ಸ್ವಲ್ಪ ಮುದ್ದಾಡುವುದು ಅಥವಾ ಅಪ್ಪಿಕೊಳ್ಳುವುದರಿಂದ ನಿಮ್ಮ ಇಡೀ ದೇಹವು ಶಾಂತಗೊಳ್ಳುವುದರ ಜೊತೆಗೆ ಮನಸ್ಸಿಗೆ ನೆಮ್ಮದಿಯಾಗುತ್ತದೆ. ಒಂದು ಚಿಕ್ಕ ಹಗ್ನಲ್ಲಿ ಎಷ್ಟೆಲ್ಲಾ ಸಂತೋಷ ನೀಡುತ್ತದೆ ಎಂದು ಗೊತ್ತಿದ್ಯಾ? ಒಂದು ಹಗ್ನಿಂದ ನಮ್ಮ ಅನೇಕ ರೋಗಗಳು, ದಿನದಲ್ಲಿನ ಸುಸ್ತು ಕ್ಷಣ ಮಾತ್ರದಲ್ಲಿಯೇ ಮಾಯವಾಗುತ್ತದೆ. ಅಷ್ಟಕ್ಕೂ ಇದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತಾ?
ಸ್ಟ್ರೆಸ್ ಬಸ್ಟರ್: ಅಪ್ಪಿಕೊಳ್ಳುವಿಕೆಯ ದೊಡ್ಡ ಪ್ರಯೋಜನವೆಂದರೆ ಅದು ಒತ್ತಡವನ್ನು ನಿವಾರಿಸುತ್ತದೆ. ಹೆಲ್ತ್ಲೈನ್ ಪ್ರಕಾರ, ಅಪ್ಪಿಕೊಳ್ಳುವುದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಪಬ್ಮೆಡ್ ಸೆಂಟ್ರಲ್ನ ಅಧ್ಯಯನದ ಪ್ರಕಾರ, ಒತ್ತಡಕ್ಕೆ ಸಂಬಂಧಿಸಿದ ಮೆದುಳಿನ ಭಾಗವು ಅಪ್ಪುಗೆಯ ನಂತರ ಹೈಪರ್ ಆ್ಯಕ್ಟಿವ್ ಆಗುತ್ತದೆ. ಇದು ಒತ್ತಡದ ಭಾವನೆಗಳನ್ನು ಸಂತೋಷದ ಭಾವನೆಗಳಾಗಿ ಪರಿವರ್ತಿಸುತ್ತದೆ.
ಹೃದಯದ ಆರೋಗ್ಯವನ್ನು ಬಲಪಡಿಸುತ್ತೆ: ಅಪ್ಪುಗೆ ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ಪಬ್ಮೆಡ್ ಸೆಂಟ್ರಲ್ ಜರ್ನಲ್ ಪ್ರಕಾರ, ಒಂದು ಅಧ್ಯಯನವನ್ನು ದಂಪತಿಗಳ ಮೇಲೆ ನಡೆಸಲಾಯಿತು. ಈ ವೇಳೆ ಕೆಲವು ಜೋಡಿಗಳು 10 ನಿಮಿಷಗಳ ಕಾಲ ಪರಸ್ಪರರ ಕೈಗಳನ್ನು ಹಿಡಿದಿಟ್ಟುಕೊಳ್ಳುವಂತೆ ಹೇಳಲಾಯಿತು ಮತ್ತು ಕೆಲವು ಜೋಡಿಗಳನ್ನು 20 ಸೆಕೆಂಡುಗಳ ಕಾಲ ತಬ್ಬಿಕೊಳ್ಳುವಂತೆ ಸೂಚಿಸಲಾಯಿತು. ಕೇವಲ 20 ಸೆಕೆಂಡುಗಳ ಕಾಲ ಮುದ್ದಾಡಿದ ನಂತರ, ಗಂಡ ಮತ್ತು ಹೆಂಡತಿಯ ರಕ್ತದೊತ್ತಡದ ಮಟ್ಟವು ತಕ್ಷಣವೇ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತಿಳಿಸಿದೆ. ಇದು ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ.