ಕೆಲವು ಮಂದಿ ಜಿಮ್ನಲ್ಲಿ ವ್ಯಾಯಾಮ ಮಾಡಲು ಬಯಸುತ್ತಾರೆ, ಮತ್ತೆ ಕೆಲವರು ಪ್ರತಿದಿನ 10,000 ಹೆಜ್ಜೆಗಳನ್ನು ಪೂರ್ಣಗೊಳಿಸುವ ಟಾರ್ಗೆಟ್ ಹೊಂದಿರುತ್ತಾರೆ. ಇದನ್ನು ಸಾಮಾನ್ಯವಾಗಿ ಫಿಟ್ ಮತ್ತು ಆರೋಗ್ಯಕರವಾಗಿರಲು ಅನುಸರಿಸುವ ಕ್ರಮಗಳಾಗಿದೆ. ಆದರೆ ಇವೆರಡರಲ್ಲಿ ಯಾವುದು ಬೆಸ್ಟ್? ಈ ಎರಡು ಚಟುವಟಿಕೆಗಳಲ್ಲಿ ಯಾವುದು ಸುಲಭ ಮತ್ತು ನಿಮ್ಮನ್ನು ಹೆಚ್ಚಾಗಿ ಆರೋಗ್ಯವಾಗಿರಿಸುವುದು ಯಾವುದು ಎಂಬುವುದನ್ನು ತಿಳಿದುಕೊಳ್ಳೋಣ.
ಅನಾರೋಗ್ಯ ಹೊಂದಿರುವ ಮಂದಿ ಕಡಿಮೆ ಮತ್ತು ಮಧ್ಯಮ ತೀವ್ರತೆಯಲ್ಲಿ ನಡೆಯುವುದು ಉತ್ತಮ. ಮತ್ತೊಂದೆಡೆ, ಬೈಕರ್ಗಳು, ಕ್ರೀಡಾಪಟುಗಳಂತಹ ಸಕ್ರಿಯ ಜೀವನಶೈಲಿಯನ್ನು ಹೊಂದಿರುವ ಜನರಿಗೆ ಹೆಚ್ಚಿನ ತೀವ್ರತೆಯ ಜೀವನಕ್ರಮದ ಅಗತ್ಯವಿರುತ್ತದೆ. ಆದರೆ ವಾಕಿಂಗ್ ಮತ್ತು ವ್ಯಾಯಾಮ ಎರಡನ್ನೂ ಫಾಲೋ ಮಾಡುವುದು ಬೆಸ್ಟ್ ಯೋಜನೆ ಆಗಿದೆ. ವೀಕೆಂಡ್ನಲ್ಲಿ ಕೂಡ ವಾಕಿಂಗ್ ಮತ್ತು ವ್ಯಾಯಾಮವನ್ನು ನೀವು ಮಾಡಬಹುದು.