ಮುಷ್ಠಿ ಪರೀಕ್ಷೆ: ನಿಮ್ಮ ಎಲ್ಲಾ ಬೆರಳುಗಳನ್ನು ಒಟ್ಟಾಗಿಸಿ ಮುಷ್ಠಿ ಮಾಡಿರಿ. ಗಟ್ಟಿಯಾಗಿ ಹಿಡಿದ ನಂತರ ಕೈಯನ್ನು ಉದ್ದಕ್ಕೆ ಚಾಚಿ. ಈ ರೀತಿ 30 ಸೆಕೆಂಡ್ಗಳವರಗೆ ಹಿಡಿದಿರಿ. ನಂತರ ಅದನ್ನು ಬಿಡಿ, ಬೆರಳುಗಳನ್ನು ಬಿಡಿಸಿ. ಕೂಡಲೇ ನಿಮ್ಮ ಅಂಗೈಯನ್ನು ಗಮನಿಸಿ. ನಿಮ್ಮ ಅಂಗೈ ಬಿಳುಚಿಕೊಂಡಿದೆಯಾ, ಅಥವಾ ಕೈ ಜೋಮು ಹಿಡಿದಿದೆಯಾ ಗಮನಿಸಿ. ರಕ್ತ ಎಷ್ಟು ವೇಗವಾಗಿ ಹರಿಯುತ್ತದೆ ಮತ್ತು ಎಷ್ಟು ಸಮರ್ಪಕವಾಗಿ ಆಕ್ಸಿಜನ್ ಕೊಂಡೊಯ್ಯುತ್ತದೆ ಎನ್ನುವುದನ್ನು ಇದು ತಿಳಿಸುತ್ತದೆ. ಹೆಚ್ಚು ಕಾಲ ಕೈ ಬಿಳುಚಿಕೊಂಡಿದ್ದರೆ ಅಥವಾ ಜೋಮು ಗಟ್ಟಿದರೆ ವೈದ್ಯರನ್ನು ಕಾಣಿರಿ
ಮುಂದಿನ ಪರೀಕ್ಷೆ ಉಗುರಿನದ್ದು. ಉಗುರು ಬೆರಳನ್ನು ಸೇರುವ ಕೊನೆಯ ಭಾಗವನ್ನು ಗಟ್ಟಿಯಾಗಿ ಒತ್ತಿ ಹಿಡಿದುಕೊಳ್ಳಿ. 5 ಸೆಕೆಂಡ್ಗಳವರಗೆ ಹಿಡಿದು ನಂತರ ಬಿಡಿ. ಒಂದರಿಂದ ಮೂರು ಸೆಕೆಂಡ್ಗಳ ಒಳಗೆ ಬಿಳಿಯಾದ ಉಗುರಿನ ಭಾಗಕ್ಕೆ ರಕ್ತ ಹರಿದು ಮತ್ತೆ ನಾರ್ಮಲ್ ಬಣ್ಣ ಬರಬೇಕು, ಆಗ ನೀವು ಆರೋಗ್ಯವಾಗಿದ್ದೀರಾ ಎಂದರ್ಥ. ರಕ್ತ ಮರಳಿ ಹರಿಯಲು ಹೆಚ್ಚು ಸಮಯ ತೆಗೆದುಕೊಂಡರೆ ಅಥವಾ ನೋವು-ಉರಿ ಉಂಟಾದರೆ ವೈದ್ಯರನ್ನು ಕಾಣಿರಿ.
ಯಾವುದೇ ಪೆಟ್ಟಾಗದೆ ಅಥವಾ ಗಾಯವಿಲ್ಲದೆ ಬೆರಳುಗಳು ನೋಯುತ್ತಿದ್ದರೆ ಆಗ ಅದು ಆರೋಗ್ಯದ ನಾನಾ ವಿಚಾರಗಳ ಸೂಚಕ. ಹೆಬ್ಬೆರಳು ನೋಯುತ್ತಿದ್ದರೆ ಉಸಿರಾಟದ ಅಂಗಗಳ ಸಮಸ್ಯೆ ಸೂಚಿಸುತ್ತದೆ. ತೋರುಬೆರಳು ನೋವಾದರೆ ಜೀರ್ಣಕ್ರಿಯೆಯಲ್ಲಿ ಅಥವಾ ದೊಡ್ಡ ಕರುಳಿನಲ್ಲಿ ಸಮಸ್ಯೆ. ಮಧ್ಯದ ಬೆರಳು ನೋವಾದರೆ ರಕ್ತನಾಳಗಳ ಸಮಸ್ಯೆ ಇದೆ ಎಂದರ್ಥ. ಉಂಗುರದ ಬೆರಳಿನಲ್ಲಿ ನೋವುಂಟಾದರೆ ಹೃದಯದ ಆರೋಗ್ಯ ಸಮಸ್ಯೆ ಮತ್ತು ಕಿರುಬೆರಳಿನಲ್ಲಿ ನೋವಿದ್ದರೆ ಸಣ್ಣ ಕರುಳಿನಲ್ಲಿ ಸಮಸ್ಯೆ ಇದೆ ಎಂದರ್ಥ.
ಕಾಲುಗಳ ಮೂಲಕ ಪರೀಕ್ಷೆ: ನೆಲದ ಮೇಲೆ ಆರಾಮಾಗಿ ಮಲಗಿ. ಕೈಗಳನ್ನು ಪಕ್ಕದಲ್ಲಿ ಇರಿಸಿ ಎರಡೂ ಕಾಲುಗಳನ್ನು ಜೊತೆಯಾಗಿ ಮೇಲಕ್ಕೆ ಎತ್ತಿ. ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತಿ 30 ಸೆಕೆಂಡ್ಗಳವರಗೆ ಹಾಗೇ ಇರಿ. ಒಂದು ವೇಳೆ ನಿಮಗೆ 30 ಸೆಕೆಂಡ್ ಹೀಗೆ ಇಟ್ಟುಕೊಳ್ಳೋದು ವಿಪರೀತ ಕಷ್ಟವಾಗ್ತಿದ್ರೆ ಅಥವಾ ತಡೆಯಲಸಾಧ್ಯವಾದಷ್ಟು ನೋವು ಉಂಟಾಗ್ತಿದ್ರೆ ನಿಮಗೆ ಬೆನ್ನು ಮತ್ತು ಕಿಬ್ಬೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದೆ ಎಂದರ್ಥ.