Healthy Life Style: ಬೆಳಗ್ಗೆ ಟೈಮ್ ಸಿಗ್ತಿಲ್ವಾ? ಡೋಂಟ್​​ವರಿ ರಾತ್ರಿ ಧ್ಯಾನ ಮಾಡಿ; ಈ 5 ಆರೋಗ್ಯಗಳ ಲಾಭ ಪಡೆಯಿರಿ!

Bedtime Meditation Benefits:ಧ್ಯಾನವು ಜನರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುವುದರ ಜೊತೆಗೆ ದೇಹಕ್ಕೆ ಶಕ್ತಿ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಆದರೆ ಬ್ಯುಸಿ ಶೆಡ್ಯೂಲ್ನಿಂದಾಗಿ ಅನೇಕರಿಗೆ ಬೆಳಗಿನ ಜಾವ ಧ್ಯಾನ ಮಾಡಲು ಬಯಸಿದರೂ ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ರಾತ್ರಿ ಮಲಗುವ ವೇಳೆ ಧ್ಯಾನ ಮಾಡುವುದು ನಿಮಗೆ ಉತ್ತಮ ಆಯ್ಕೆಯಾಗಿದೆ. ಆದ್ದರಿಂದ ರಾತ್ರಿ ಮಲಗುವ ಮುನ್ನಧ್ಯಾನದ ವಿಧಾನಗಳು ಮತ್ತು ಅದರ ಕೆಲವು ಪ್ರಯೋಜನಗಳ ಬಗ್ಗೆ ನೀವಿಂದು ತಿಳಿದುಕೊಳ್ಳೋಣ ಬನ್ನಿ.

First published:

  • 17

    Healthy Life Style: ಬೆಳಗ್ಗೆ ಟೈಮ್ ಸಿಗ್ತಿಲ್ವಾ? ಡೋಂಟ್​​ವರಿ ರಾತ್ರಿ ಧ್ಯಾನ ಮಾಡಿ; ಈ 5 ಆರೋಗ್ಯಗಳ ಲಾಭ ಪಡೆಯಿರಿ!

    ಆರೋಗ್ಯಕರ ಜೀವನಶೈಲಿಯನ್ನು ಆನಂದಿಸಲು ಜನರು ಹೆಚ್ಚಾಗಿ ಬೆಳಗ್ಗೆ ಹೊತ್ತು ಯೋಗ ಮತ್ತು ವ್ಯಾಯಾಮವನ್ನು ಮಿಸ್ ಮಾಡದೇ ಮಾಡುತ್ತಾರೆ. ಅದೇ ಸಮಯದಲ್ಲಿ ಬೆಳಗ್ಗೆ ಧ್ಯಾನ ಮಾಡುವುದನ್ನು ಕೂಡ ಅನೇಕ ಮಂದಿ ತಮ್ಮ ದೈನಂದಿನ ದಿನಚರಿಯ ಪ್ರಮುಖ ಭಾಗವಾಗಿ ಮಾಡಿಕೊಂಡಿದ್ದಾರೆ. ಆದರೆ ಕೆಲವರಿಗೆ ಬೆಳಗ್ಗೆ ಧ್ಯಾನ ಮಾಡಲು ಸಮಯ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ರಾತ್ರಿ ಮಲಗುವ ಮುನ್ನ ಧ್ಯಾನ ಮಾಡಲು ಪ್ರಯತ್ನಿಸುವ ಮೂಲಕ, ನೀವು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. (Image-Canva)

    MORE
    GALLERIES

  • 27

    Healthy Life Style: ಬೆಳಗ್ಗೆ ಟೈಮ್ ಸಿಗ್ತಿಲ್ವಾ? ಡೋಂಟ್​​ವರಿ ರಾತ್ರಿ ಧ್ಯಾನ ಮಾಡಿ; ಈ 5 ಆರೋಗ್ಯಗಳ ಲಾಭ ಪಡೆಯಿರಿ!

    ಧ್ಯಾನವು ಜನರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡುವುದರ ಜೊತೆಗೆ ದೇಹಕ್ಕೆ ಶಕ್ತಿ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಆದರೆ ಬ್ಯುಸಿ ಶೆಡ್ಯೂಲ್ನಿಂದಾಗಿ ಅನೇಕರಿಗೆ ಬೆಳಗಿನ ಜಾವ ಧ್ಯಾನ ಮಾಡಲು ಬಯಸಿದರೂ ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ರಾತ್ರಿ ಮಲಗುವ ವೇಳೆ ಧ್ಯಾನ ಮಾಡುವುದು ನಿಮಗೆ ಉತ್ತಮ ಆಯ್ಕೆಯಾಗಿದೆ. ಆದ್ದರಿಂದ ರಾತ್ರಿ ಮಲಗುವ ಮುನ್ನಧ್ಯಾನದ ವಿಧಾನಗಳು ಮತ್ತು ಅದರ ಕೆಲವು ಪ್ರಯೋಜನಗಳ ಬಗ್ಗೆ ನೀವಿಂದು ತಿಳಿದುಕೊಳ್ಳೋಣ ಬನ್ನಿ. (Image-Canva)

    MORE
    GALLERIES

  • 37

    Healthy Life Style: ಬೆಳಗ್ಗೆ ಟೈಮ್ ಸಿಗ್ತಿಲ್ವಾ? ಡೋಂಟ್​​ವರಿ ರಾತ್ರಿ ಧ್ಯಾನ ಮಾಡಿ; ಈ 5 ಆರೋಗ್ಯಗಳ ಲಾಭ ಪಡೆಯಿರಿ!

    ಧ್ಯಾನ ಮಾಡುವ ವಿಧಾನ: ರಾತ್ರಿ ಮಲಗುವ ಮೊದಲು ಧ್ಯಾನ ಮಾಡಲು, ಕೊಠಡಿಯನ್ನು ಸ್ವಲ್ಪ ಕತ್ತಲೆ ಮಾಡಿ. ಈಗ ಸ್ವಚ್ಛ ಮತ್ತು ಶಾಂತ ಸ್ಥಳದಲ್ಲಿ ಕುಳಿತು ನಿಮ್ಮ ಕಣ್ಣುಗಳನ್ನು ಮುಚ್ಚಿ. ಇದರ ನಂತರ, ಆಳವಾದ ಉಸಿರಾಟವನ್ನು ತೆಗೆದುಕೊಳ್ಳುವಾಗ, ದೇಹವನ್ನು ಫ್ರೀ ಆಗಿ ಬಿಡಿ. ಈಗ ನಿಮ್ಮ ಗಮನವನ್ನು ಉಸಿರಾಟದ ಮೇಲೆ ಕೇಂದ್ರೀಕರಿಸಿ ಮತ್ತು ಅರ್ಧ ಗಂಟೆಯವರೆಗೆ ಧ್ಯಾನವನ್ನು ಅಭ್ಯಾಸ ಮಾಡಿ. ಅದೇ ಸಮಯದಲ್ಲಿ, ಧ್ಯಾನದ ನಂತರ, ನಿದ್ರಿಸುವಾಗ ಲಘು ಸಂಗೀತವನ್ನು ಕೇಳುವ ಮೂಲಕ ನೀವು ಒತ್ತಡದಿಂದ ಮುಕ್ತರಾಗಬಹುದು. (Image-Canva)

    MORE
    GALLERIES

  • 47

    Healthy Life Style: ಬೆಳಗ್ಗೆ ಟೈಮ್ ಸಿಗ್ತಿಲ್ವಾ? ಡೋಂಟ್​​ವರಿ ರಾತ್ರಿ ಧ್ಯಾನ ಮಾಡಿ; ಈ 5 ಆರೋಗ್ಯಗಳ ಲಾಭ ಪಡೆಯಿರಿ!

    ಒತ್ತಡದಿಂದ ಮುಕ್ತಿ: ಮಲಗುವ ವೇಳೆ ಧ್ಯಾನ ಮಾಡುವುದರಿಂದ ದೇಹದಲ್ಲಿ ಮೆಲಟೋನಿನ್ ಪ್ರಮಾಣ ಹೆಚ್ಚುತ್ತದೆ. ಇದರಿಂದಾಗಿ ಒತ್ತಡವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರೊಂದಿಗೆ ಆತಂಕದಿಂದ ಮುಕ್ತಿ ಪಡೆಯಬಹುದು. (Image-Canva)

    MORE
    GALLERIES

  • 57

    Healthy Life Style: ಬೆಳಗ್ಗೆ ಟೈಮ್ ಸಿಗ್ತಿಲ್ವಾ? ಡೋಂಟ್​​ವರಿ ರಾತ್ರಿ ಧ್ಯಾನ ಮಾಡಿ; ಈ 5 ಆರೋಗ್ಯಗಳ ಲಾಭ ಪಡೆಯಿರಿ!

    ತಲೆನೋವು ದೂರವಾಗುತ್ತದೆ: ರಾತ್ರಿ ಮಲಗುವ ಮುನ್ನ ಧ್ಯಾನ ಮಾಡುವುದರಿಂದ ಸ್ನಾಯುಗಳು ಟೆನ್ಷನ್ ಫ್ರೀ ಆಗುತ್ತವೆ. ಇದರಿಂದ ನೀವು ತಲೆನೋವಿನ ಸಮಸ್ಯೆಯಿಂದಲೂ ಪರಿಹಾರ ಪಡೆಯುತ್ತೀರಿ. (Image-Canva)

    MORE
    GALLERIES

  • 67

    Healthy Life Style: ಬೆಳಗ್ಗೆ ಟೈಮ್ ಸಿಗ್ತಿಲ್ವಾ? ಡೋಂಟ್​​ವರಿ ರಾತ್ರಿ ಧ್ಯಾನ ಮಾಡಿ; ಈ 5 ಆರೋಗ್ಯಗಳ ಲಾಭ ಪಡೆಯಿರಿ!

    ಹೃದಯ ಬಡಿತವು ಉತ್ತಮವಾಗಿರುತ್ತದೆ: ಒತ್ತಡ ಮತ್ತು ಆತಂಕದಿಂದಾಗಿ, ಜನರ ಹೃದಯ ಬಡಿತವು ಹೆಚ್ಚಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಲಗುವ ವೇಳೆ ಧ್ಯಾನ ಮಾಡುವುದರಿಂದ, ಹೃದಯ ಬಡಿತವು ಸಾಮಾನ್ಯವಾಗುತ್ತದೆ ಮತ್ತು ಹೃದಯವು ಸಹ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. (Image-Canva)

    MORE
    GALLERIES

  • 77

    Healthy Life Style: ಬೆಳಗ್ಗೆ ಟೈಮ್ ಸಿಗ್ತಿಲ್ವಾ? ಡೋಂಟ್​​ವರಿ ರಾತ್ರಿ ಧ್ಯಾನ ಮಾಡಿ; ಈ 5 ಆರೋಗ್ಯಗಳ ಲಾಭ ಪಡೆಯಿರಿ!

    ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ: ಮಲಗುವ ವೇಳೆ ಧ್ಯಾನ ಮಾಡುವುದರಿಂದ ದೇಹದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಬಿಪಿ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ. (Image-Canva)

    MORE
    GALLERIES