ನೀವು ಹೆಲ್ದಿ ಆಗಿರಬೇಕಾ? ಹಾಗಾದ್ರೆ ಈ ಧಾನ್ಯಗಳನ್ನು ತಿನ್ನಿ, ದೇಹ ತಂಪಾಗಿರುತ್ತೆ!

ರಾಗಿ ದೇಹವನ್ನು ತುಂಬಾ ತಂಪಾಗಿರಿಸುತ್ತದೆ. ಆದ್ದರಿಂದ ಬೇಸಿಗೆ ಕಾಲ ಆರಂಭವಾದಾಗ ರಾಗಿ ಗಂಜಿಯನ್ನು ಮುಖ್ಯ ಆಹಾರವಾಗಿ ಸೇವಿಸಬೇಕು. ರಾಗಿಯಲ್ಲಿ ಪಾಲಿಫಿನಾಲ್ ಮತ್ತು ಫೈಬರ್ ಇರುತ್ತದೆ. ಇದು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

First published:

  • 17

    ನೀವು ಹೆಲ್ದಿ ಆಗಿರಬೇಕಾ? ಹಾಗಾದ್ರೆ ಈ ಧಾನ್ಯಗಳನ್ನು ತಿನ್ನಿ, ದೇಹ ತಂಪಾಗಿರುತ್ತೆ!

    ಹಿಂದಿನ ಕಾಲದಲ್ಲಿ ಸಿರಿಧಾನ್ಯಗಳನ್ನು ಬಡವರ ಆಹಾರ ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಇದೇ ಹೆಲ್ದಿ ಫುಡ್ಗಳ ಲಿಸ್ಟ್ ಸೇರಿಕೊಂಡಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಇವು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ಇವುಗಳ ಸೇವನೆಯಿಂದ ಅನೇಕ ರೋಗಗಳು ಗುಣವಾಗುತ್ತವೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ಧಾನ್ಯಗಳು ಫ್ರೀ ರಾಡಿಕಲ್ಗಳನ್ನು ಹೊಂದಿದೆ. ರೋಗಗಳ ವಿರುದ್ಧ ಹೋರಾಡಲು ಇವು ಹೆಚ್ಚು ಸಹಾಯಕವಾಗಿದೆ. ಅವುಗಳ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

    MORE
    GALLERIES

  • 27

    ನೀವು ಹೆಲ್ದಿ ಆಗಿರಬೇಕಾ? ಹಾಗಾದ್ರೆ ಈ ಧಾನ್ಯಗಳನ್ನು ತಿನ್ನಿ, ದೇಹ ತಂಪಾಗಿರುತ್ತೆ!

    ರಾಗಿ: ರಾಗಿ ದೇಹವನ್ನು ತುಂಬಾ ತಂಪಾಗಿರಿಸುತ್ತದೆ. ಆದ್ದರಿಂದ ಬೇಸಿಗೆ ಕಾಲ ಆರಂಭವಾದಾಗ ರಾಗಿ ಗಂಜಿಯನ್ನು ಮುಖ್ಯ ಆಹಾರವಾಗಿ ಸೇವಿಸಬೇಕು. ರಾಗಿಯಲ್ಲಿ ಪಾಲಿಫಿನಾಲ್ ಮತ್ತು ಫೈಬರ್ ಇರುತ್ತದೆ. ಇದು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, ರಾಗಿ ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ರಾಗಿಯು ಮಧುಮೇಹವನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

    MORE
    GALLERIES

  • 37

    ನೀವು ಹೆಲ್ದಿ ಆಗಿರಬೇಕಾ? ಹಾಗಾದ್ರೆ ಈ ಧಾನ್ಯಗಳನ್ನು ತಿನ್ನಿ, ದೇಹ ತಂಪಾಗಿರುತ್ತೆ!

    ಬಿಳಿ ಜೋಳ: ಬಿಳಿ ಜೋಳ ಈಗ ಸೂಪರ್ ಹೆಲ್ದಿ ಫುಡ್ ಆಗಿದೆ. ಇದು ವಿಟಮಿನ್ ಬಿ ಸಂಕೀರ್ಣದಲ್ಲಿ ಸಮೃದ್ಧವಾಗಿದೆ. ಬಿಳಿ ಜೋಳದಲ್ಲಿ ಫೀನಾಲಿಕ್ ಆಮ್ಲ ಕಂಡುಬರುತ್ತದೆ. ಇದಲ್ಲದೇ, ಇದು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದು ಉರಿಯೂತದ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಇದನ್ನು ನಿತ್ಯ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ. ಈ ಬಿಳಿ ಜೋಳ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

    MORE
    GALLERIES

  • 47

    ನೀವು ಹೆಲ್ದಿ ಆಗಿರಬೇಕಾ? ಹಾಗಾದ್ರೆ ಈ ಧಾನ್ಯಗಳನ್ನು ತಿನ್ನಿ, ದೇಹ ತಂಪಾಗಿರುತ್ತೆ!

    ಸಜ್ಜೆ: ಸಜ್ಜೆ ಎಂದರೆ ಕೇವಲ ಸಜ್ಜೆಅಲ್ಲ, ಸಜ್ಜೆಯನ್ನು ಪೌಷ್ಟಿಕಾಂಶಗಳ ಖಜಾನೆ ಎಂದೇ ಹೇಳಬಹುದು. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ, ಫೈಬರ್, ಮೆಗ್ನೀಸಿಯಮ್, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ವಿವಿಧ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಸಜ್ಜೆಯು ಮಧುಮೇಹವನ್ನು ನಿಯಂತ್ರಿಸಲು ಮತ್ತು ಹೃದಯದ ಆರೋಗ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 57

    ನೀವು ಹೆಲ್ದಿ ಆಗಿರಬೇಕಾ? ಹಾಗಾದ್ರೆ ಈ ಧಾನ್ಯಗಳನ್ನು ತಿನ್ನಿ, ದೇಹ ತಂಪಾಗಿರುತ್ತೆ!

    ಬಾರ್ಲಿ: ನೀವು ನಿತ್ಯವೂ ಬಾರ್ಲಿ ಸೇವನೆ ಮಾಡಿದರೆ, ಆರೋಗ್ಯಕ್ಕೆ ಹಲವಾರು ಲಾಭಗಳು ಸಿಗುತ್ತದೆ. ವಿಶೇಷವಾಗಿ ಬಾರ್ಲಿ ಗಂಜಿಗೆ ಸಾಕಷ್ಟು ಮಹತ್ವವಿದೆ. ಬಾರ್ಲಿ ದೇಹವನ್ನು ತಂಪಾಗಿಡುತ್ತದೆ. ಬಾರ್ಲಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಬಾರ್ಲಿಯು ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳಿದೆ. ಬಾರ್ಲಿಯು ತುಂಬಾ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಆದ್ದರಿಂದ ಮಧುಮೇಹ ರೋಗಿಗಳಿಗೂ ಇದು ತುಂಬಾ ಉಪಯುಕ್ತವಾಗಿದೆ.

    MORE
    GALLERIES

  • 67

    ನೀವು ಹೆಲ್ದಿ ಆಗಿರಬೇಕಾ? ಹಾಗಾದ್ರೆ ಈ ಧಾನ್ಯಗಳನ್ನು ತಿನ್ನಿ, ದೇಹ ತಂಪಾಗಿರುತ್ತೆ!

    ಹುರಿಗಡಲೆ: ಹುರಿಗಡಲೆ ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ. ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವುದರಿಂದ ಹಿಡಿದು ತೂಕವನ್ನು ಕಂಟ್ರೋಲ್ ಮಾಡುವವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಆದರೆ ಇದು ಒರಟಾದ ಧಾನ್ಯವಾಗಿದೆ.

    MORE
    GALLERIES

  • 77

    ನೀವು ಹೆಲ್ದಿ ಆಗಿರಬೇಕಾ? ಹಾಗಾದ್ರೆ ಈ ಧಾನ್ಯಗಳನ್ನು ತಿನ್ನಿ, ದೇಹ ತಂಪಾಗಿರುತ್ತೆ!

    ಹುರಿಗಡಲೆಯಲ್ಲಿ ಹೆಚ್ಚು ಪ್ರೋಟೀನ್ ಇದೆ. ಆದ್ದರಿಂದ ತಜ್ಞರು ಇದನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಇದು ದೇಹವನ್ನು ತಂಪಾಗಿಸುತ್ತದೆ. ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES