ಬೀದರ್ ಕಲಬುರಗಿ ಮಾರ್ಗವಾಗಿ ವಿಶೇಷ ರೈಲು ಸಂಚರಿಸಲಿದ್ದು ಈ ಭಾಗದ ಪ್ರಯಾಣಿಕರಿಗೆ ಅನುಕೂಲ ಉಂಟಾಗಲಿದೆ. (ಸಾಂದರ್ಭಿಕ ಚಿತ್ರ) ಆಯ್ದ ಎಂಟು ದಿನಗಳ ಕಾಲ ಬೀದರ್- ಕಲಬುರಗಿ ಮಾರ್ಗವಾಗಿ ನಾದೆಂಡ್-ಯಶವಂತಪುರ ವಿಶೇಷ ರೈಲು ಓಡಿಸಲು ದಕ್ಷಿಣ ಮಧ್ಯೆ ರೈಲ್ವೆ ಇಲಾಖೆ ತೀರ್ಮಾನಿಸಿದೆ. (ಸಾಂದರ್ಭಿಕ ಚಿತ್ರ) ಈ ವಿಶೇಷ ರೈಲು (07093) ಸೋಮವಾರ ಮಧ್ಯಾಹ್ನ 1:05ಕ್ಕೆ ನಾಂದೇಡ್ನಿಂದ ಹೊರಟು ಮಂಗಳವಾರ ಬೆಳಗ್ಗೆ 11ಕ್ಕೆ ಯಶವಂತಪುರ ತಲುಪಲಿದೆ. (ಸಾಂದರ್ಭಿಕ ಚಿತ್ರ) 07094 ರೈಲು ಮಂಗಳವಾರ ಮಧ್ಯಾಹ್ನ 4:15ಕ್ಕೆ ಯಶವಂತಪುರದಿಂದ ಹೊರಟು ಬುಧವಾರ ಮಧ್ಯಾಹ್ನ 1ಗಂಟೆಗೆ ನಾಂದೇಡ್ ತಲುಪಲಿದೆ. (ಸಾಂದರ್ಭಿಕ ಚಿತ್ರ) 07094 ರೈಲು ಮಂಗಳವಾರ ಮಧ್ಯಾಹ್ನ 4:15ಕ್ಕೆ ಯಶವಂತಪುರದಿಂದ ಹೊರಟು ಬುಧವಾರ ಮಧ್ಯಾಹ್ನ 1ಗಂಟೆಗೆ ನಾಂದೇಡ್ ತಲುಪಲಿದೆ. (ಸಾಂದರ್ಭಿಕ ಚಿತ್ರ) ನಾದೆಂಡ್-ಯಶವಂತಪುರ ಮಾರ್ಗದಲ್ಲಿ ಡಿಸೆಂಬರ್ 5, 12, 19 ಮತ್ತು 26ರಂದು ಹಾಗೂ ಯಶವಂತಪುರ-ನಾದೇಂಡ್ ರೈಲು ಡಿಸೆಂಬರ್ 6, 13, 20, ಹಾಗೂ 27ರಂದು ಸಂಚರಿಸಲಿದೆ. (ಸಾಂದರ್ಭಿಕ ಚಿತ್ರ) ಈ ರೈಲು 2ಎಸಿ, 3ಎಸಿ, ಸ್ಲೀಪರ್ ಕ್ಲಾಸ್, ಸಾಮಾನ್ಯ ಬೋಗಿಗಳನ್ನು ಹೊಂದಿರುತ್ತದೆ. (ಸಾಂದರ್ಭಿಕ ಚಿತ್ರ)