Kalaburagi: ಕ್ರಾಂತಿ ಗೀತೆಯೇ ಗಟ್ಟಿಮೇಳ! ಕಲಬುರಗಿಯಲ್ಲಿ ವಿಶಿಷ್ಟ ಮಂತ್ರ ಮಾಂಗಲ್ಯ

ಮದುವೆ ಅಂದ್ರೆ ಅಲ್ಲೊಂದು ಮಂಟಪ, ಗಟ್ಟಿಮೇಳದ ಸದ್ದು, ಮಂತ್ರ ಘೋಷ, ಮಾಂಗಲ್ಯ ಧಾರಣೆ ಮಾಮೂಲು. ಆದರೆ ಅದೆಲ್ಲಕ್ಕೂ ವಿಭಿನ್ನ ಮದುವೆಯೊಂದು ಇಲ್ಲಿ ನಡೆಯಿತು.

First published:

  • 18

    Kalaburagi: ಕ್ರಾಂತಿ ಗೀತೆಯೇ ಗಟ್ಟಿಮೇಳ! ಕಲಬುರಗಿಯಲ್ಲಿ ವಿಶಿಷ್ಟ ಮಂತ್ರ ಮಾಂಗಲ್ಯ

    ಮಂತ್ರ ಘೋಷಗಳಿರಲಿಲ್ಲ, ಗಟ್ಟಿಮೇಳದ ಸದ್ದಿರಲಿಲ್ಲ, ಹೇಳೋದಕ್ಕೆ ಮದುವೆ ಮಂಟಪನೂ ಇರಲಿಲ್ಲ, ಹೂ ಅಲಂಕಾರ, ದಿಬ್ಬಣ ಯಾವುದೂ ಇರಲಿಲ್ಲ. ಆದರೂ ಅಲ್ಲಿ ನಡೆಯಿತು ಸರಳವಾದ ವಿವಾಹ ಕಾರ್ಯಕ್ರಮ. ಹಾರೈಕೆಯೇ ಅಕ್ಷತೆಗಳಾಗಿ, ಅಗ್ನಿಸಾಕ್ಷಿ ಬಲದು ಮನಸಾಕ್ಷಿಯನ್ನೇ ಅಪ್ಪಿಕೊಂಡು ಮದುವೆ ನಡೆಯಿತು. ಹಾಗಿದ್ರೆ ಹೀಗೆ ಮದುವೆಯಾಗಿದ್ದು ಯಾರು? ಏನಿವರ ಉದ್ದೇಶ? ಹೇಗಿತ್ತು ಮದುವೆ ಸಂಭ್ರಮ ಅಂತೀರಾ? ಅದೆಲ್ಲವನ್ನೂ ಹೇಳ್ತೀವಿ ನೋಡಿ.

    MORE
    GALLERIES

  • 28

    Kalaburagi: ಕ್ರಾಂತಿ ಗೀತೆಯೇ ಗಟ್ಟಿಮೇಳ! ಕಲಬುರಗಿಯಲ್ಲಿ ವಿಶಿಷ್ಟ ಮಂತ್ರ ಮಾಂಗಲ್ಯ

    ಹೀಗೆ ಅದ್ಯಾವ ಸಂಪ್ರದಾಯವನ್ನು ಪಾಲಿಸದೇ ಸರಳವಾಗಿ ಮದುವೆ ಆಚರಿಸಿಕೊಂಡ ಇವರಿಬ್ಬರೂ ಕಲಬುರಗಿ ಜಿಲ್ಲೆಯ ಯುವ ಜೋಡಿ. ಇಬ್ಬರೂ ಪದವೀಧರರು. ವರ ರಾಮಲಿಂಗಪ್ಪ ಬಿ.ಎನ್. ಅವರು ಎಂ.ಎ. ಪದವೀಧರನಾದರೆ, ವಧು ಶಿಲ್ಪಾ ಬಿ.ಕೆ. ಕೂಡಾ ಸ್ನಾತಕೋತ್ತರ ಪದವೀಧರೆ.

    MORE
    GALLERIES

  • 38

    Kalaburagi: ಕ್ರಾಂತಿ ಗೀತೆಯೇ ಗಟ್ಟಿಮೇಳ! ಕಲಬುರಗಿಯಲ್ಲಿ ವಿಶಿಷ್ಟ ಮಂತ್ರ ಮಾಂಗಲ್ಯ

    ಜೊತೆಗೆ ಇವರಿಬ್ಬರು ಸಾಮಾಜಿಕ ಹೋರಾಟಗಾರಗಳಲ್ಲಿ ಗುರುತಿಸಿಕೊಂಡವರು. ರಾಮಲಿಂಗಪ್ಪ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿಯಾದರೆ, ಶಿಲ್ಪಾ ಎಐಡಿಎಸ್ಓ ಇದರ ಕಲಬುರಗಿ ಜಿಲ್ಲಾ ಸಮಿತಿ ಕಾರ್ಯಕಾರಿಣಿ ಸದಸ್ಯೆ ಆಗಿದ್ದಾರೆ.

    MORE
    GALLERIES

  • 48

    Kalaburagi: ಕ್ರಾಂತಿ ಗೀತೆಯೇ ಗಟ್ಟಿಮೇಳ! ಕಲಬುರಗಿಯಲ್ಲಿ ವಿಶಿಷ್ಟ ಮಂತ್ರ ಮಾಂಗಲ್ಯ

    ವಿಶೇಷ ಅಂದ್ರೆ ರಾಮಲಿಂಗಪ್ಪ ಹಾಗೂ ಶಿಲ್ಪ ಇವರಿಬ್ಬರೂ ವಿಭಿನ್ನ ಜಾತಿಗೆ ಸೇರಿದವರು. ಆದರೆ, ಅದ್ಯಾವ ಅಡ್ಡಿ ಆತಂಕವಿಲ್ಲದೇ, ಯಾವುದೇ ಬಗೆಯ ವಿರೋಧವಿಲ್ಲದೇ ಕಲಬುರಗಿ ನಗರದ ಮಹರ್ಷಿ ವಾಲ್ಮೀಕ ಭವನದಲ್ಲಿ ಸತಿ-ಪತಿಗಳಾದರು.

    MORE
    GALLERIES

  • 58

    Kalaburagi: ಕ್ರಾಂತಿ ಗೀತೆಯೇ ಗಟ್ಟಿಮೇಳ! ಕಲಬುರಗಿಯಲ್ಲಿ ವಿಶಿಷ್ಟ ಮಂತ್ರ ಮಾಂಗಲ್ಯ

    ಎರಡು ಮಂದಿಯ ಕುಟುಂಬಿಕರು ಕೂಡಾ ಅಷ್ಟೇ ಖುಷಿಯಿಂದ ಪಾಲ್ಗೊಂಡು ನವ ದಂಪತಿಯನ್ನ ಹಾರೈಸಿದರು.

    MORE
    GALLERIES

  • 68

    Kalaburagi: ಕ್ರಾಂತಿ ಗೀತೆಯೇ ಗಟ್ಟಿಮೇಳ! ಕಲಬುರಗಿಯಲ್ಲಿ ವಿಶಿಷ್ಟ ಮಂತ್ರ ಮಾಂಗಲ್ಯ

    ಎಲ್ಲ ರೀತಿಯ ಸಂಪ್ರದಾಯಗಳನ್ನು ಮೀರಿ ಮದುವೆಯಾದ ಜೋಡಿಗೆ ಹಲವು ಹಿರಿಯ, ಕಿರಿಯ ಹೋರಾಟಗಾರರು ಅಭಿನಂದಿಸಿದರು. ಅಷ್ಟೇ ಅಲ್ದೇ, ತಮ್ಮ ಹೋರಾಟದ ಹಿನ್ನೆಲೆ ಮೆಲುಕು ಹಾಕುವ ಸಲುವಾಗಿ ಅವರ ಸ್ನೇಹಿತರು ಕ್ರಾಂತಿ ಗೀತೆ ಹಾಡಿ ಇನ್ನಷ್ಟು ಹುರಿದುಂಬಿಸಿದರು. ಸರಳ ರೀತಿಯ ಮದುವೆ ಸಭಾಂಗಣವು ಹೊಸ ಬಗೆಯ ಕ್ರಾಂತಿಗೂ ಪ್ರೇರಣೆಯಾಯಿತು.

    MORE
    GALLERIES

  • 78

    Kalaburagi: ಕ್ರಾಂತಿ ಗೀತೆಯೇ ಗಟ್ಟಿಮೇಳ! ಕಲಬುರಗಿಯಲ್ಲಿ ವಿಶಿಷ್ಟ ಮಂತ್ರ ಮಾಂಗಲ್ಯ

    ಹೌದು, ಈ ನವ ದಂಪತಿ ಮದುವೆಯನ್ನೂ ಹೋರಾಟದ ಒಂದು ಭಾಗ ಅನ್ನೋ ಹಾಗೆ ಸ್ವೀಕರಿಸಿದ್ದಾರೆ. ಅಂತರ್ಜಾತಿ ವಿವಾಹ, ಸರಳ ಹಾಗೂ ಪೌರೋಹಿತ್ಯ ಸಂಪ್ರದಾಯಗಳನ್ನು ಮುರಿದು ಇಂತಹ ಮದುವೆ ಆಗಿರುವುದು ಕೂಡಾ ಹೋರಾಟದ ಭಾಗವೆಂದೇ ದಂಪತಿ ಭಾವಿಸಿಕೊಂಡಿದ್ದಾರೆ.

    MORE
    GALLERIES

  • 88

    Kalaburagi: ಕ್ರಾಂತಿ ಗೀತೆಯೇ ಗಟ್ಟಿಮೇಳ! ಕಲಬುರಗಿಯಲ್ಲಿ ವಿಶಿಷ್ಟ ಮಂತ್ರ ಮಾಂಗಲ್ಯ

    ಅಲ್ಲದೇ, ಮಂತ್ರ ಮಾಂಗಲ್ಯಗಳಿಲ್ಲದೇ ಇತರರಿಗೂ ಮಾದರಿಯಾದೆವು ಅನ್ನೋ ಆತ್ಮ ತೃಪ್ತಿ ಈ ನವ ದಂಪತಿ ಮುಖದಲ್ಲಿ ಎದ್ದು ಕಾಣುತ್ತಿತ್ತು.

    MORE
    GALLERIES