Madikeri: ಮೇ 26ರಿಂದ 3 ದಿನಗಳ ಕಾಲ ಮಾವು - ಹಲಸು ಮೇಳ

Mango Mela: ಈಗಾಗಲೇ ಹಲಸು ಹಾಗು ಮಾವಿನ ಸೀಸನ್​ ಆರಂಭವಾಗಿದ್ದು, ರುಚಿ ರುಚಿಯಾದ ಹಣ್ಣುಗಳಿಗಾಗಿ ಜನ ಮಾರುಕಟ್ಟೆಯಲ್ಲೆಲ್ಲಾ ಹುಡುಕುತ್ತಿದ್ದಾರೆ. ಹಾಗೆಯೇ, ಕೆಲವು ಕಡೆ ಮಾವು ಹಾಗೂ ಹಲಸಿನ ಮೇಳ ಸಹ ನಡೆಯುತ್ತಿದ್ದು, ಮಡಿಕೇರಿಯಲ್ಲಿ ಸಹ ಸದ್ಯದಲ್ಲಿ ಮೇಳ ನಡೆಯಲಿದ್ದು ಅದರ ಮಾಹಿತಿ ಇಲ್ಲಿದೆ.

First published:

 • 17

  Madikeri: ಮೇ 26ರಿಂದ 3 ದಿನಗಳ ಕಾಲ ಮಾವು - ಹಲಸು ಮೇಳ

  ಮಡಿಕೇರಿಯಲ್ಲಿ ನೈಸರ್ಗಿಕ ಹಲಸು ಹಾಗೂ ಮಾವಿನ ಮೇಳ ನಡೆಯಲಿದ್ದು, ಈ ಅದ್ಭುತ ಅವಕಾಶವನ್ನು ಬಳಸಿಕೊಂಡು ಮಾವು ಹಾಗೂ ಹಲಸು ಪ್ರಿಯರು ರುಚಿಕರವಾದ ಹಣ್ಣುಗಳನ್ನು ಖರೀದಿ ಮಾಡಬಹುದಾಗಿದೆ.

  MORE
  GALLERIES

 • 27

  Madikeri: ಮೇ 26ರಿಂದ 3 ದಿನಗಳ ಕಾಲ ಮಾವು - ಹಲಸು ಮೇಳ

  ಮೇ 26 ರಿಂದ 28ರ ತನಕ ಈ ಮೇಳ ನಡೆಯಲಿದ್ದು, ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಹಾಪ್‍ಕಾಮ್ಸ್ ಆವರಣದಲ್ಲಿ ಮೇಳ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್​ ತಿಳಿಸಿದ್ದಾರೆ.

  MORE
  GALLERIES

 • 37

  Madikeri: ಮೇ 26ರಿಂದ 3 ದಿನಗಳ ಕಾಲ ಮಾವು - ಹಲಸು ಮೇಳ

  ಕಳೆದ ಬಾರಿ ಸಹ ಈ ಹಲಸು ಹಾಗೂ ಮಾವಿನ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಮಯದಲ್ಲಿ ಜನರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆ ಈ ಬಾರಿ ಸಹ 3 ದಿನಗಳ ಕಾಲ ಈ ಮೇಳವನ್ನು ಆಯೋಜಿಸಲಾಗಿದೆ.

  MORE
  GALLERIES

 • 47

  Madikeri: ಮೇ 26ರಿಂದ 3 ದಿನಗಳ ಕಾಲ ಮಾವು - ಹಲಸು ಮೇಳ

  ವಿಶೇಷ ರೀತಿಯ ಹಲಸು ಹಾಗು ಮಾವಿನ ಹಣ್ಣನ್ನು ಗ್ರಾಹಕರಿಗೆ ಪರಿಚಯಿಸುವುದಲ್ಲದೇ ರಾಸಾಯನಿಕ ಮುಕ್ತ ಹಣ್ಣುಗಳನ್ನು ಖರೀದಿಸುವಂತಾಗಲಿ ಎಂಬುದು ಈ ಮೇಳದ ಉದ್ದೇಶವಾಗಿದ್ದು, ಈ ಬಾರಿ ರಾಮನಗರ, ಮಂಡ್ಯ, ಮೈಸೂರು ಹಾಗೂ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಹಣ್ಣು ಬೆಳೆಗಾರರು ಆಗಮಿಸಲಿದ್ದಾರೆ.

  MORE
  GALLERIES

 • 57

  Madikeri: ಮೇ 26ರಿಂದ 3 ದಿನಗಳ ಕಾಲ ಮಾವು - ಹಲಸು ಮೇಳ

  ಇದು ಬೆಳಗಾರರಿಗೆ ಬಹಳ ಉತ್ತಮವಾದ ಅವಕಾಶವಾಗಿದ್ದು ಮಾರಾಟಗಾರರಿಗೆ ನಷ್ಟವಾಗದಂತೆ ಹಾಗೂ ಗ್ರಾಹಕರಿಗೆ ಹೊರೆಯಾಗದಂತೆ ದರ ನಿಗಧಿ ಮಾಡಲಾಗುತ್ತದೆ. ಅಲ್ಲದೇ, ಉತ್ತಮ ರೀತಿಯ ಹಣ್ಣುಗಳನ್ನು ಹುಡುಕುವ ಜನರಿಗೆ ಸಹ ಒಂದೇ ಸೂರಿನಡಿ ವಿವಿಧ ರೀತಿಯ ಹಣ್ಣುಗಳು ಲಭಿಸುವುದು ನಿಜಕ್ಕೂ ಸಂತಸದ ಸಂಗತಿ

  MORE
  GALLERIES

 • 67

  Madikeri: ಮೇ 26ರಿಂದ 3 ದಿನಗಳ ಕಾಲ ಮಾವು - ಹಲಸು ಮೇಳ

  ಇನ್ನು ಗ್ರಾಹಕರು ಮತ್ತು ಬೆಳೆಗಾರರ ನಡುವೆ ಹಾಪ್‍ಕಾಮ್ಸ್ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 15 ರಿಂದ 20 ತಳಿತ ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣನ್ನು ಈ ಬಾರಿ ಪರಿಚಯ ಮಾಡಿಸಲು ತಯಾರಿ ನಡೆಸಲಾಗಿದೆ.

  MORE
  GALLERIES

 • 77

  Madikeri: ಮೇ 26ರಿಂದ 3 ದಿನಗಳ ಕಾಲ ಮಾವು - ಹಲಸು ಮೇಳ

  ಕೇವಲ ಹಣ್ಣುಗಳು ಮಾತ್ರವಲ್ಲದೇ ಮಾವು ಹಾಗೂ ಹಲಸಿನಿಂದ ಮಾಡಿದ ಉತ್ಪನ್ನಗಳನ್ನು ಸಹ ಈ ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ. ಕಳೆದ ಬಾರಿ ಸುಮಾರು 15 ಸ್ಟಾಲ್​ಗಳನ್ನು ಹಾಕಲಾಗಿತ್ತು. ಆದರೆ ಈ ಬಾರಿ 20 ರಿಂದ 25 ಸ್ಟಾಲ್​ಗಳನ್ನು ಹಾಕಲು ನಿರ್ಧಾರ ಮಾಡಲಾಗಿದೆ.

  MORE
  GALLERIES