ಹೌದು, ಬೇಸಿಗೆಯಲ್ಲಿ ಸೂರ್ಯನ ಬೆಳಕು ಮತ್ತು ಮಾಲಿನ್ಯದಿಂದ ಪಾದಗಳ ಸೌಂದರ್ಯವು ಬೇಗನೇ ಕಡಿಮೆಯಾಗುತ್ತದೆ. ಪಾದಗಳ ತ್ವಚೆ ಮಂದವಾದಾಗ, ಟ್ಯಾನಿಂಗ್, ಪಾದಗಳ ಮೇಲಿನ ಗುರುತುಗಳು, ಕಣಕಾಲುಗಳಲ್ಲಿ ಬಿರುಕುಗಳು ಹೀಗೆ ಅನೇಕ ಕಾರಣಗಳಿಂದ ಚರ್ಮದ ಸೌಂದರ್ಯ ಕಡಿಮೆಯಾಗುತ್ತದೆ. ಹೀಗಾಗಿ ನಾವು ನಮ್ಮ ಮುಖದ ತ್ವಚೆಯನ್ನು ಹೇಗೆ ಆರೈಕೆ ಮಾಡುತ್ತೇವೆಯೋ ಹಾಗೆಯೇ ಪಾದಗಳ ತ್ವಚೆಯ ಬಗ್ಗೆಯೂ ವಿಶೇಷ ಗಮನ ಹರಿಸಬೇಕು.
ಉಗುರು ಫಂಗಸ್ ಚಿಕಿತ್ಸೆ: ಆಪಲ್ ಸೈಡರ್ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ನಿಮ್ಮ ಪಾದಗಳನ್ನು ಅದರಲ್ಲಿ ಇರಿಸಿ ಮತ್ತು 20-30 ನಿಮಿಷಗಳ ಕಾಲ ಕುಳಿತುಕೊಳ್ಳಿ. ಇದರ ನಂತರ, ಟವೆಲ್ ಸಹಾಯದಿಂದ ಪಾದಗಳನ್ನು ಸಂಪೂರ್ಣವಾಗಿ ನೀರಿಲ್ಲದೇ ಒರೆಸಿ. ಅದಾದ ನಂತರ ಉಗುರುಗಳ ಮೇಲೆ ಲ್ಯಾವೆಂಡರ್ ಸಾರಭೂತ ತೈಲದ ಕೆಲವು ಹನಿಗಳನ್ನು ಬೆರೆಸಿ, ಮಸಾಜ್ ಮಾಡಿ.