ಚುನಾವಣಾ ಅಧಿಕಾರಿಗಳು ಅಜ್ಜಿಯನ್ನು ತಾವೇ ಕರೆದುಕೊಂಡು ಹೋಗಿ ಮತದಾನ ಮಾಡಿದ್ದಾರೆ. ಆದರೆ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಅಜ್ಜಿ ತೋರಿಸಿದ ಚಿಹ್ನೆಗೆ ಮತವನ್ನು ಹಾಕಲಿಲ್ಲ, ಬೇರೆ ಗುರುತಿಗೆ ಮತ ಹಾಕಿದ್ದಾರೆ ಎಂದು ಅಜ್ಜಿ ಆರೋಪ ಮಾಡಿದ್ದಾರೆ. ಹೀಗಾಗಿ ಮತಗಟ್ಟೆಯ ಎದುರು 85 ವರ್ಷದ ಅಜ್ಜಿ ಮುಕ್ತುಂಬೀ ದೊಡ್ಡಮನಿ ಮತಗಟ್ಟೆಯ ಎದುರು ಧರಣಿಗೆ ಕುಳಿತಿದ್ದಾರೆ.