Morning Routine: ಬೆಳಗ್ಗೆ ಎದ್ದ ಕೂಡಲೇ ನೀವು ಈ ರೂಟೀನ್​ ಫಾಲೋ ಮಾಡಿದ್ರೆ, ಜೀವನದಲ್ಲಿ ಸಕ್ಸಸ್​ ಆಗ್ತೀರ!

Life Style: ನೀವು ಜೀವನದಲ್ಲಿ ಬೇಗ ಯಶಸ್ವಿ ಕಾಣಬೇಕಾದಲ್ಲಿ ಈ ಟಿಪ್ಸ್​ ಫಾಲೋ ಮಾಡ್ಲೇಬೇಕು. ಇಲ್ಲಿರುವ ಟಿಪ್ಸ್​ಗಳನ್ನು ಫಾಲೋ ಮಾಡಿ.

First published:

  • 19

    Morning Routine: ಬೆಳಗ್ಗೆ ಎದ್ದ ಕೂಡಲೇ ನೀವು ಈ ರೂಟೀನ್​ ಫಾಲೋ ಮಾಡಿದ್ರೆ, ಜೀವನದಲ್ಲಿ ಸಕ್ಸಸ್​ ಆಗ್ತೀರ!

    ನಮ್ಮ ಜೀವನದ ಯಶಸ್ಸು (Successful Life) ನಾವು ನಮ್ಮ ಜೀವನದಲ್ಲಿ ರೂಢಿಸಿಕೊಂಡ ಜೀವನಶೈಲಿ ಮತ್ತು ಒಳ್ಳೆಯ ಅಭ್ಯಾಸಗಳ ಮೇಲೂ ಸಹ ಅವಲಂಬಿತವಾಗಿರುತ್ತವೆ. ಏಕೆಂದರೆ ಒಳ್ಳೆಯ ಅಭ್ಯಾಸ ಅಂತ ಹೇಳಿದಾಗ ಮೊದಲು ತಲೆಗೆ ಬರುವುದು ಬೆಳಗ್ಗೆ ಹಾಸಿಗೆಯಿಂದ ಬೇಗನೆ ಎದ್ದೇಳುವುದು ಮತ್ತು ವಾಕಿಂಗ್ (Walking), ಜಾಗಿಂಗ್, ವ್ಯಾಯಾಮ ಮತ್ತು ಯೋಗ ಮಾಡುವುದು. ಇಂತಹ ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಂಡವರು ಬೆಳಗ್ಗೆ ಬೇಗನೆ ಎದ್ದು, ತಮ್ಮ ಎಲ್ಲಾ ನಿತ್ಯ ಕೆಲಸಗಳನ್ನು ಮುಗಿಸಿಕೊಂಡು ಕೆಲಸವನ್ನು ಬೇರೆಯವರಿಗಿಂತ ಬೇಗನೆ ಶುರು ಮಾಡುತ್ತಾರೆ.

    MORE
    GALLERIES

  • 29

    Morning Routine: ಬೆಳಗ್ಗೆ ಎದ್ದ ಕೂಡಲೇ ನೀವು ಈ ರೂಟೀನ್​ ಫಾಲೋ ಮಾಡಿದ್ರೆ, ಜೀವನದಲ್ಲಿ ಸಕ್ಸಸ್​ ಆಗ್ತೀರ!

    ಬೆಳಗ್ಗೆ ಬೇಗನೆ ಎದ್ದೇಳುವುದು: ಯಶಸ್ವಿ ಜನರಿಗಿರುವ ಒಂದು ಸಾಮಾನ್ಯವಾದ ಅಭ್ಯಾಸವೆಂದರೆ ಬೆಳಗ್ಗೆ ಹೊತ್ತಿನಲ್ಲಿ ಹಾಸಿಗೆಯಿಂದ ಬೇಗನೆ ಎದ್ದೇಳುವುದು. ಬೇಗನೆ ಎದ್ದೇಳುವುದು ಹೆಚ್ಚಿನ ಉತ್ಪಾದಕತೆ, ಸುಧಾರಿತ ಮಾನಸಿಕ ಆರೋಗ್ಯ ಮತ್ತು ಹೆಚ್ಚಿನದನ್ನು ಸಾಧಿಸುವ ಸಾಮರ್ಥ್ಯ ಸೇರಿದಂತೆ ಅನೇಕ ಪ್ರಯೋಜನಗಳನ್ನು ಹೊಂದಿದೆ.

    MORE
    GALLERIES

  • 39

    Morning Routine: ಬೆಳಗ್ಗೆ ಎದ್ದ ಕೂಡಲೇ ನೀವು ಈ ರೂಟೀನ್​ ಫಾಲೋ ಮಾಡಿದ್ರೆ, ಜೀವನದಲ್ಲಿ ಸಕ್ಸಸ್​ ಆಗ್ತೀರ!

    ಬೆಳಗ್ಗೆ ವ್ಯಾಯಾಮ ಮಾಡುವುದು: ಆರೋಗ್ಯಕರ ಜೀವನಶೈಲಿಯನ್ನು ನೀವು ರೂಢಿಸಿಕೊಳ್ಳಬೇಕು ಎಂದರೆ ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ ಮಾಡುವುದು ಅತ್ಯಗತ್ಯ ಮತ್ತು ಅನೇಕ ಯಶಸ್ವಿ ಜನರು ಅದನ್ನು ತಮ್ಮ ಬೆಳಗಿನ ದಿನಚರಿಯಲ್ಲಿ ಅಳವಡಿಸಿಕೊಳ್ಳುತ್ತಾರೆ.

    MORE
    GALLERIES

  • 49

    Morning Routine: ಬೆಳಗ್ಗೆ ಎದ್ದ ಕೂಡಲೇ ನೀವು ಈ ರೂಟೀನ್​ ಫಾಲೋ ಮಾಡಿದ್ರೆ, ಜೀವನದಲ್ಲಿ ಸಕ್ಸಸ್​ ಆಗ್ತೀರ!

    ಪೌಷ್ಟಿಕ ಉಪಾಹಾರ ತಿನ್ನುವುದು: "ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟ" ಎಂಬ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ ಮತ್ತು ಯಶಸ್ವಿ ಜನರು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಪೌಷ್ಠಿಕಾಂಶದ ಉಪಾಹಾರವನ್ನು ತಿನ್ನುವುದು ನಿಮ್ಮ ದಿನವನ್ನು ಪ್ರಾರಂಭಿಸಲು ಅಗತ್ಯವಿರುವ ಶಕ್ತಿ ಮತ್ತು ಪೋಷಕಾಂಶಗಳನ್ನು ನೀಡುತ್ತದೆ.

    MORE
    GALLERIES

  • 59

    Morning Routine: ಬೆಳಗ್ಗೆ ಎದ್ದ ಕೂಡಲೇ ನೀವು ಈ ರೂಟೀನ್​ ಫಾಲೋ ಮಾಡಿದ್ರೆ, ಜೀವನದಲ್ಲಿ ಸಕ್ಸಸ್​ ಆಗ್ತೀರ!

    ಬೆಳಗಿನ ಹೊತ್ತು ಧ್ಯಾನ ಮಾಡುವುದು: ಧ್ಯಾನವು ಶತಮಾನಗಳಿಂದ ಚಾಲ್ತಿಯಲ್ಲಿರುವ ಅಭ್ಯಾಸವಾಗಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಇನ್ನೂ ಜಾಸ್ತಿ ಜನಪ್ರಿಯತೆಯನ್ನು ಗಳಿಸಿದೆ. ಅನೇಕ ಯಶಸ್ವಿ ಜನರು ತಮ್ಮ ಬೆಳಗಿನ ದಿನಚರಿಯ ಭಾಗವಾಗಿ ಧ್ಯಾನವನ್ನು ಅಭ್ಯಾಸ ಮಾಡುತ್ತಾರೆ. ಧ್ಯಾನವು ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಲು, ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 69

    Morning Routine: ಬೆಳಗ್ಗೆ ಎದ್ದ ಕೂಡಲೇ ನೀವು ಈ ರೂಟೀನ್​ ಫಾಲೋ ಮಾಡಿದ್ರೆ, ಜೀವನದಲ್ಲಿ ಸಕ್ಸಸ್​ ಆಗ್ತೀರ!

    ಜಗತ್ತಿನ ಸುದ್ದಿಗಳನ್ನು ತಿಳಿದುಕೊಳ್ಳುವುದು: ಇಂದಿನ ಜಗತ್ತಿನಲ್ಲಿ ಯಶಸ್ಸಿಗೆ ಪ್ರಸ್ತುತ ಘಟನೆಗಳ ಬಗ್ಗೆ ಮಾಹಿತಿ ಇರುವುದು ತುಂಬಾನೇ ಮುಖ್ಯವಾಗಿರುತ್ತದೆ. ಅನೇಕ ಯಶಸ್ವಿ ಜನರು ಬೆಳಗ್ಗೆ ಜಗತ್ತಿನಲ್ಲಿ ಏನೆಲ್ಲಾ ನಡೀತಾ ಇದೆ ಅಂತ ತಿಳಿದುಕೊಳ್ಳಲು ಸ್ವಲ್ಪ ಸಮಯವನ್ನು ಮೀಸಲಿಡುತ್ತಾರೆ. ಎಂದರೆ ದಿನಪತ್ರಿಕೆಗಳನ್ನು ಓದುವುದು, ಸ್ವಲ್ಪ ಹೊತ್ತು ಟಿವಿಯಲ್ಲಿ ನ್ಯೂಸ್ ನೋಡುವುದು ಮತ್ತು ಒಳ್ಳೆಯ ಮಾಹಿತಿಗಳಿರುವ ಪಾಡ್ಕಾಸ್ಟ್ ಗಳನ್ನು ಕೇಳುವುದನ್ನು ಒಳಗೊಂಡಿರುತ್ತದೆ. ಆದಷ್ಟು ಈ ನಕಾರಾತ್ಮಕ ಸುದ್ದಿಗಳನ್ನು ತಿಳಿದುಕೊಳ್ಳದೆ ಇದ್ದರೆ ಒಳ್ಳೆಯದು.

    MORE
    GALLERIES

  • 79

    Morning Routine: ಬೆಳಗ್ಗೆ ಎದ್ದ ಕೂಡಲೇ ನೀವು ಈ ರೂಟೀನ್​ ಫಾಲೋ ಮಾಡಿದ್ರೆ, ಜೀವನದಲ್ಲಿ ಸಕ್ಸಸ್​ ಆಗ್ತೀರ!

    ದೀರ್ಘಕಾಲೀನ ಗುರಿಗಳ ಬಗ್ಗೆ ಯೋಚಿಸುವುದು: ಯಶಸ್ವಿ ಜನರು ತಮ್ಮ ದೀರ್ಘಕಾಲೀನ ಗುರಿಗಳ ಬಗ್ಗೆ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರುತ್ತಾರೆ ಮತ್ತು ಅವುಗಳನ್ನು ಸಾಧಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಪ್ರತಿದಿನ ಬೆಳಗ್ಗೆ ತಮ್ಮ ಗುರಿಗಳ ಬಗ್ಗೆ ಸ್ವಲ್ಪ ಹೊತ್ತು ಕುಳಿತು ಯೋಚಿಸುತ್ತಾರೆ ಮತ್ತು ಹೀಗೆ ಮಾಡುವುದರಿಂದ ಅವರಿಗೆ ಪ್ರೇರೇಪಣೆ ಮತ್ತು ಏಕಾಗ್ರತೆ ಸಾಧಿಸಲು ಸಹಾಯವಾಗುತ್ತದೆ.

    MORE
    GALLERIES

  • 89

    Morning Routine: ಬೆಳಗ್ಗೆ ಎದ್ದ ಕೂಡಲೇ ನೀವು ಈ ರೂಟೀನ್​ ಫಾಲೋ ಮಾಡಿದ್ರೆ, ಜೀವನದಲ್ಲಿ ಸಕ್ಸಸ್​ ಆಗ್ತೀರ!

    ದಿನ ಹೇಗಿರಬೇಕು ಅಂತ ಯೋಜಿಸುವುದು: ನಿಮ್ಮ ದಿನವನ್ನು ಮೊದಲೇ ಯೋಜಿಸುವುದು ಯಶಸ್ವಿ ಜನರ ಅತ್ಯಗತ್ಯ ಅಭ್ಯಾಸವಾಗಿದೆ. ನಿಮ್ಮ ದಿನವನ್ನು ಮೊದಲೇ ನಿಗದಿಪಡಿಸಿಕೊಳ್ಳುವುದು ನಿಮಗೆ ಸಂಘಟಿತವಾಗಿರಲು, ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡಲು ಸಹಾಯ ಮಾಡುತ್ತದೆ.

    MORE
    GALLERIES

  • 99

    Morning Routine: ಬೆಳಗ್ಗೆ ಎದ್ದ ಕೂಡಲೇ ನೀವು ಈ ರೂಟೀನ್​ ಫಾಲೋ ಮಾಡಿದ್ರೆ, ಜೀವನದಲ್ಲಿ ಸಕ್ಸಸ್​ ಆಗ್ತೀರ!

    ತುಂಬಾನೇ ಮುಖ್ಯವಾದ ಕೆಲಸಗಳತ್ತ ಗಮನ ಹರಿಸುವುದು: ಯಶಸ್ವಿ ಜನರು ತಮ್ಮ ದೀರ್ಘಕಾಲೀನ ಗುರಿಗಳಿಗೆ ಕೊಡುಗೆ ನೀಡುವ ಹೆಚ್ಚಿನ ಮೌಲ್ಯದ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಾರೆ. ಹೆಚ್ಚಿನ ಮೌಲ್ಯದ ಚಟುವಟಿಕೆಗಳು ಎಂದರೆ ಜೀವನಕ್ಕೆ ಅರ್ಥಪೂರ್ಣ ಮತ್ತು ನಿಮ್ಮ ಜೀವನ ಮತ್ತು ಕೆಲಸದ ಮೇಲೆ ಗಮನಾರ್ಹ ಪರಿಣಾಮ ಬೀರುವ ಕಾರ್ಯಗಳು ಅಂತ ಅರ್ಥ.

    MORE
    GALLERIES