ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಹಣಾ ದಿನದ ಅಂಗವಾಗಿ ಮುಂಬೈನ ದಾದರ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಲು ವಿಶೇಷ ರೈಲನ್ನು ಓಡಿಸಲು ಮಧ್ಯ ರೈಲ್ವೆ ಇಲಾಖೆ ತೀರ್ಮಾನಿಸಿದೆ. (ಸಾಂದರ್ಭಿಕ ಚಿತ್ರ)
2/ 8
ಡಾ. ಬಿ.ಆರ್.ಅಂಬೇಡ್ಕರ್ ಅವರ ಸ್ಮರಣೆಗಾಗಿ ದಾದರ್ಗೆ ತೆರಳಲು ಇಚ್ಛಿಸುವವರಿಗೆ ಭಾರತೀಯ ರೈಲ್ವೇ ವಿಶೇಷ ರೈಲನ್ನೂ ಒದಗಿಸಿದೆ. (ಸಾಂದರ್ಭಿಕ ಚಿತ್ರ)
3/ 8
ಡಿಸೆಂಬರ್ 6 ರಂದು ಮುಂಬೈಗೆ ತೆರಳಲು ಉದ್ದೇಶಿಸಿರುವ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)
4/ 8
ಡಿಸೆಂಬರ್ 5 ರಂದು ಸಂಜೆ 6:30ಕ್ಕೆ ಹೊರಡುವ ಕಲಬುರಗಿ ಮುಂಬೈ ವಿಶೇಷ ರೈಲು (ಸಂಖ್ಯೆ-01245) ಡಿಸೆಂಬರ್ 6 ರಂದು ಬೆಳಗ್ಗೆ 8:20ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ ತಲುಪಲಿದೆ. (ಸಾಂದರ್ಭಿಕ ಚಿತ್ರ)
5/ 8
ಇನ್ನೂ ಡಿಸೆಂಬರ್7 ರಂದು ಬೆಳಗಿನ ಜಾವ 12:25 ಮುಂಬೈನಿಂದ ಹೊರಡುವ ವಿಶೇಷ ರೈಲು ಬೆಳಗ್ಗೆ 11:30 ಕಲಬುರಗಿಗೆ ವಾಪಸ್ ಆಗಲಿದೆ. (ಸಾಂದರ್ಭಿಕ ಚಿತ್ರ)
6/ 8
ಈ ರೈಲು ಗಾಣಗಾಪುರ, ಅಕ್ಕಲಕೋಟ ರೋಡ್ ಸೊಲ್ಲಾಪುರ, ಕುದುರುವಾಡಿ, ದೌಡ್, ಪುಣೆ,ಲೋಣಾವಾಲ್, ಕಲ್ಯಾಣ ಮತ್ತು ದಾದರ್ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಯಾಗಲಿದೆ. (ಸಾಂದರ್ಭಿಕ ಚಿತ್ರ)
7/ 8
ಡಿಸೆಂಬರ್ 5ರಂದು ಹೊರಡುವ ವಿಶೇಷ ರೈಲಿನಲ್ಲಿ ಏಳು ದ್ವಿತೀಯ ದರ್ಜೆಯ ಜನರಲ್ ಬೋಗಿಗಳು, ಸ್ಲೀಪರ್ ಬೋಗಿಗಳು ಹಾಗೂ ಹತ್ತು ಜನರಲ್ ಬೋಗಿಗಳು ಕೂಡ ಇರಲಿವೆ. (ಸಾಂದರ್ಭಿಕ ಚಿತ್ರ)
8/ 8
ದಾದರ್ಗೆ ತರಳಬೇಕಾದ ಪ್ರಯಾಣಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)