ಕೋವಿಡ್ ಬಳಿಕ ಅದೆಷ್ಟೋ ರೈಲುಗಳು ಇಂದಿಗೂ ಸಂಚಾರ ಪುನರಾರಂಭಿಸಿಲ್ಲ. ಹೀಗಾಗಿ ಅದೆಷ್ಟೋ ಪ್ರಯಾಣಿಕರು ನೇರ ರೈಲು ಸಂಪರ್ಕದ ಕೊರತೆ ಎದುರಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
2/ 8
ಕರ್ನಾಟಕದ ಹಲವೆಡೆ ಇಂತಹ ಸಮಸ್ಯೆಯಿದ್ದು, ಒಂದೊಂದಾಗಿ ಕೇಂದ್ರ ಸರಕಾರವು ಬಗೆಹರಿಸುವ ಭರವಸೆ ನೀಡಿದೆ. ಅಂತೆಯೇ ಕಲಬುರಗಿಯಲ್ಲೂ ಹಲವು ನೇರ ರೈಲು ಯಾನದ ಕೊರತೆಯಿದೆ ಎಂಬ ಕೂಗು ಕೇಳಿಬರುತ್ತಿದೆ. (ಸಾಂದರ್ಭಿಕ ಚಿತ್ರ)
3/ 8
ಸ್ಥಗಿತಗೊಂಡಿರುವ ರೈಲುಗಳನ್ನು ಮತ್ತೆ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೂ ಮನವಿ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
4/ 8
ಕೋವಿಡ್ ಆರಂಭಕ್ಕೂ ಮುನ್ನ ಶಹಾಬಾದ್ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಆಗುತ್ತಿದ್ದ ರೈಲುಗಳನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಲಾಗಿದೆ. (ಸಾಂದರ್ಭಿಕ ಚಿತ್ರ)
5/ 8
ಇನ್ನು ಕಮಲಾಪುರ ರೈಲು ನಿಲ್ದಾಣದಲ್ಲಿ ನಾಂದೇಡ್–ಯಶವಂತಪುರ ಎಕ್ಸ್ಪ್ರೆಸ್, ಜಾಲನಾ–ತಿರುಪತಿ ಎಕ್ಸ್ಪ್ರೆಸ್, ಸೊಲ್ಲಾಪುರ–ತಿರುಪತಿ ಎಕ್ಸ್ಪ್ರೆಸ್ ಹಾಗೂ ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ನಿಲುಗಡೆಯ ವ್ಯವಸ್ಥೆ ಮಾಡಬೇಕು ಅನ್ನೋದು ಕಲಬುರಗಿಸಾರ್ವಜನಿಕರ ಒತ್ತಾಯವಾಗಿದೆ. (ಸಾಂದರ್ಭಿಕ ಚಿತ್ರ)
6/ 8
ಇದು ಮಾತ್ರವಲ್ಲದೇ ಕಲಬುರಗಿಯಿಂದ ಹಲವು ಪ್ರಮುಖ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಹೊಸ ರೈಲುಗಳ ಆರಂಭಕ್ಕೂ ಬೇಡಿಕೆ ಇಡಲಾಗಿದೆ. (ಸಾಂದರ್ಭಿಕ ಚಿತ್ರ)
7/ 8
ಕಲಬುರಗಿಯಿಂದ ಬೆಂಗಳೂರು, ಮುಂಬೈ ಮತ್ತು ಮಂಗಳೂರು ನಗರಕ್ಕೆ ಹೊಸ ರೈಲು ಆರಂಭಿಸಬೇಕು ಅನ್ನೋದು ಈ ಭಾಗದ ರೈಲು ಪ್ರಯಾಣಿಕರ ಬೇಡಿಕೆಯಾಗಿದೆ. (ಸಾಂದರ್ಭಿಕ ಚಿತ್ರ)
8/ 8
ಕಲಬುರಗಿ– ಹೈದರಾಬಾದ್ ಇಂಟರ್ಸಿಟಿ, ಸೊಲ್ಲಾಪುರ– ಕಲಬುರಗಿ– ಗುಂತಕಲ್ ಡೆಮೋ, ಸಿಕಂದರಾಬಾದ್– ಚಿತ್ತಾಪುರ ಮೆಮು, ಫಲಕನುಮ–ವಾಡಿ–ಕಾಚಿಗುಡ ಎಕ್ಸ್ಪ್ರೆಸ್ ರೈಲು ಕಲಬುರಗಿಗೆ ವಿಸ್ತರಣೆ ಮಾಡಬೇಕು ಅನ್ನೋ ಮನವಿಯನ್ನೂ ಕೇಂದ್ರ ರೈಲು ಸಚಿವರಿಗೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)