ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಹಾಗಗಿ ಉಷ್ಣತೆ ಪ್ರತಿದಿನ ಹೆಚ್ಚುತ್ತಿದೆ. ಮನೆ ಮನೆಗಳಲ್ಲಿ ಫ್ರಿಡ್ಜ್ ನಲ್ಲಿ ತಣ್ಣೀರು ಇಡುವ ಅಭ್ಯಾಸವೂ ಶುರುವಾಗಿದೆ. ಅನೇಕ ಜನರು ಶಾಖ ತಡೆಯಲಾಗದೆ ಮತ್ತೆ ಮತ್ತೆ ಸ್ನಾನ ಮಾಡುತ್ತಿದ್ದಾರೆ. ಆದರೆ ವಾತವರಣ ಬದಲಾವಣೆ, ತಣ್ಣೀರು ಸೇವನೆ ಇವುಗಳಿಂದ ಆರೋಗ್ಯ ಸಮಸ್ಯೆ ಕಾಣಿಸಬಹುದು. ಅದರಲ್ಲೂ ಗಂಟಲು ನೋವಿನ ಸಮಸ್ಯೆ ಈ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಟಾನ್ಸಿಲ್ಗಳು ಸೋಂಕಿಗೆ ಒಳಗಾಗಿದ್ದರೆ, ಸೂಕ್ಷ್ಮಜೀವಿಗಳ ಸಂಭವವು ಹೆಚ್ಚಾಗುತ್ತದೆ ಮತ್ತು ಇತರ ರೋಗಗಳ ಭಯವೂ ಹೆಚ್ಚಾಗುತ್ತದೆ. ಅಗತ್ಯವಿದ್ದರೆ, ನೀವು ಔಷಧಿ ತೆಗೆದುಕೊಳ್ಳಬೇಕು! ಆದರೆ ಮೊದಲಿನಿಂದಲೂ ಸಾಕಷ್ಟು ಪ್ರತಿಜೀವಕಗಳನ್ನು ಆಡಿದ ನಂತರ ದೇಹವು ದುರ್ಬಲವಾಗುತ್ತದೆ! ಇನ್ನೂ ಅನೇಕ ಅಡ್ಡಪರಿಣಾಮಗಳಿವೆ! ಆದ್ದರಿಂದ, ಆರಂಭಿಕ ಹಂತದಲ್ಲಿ, ಔಷಧಿ ಮಾಡಿದರೆ ಕಡಿಮೆಯಾಗುತ್ತದೆ. ಅದರಲ್ಲೂ ಮನೆ ಮದ್ದಿನಿಂದ ನೋವು ನಿವಾರಿಸಬಹುದಾಗಿದೆ.