌ಗಳಿವೆ.
ನಂದಿ ಹಿಲ್ಸ್: ಇತ್ತಿಚೀನ ವರ್ಷಗಳಲ್ಲಿ ಬೆಂಗಳೂರಿನ ಹತ್ತಿರ ನಂದಿ ಹಿಲ್ಸ್ ಸಕತ್ ಜನಪ್ರಿಯತೆ ಪಡೆಯುತ್ತಿರೋ ಹಿಲ್ ಸ್ಟೇಷನ್ ಆಗಿದೆ. ಬೆಂಗಳೂರಿನಲ್ಲಿರುವ ಆಲ್‌ಮೋಸ್ಟ್ ಜನರ ವೀಕೆಂಡ್‌ಗೆ ಇದು ಅತ್ಯಂತ ಪ್ರಸಿದ್ಧಿ ಪಡೆದ ಸ್ಥಳವಾಗಿದೆ. ಇದು ಒಂದು ಕಾಲದಲ್ಲಿ ಟಿಪ್ಪು ಸುಲ್ತಾನನ ಬೇಸಿಗೆ ಮನೆಯಾಗಿತ್ತು ಎಂದು ಇತಿಹಾಸಗಳು ಹೇಳುತ್ತವೆ. ನಂದಿಬೆಟ್ಟದಲ್ಲಿ ಸೂರ್ಯೋದಯದ ವ್ಯೂವ್‌ಪಾಯಿಂಟ್ ಮತ್ತು ಚನ್ನಗಿರಿ ಬೆಟ್ಟ ಟ್ರೆಕ್ ಸ್ಟಾರ್ಟ್ ಪಾಯಿಂಟ್ ಹೀಗೆ ನೋಡಬಹುದಾದ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಇದು ಬೆಂಗಳೂರಿನಿಂದ ಸುಮಾರು 61 ಕಿಮೀ. ದೂರದಲ್ಲಿದೆ.
ಕೂರ್ಗ್: ಪ್ರಕೃತಿ ಪ್ರಿಯರಿಗೆ, ಕೊಡಗಿನ ಕೂರ್ಗ್ ಹೇಳಿ ಮಾಡಿಸಿದ ಜಾಗ ಎನ್ನಬಹುದು. ಏಕೆಂದರೆ ಕೂರ್ಗ್ ತನ್ನ ಹಸಿರು ತಾಣಕ್ಕೆ ಹೆಸರುವಾಸಿ. ಈ ಹೆಸರಾಂತ ಕಾಫಿ-ಉತ್ಪಾದಿಸುವ ಹಿಲ್ ಸ್ಟೇಷನ್ ತನ್ನ ಚೆಂದದ ಭೂದೃಶ್ಯ(ಲ್ಯಾಂಡ್‌ಸ್ಕೇಪ್) ಮತ್ತು ಹರಿಯುವ ನದಿಗಳಂತೆ ಕಾಣುವ ಬೆಟ್ಟಗಳ ರಚನೆ ನೋಡಲು ಅದ್ಭುತ. ಕೂರ್ಗ್ ತಾಣವು ಬೆಂಗಳೂರಿಗೆ ಹತ್ತಿರವಿರುವ ಅತ್ಯಂತ ಜನಪ್ರಿಯ ಹಿಲ್ ಸ್ಟೇಷನ್ ಆಗಿದೆ.
ಊಟಿ: ಬೆಂಗಳೂರಿಗೆ ಹತ್ತಿರವಿರುವ ಅತ್ಯಂತ ಜನಪ್ರಿಯ ಹಿಲ್ ಸ್ಟೇಷನ್‌ಗಳಲ್ಲಿ ಒಂದಾದ ಊಟಿಯನ್ನು ಹಿಲ್ ಸ್ಟೇಷನ್‌ಗಳ ರಾಣಿ ಎಂದೂ ಕರೆಯುತ್ತಾರೆ. ಇದು ತಂಪಾದ ವಾತವರಣ, ಸುಂದರವಾದ ಚಹಾ ತೋಟಗಳು ಮತ್ತು ಗುಡ್ಡಗಾಡು ಭೂದೃಶ್ಯಕ್ಕೆ ಹೆಸರುವಾಸಿಯಾಗಿದೆ. ಸರ್ಕಾರಿ ರೋಸ್ ಗಾರ್ಡನ್, ಸೇಂಟ್ ಸ್ಟೀಫನ್ಸ್ ಚರ್ಚ್, ಅವಲಾಂಚೆ ಸರೋವರ ಮತ್ತು ಡಡ್ಡಾಬೆಟ್ಟಾ ಶಿಖರಗಳನ್ನು ಊಟಿಯಲ್ಲಿ ನೋಡಬಹುದಾಗಿದೆ. ಇವು ಊಟಿಯ ಜನಪ್ರಿಯ ಪ್ರವಾಸಿ ತಾಣಗಳು ಆಗಿವೆ. ಇದು ಬೆಂಗಳೂರಿನಿಂದ ಸುಮಾರು 265 ಕಿಮೀ ದೂರದಲ್ಲಿದೆ.
ಚಿಕ್ಕಮಂಗಳೂರು: ಬೆಂಗಳೂರಿಗೆ ಹತ್ತಿರವಿರುವ ಚಿಕ್ಕಮಂಗಳೂರು ಸುಂದರವಾದ ಹಿಲ್ ಸ್ಟೇಷನ್‌ಗೆ ಹೆಸರುವಾಸಿ. ಇದು ಬೆಂಗಳೂರಿಗೆ ಕ್ವಿಕ್ ವಿಕೇಂಡ್‌ಗೆ ಹೇಳಿಮಾಡಿಸಿದ ತಾಣವಾಗಿದೆ. ನೀವು ಟ್ರೆಕ್ ಫ್ರೀಕ್ ವ್ಯಕ್ತಿಯಾಗಿದ್ದರೆ ಈ ಸ್ಥಳ ನಿಮಗೆ ಪರ್ಫೆಕ್ಟ್ ಆಗಿದೆ. ಇಲ್ಲಿಯ ರಾಕಿ ಪರ್ವತ ಮಾರ್ಗಗಳು, ಕಾಫಿ ಹೂವುಗಳು ಮತ್ತು ಎತ್ತರದ ಪರ್ವತ ಶಿಖರಗಳು ನಿಮಗೆ ವಿಭಿನ್ನ ಅನುಭವವನ್ನು ನೀಡುತ್ತವೆ.