Kalburgi: ಕಲಬುರಗಿ ಜನತೆಗೆ ಸುಲಭದಲ್ಲಿ ಸಿಗುತ್ತೆ ನೋಡಿ ಲೋನ್, ಜನವರಿ 26ರಿಂದ ಸಾಲಮೇಳ
ಕಲಬುರಗಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಚೇರಿ ವತಿಯಿಂದ ಜನವರಿ 25 ಮತ್ತು 26ರಂದು ಎರಡು ದಿನಗಳ ಕಾಲ ಸಾಲ ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಕೆಜಿಬಿ ಮಹಾ ಪ್ರಬಂಧಕ ಗುರುರಾಜ್ ಎಸ್ ಮಾಹಿತಿ ನೀಡಿದ್ದಾರೆ.
ಕಲಬುರಗಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್, ಪ್ರಾದೇಶಿಕ ಕಚೇರಿ ವತಿಯಿಂದ ಜನವರಿ 25 ಮತ್ತು 26ರಂದು ಎರಡು ದಿನಗಳ ಕಾಲ ಸಾಲ ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಕೆಜಿಬಿ ಮಹಾ ಪ್ರಬಂಧಕ ಗುರುರಾಜ್ ಎಸ್ ಮಾಹಿತಿ ನೀಡಿದ್ದಾರೆ.
2/ 7
ಇನ್ನು ನಗರದ ಶರಣಬಸವೇಶ್ವರ ದೇವಸ್ಥಾನದ ಜಾತ್ರಾ ಮೈದಾನದಲ್ಲಿ ಎರಡು ದಿನಗಳ ಈ ಕೆಜಿಬಿ ಸಾಲ ಮೇಳ ಹಮ್ಮಿಕೊಳ್ಳಲಾಗುತ್ತಿದ್ದು, ಜನವರಿ 25ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
3/ 7
ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪಾ ಅವರು ಮೇಳವನ್ನು ಉದ್ಘಾಟಿಸಲಿದ್ದು, ಈ ಮೇಳದಲ್ಲಿ ಶೈಕ್ಷಣಿಕ ಸಾಲ, ಕಾರಿನ ಮೇಲೆ ಸಾಲ, ಮಾರ್ಟಗೇಜ್ ಸಾಲ ನೀಡಲಾಗುತ್ತದೆ.
4/ 7
ಅಲ್ಲದೇ ಇಲ್ಲಿ ಇಷ್ಟು ಮಾತ್ರವಲ್ಲದೇ ಗೃಹಸಾಲ, ಸೇರಿದಂತೆ ವಿವಿಧ ರೀತಿಯ ಸಾಲಗಳನ್ನು ಸೌಲಭ್ಯವನ್ನು ನೀಡಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಇದೊಂದು ಉತ್ತಮ ಅವಕಾಶ ಎನ್ನಬಹುದು.
5/ 7
ಹಾಗೆಯೇ, ಈ ಕರ್ನಾಟಕ ಗ್ರಾಮೀಣ ಬ್ಯಾಂಕಿನ 'ಗ್ರಾಹಕ ವಿಸ್ತಾರ' ಯೋಜನೆಯ ಅಡಿ ಈ ಸಾಲ ಮೇಳ ಆಯೋಜಿಸಲಾಗುತ್ತಿದ್ದು, ನಗರದ ಆರು ಖ್ಯಾತ ಕಾರು ಕಂಪನಿಗಳ ಮಳಿಗೆಗಳು, ಹತ್ತಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಬಿಲ್ಡರ್ ಗಳ ಮಳಿಗೆಗಳು, ವಾಣಿಜ್ಯ ಮಳಿಗೆಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿವೆ.
6/ 7
ಇಷ್ಟೇ ಅಲ್ಲದೇ ಈ ಮೇಳದಲ್ಲಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸುವುದು ಹೇಗೆ? ನಿವೇಶನ ಖರೀದಿ ವೇಳೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಬ್ಯಾಂಕ್ ಕಾನೂನು ಸಲಹೆಗಾರರು ಗ್ರಾಹಕರಿಗೆ ಅಗತ್ಯ ಸಲಹೆ ನೀಡಲಿದ್ದಾರೆ.
7/ 7
ಈ ಸಾಲ ಮೇಳದಲ್ಲಿ ಸುತ್ತ-ಮುತ್ತಲಿನ ಊರಿನ ಜನರಿಗೆ ಬಹಳ ಪ್ರಯೋಜನ ಸಿಗಲಿದ್ದು, ಇದನ್ನು ಗ್ರಾಹಕರು ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳು ಮನವಿ ಮಾಡಿದ್ದಾರೆ.