Kalaburagi: ಕಲಬುರಗಿಯಲ್ಲಿ 4 ಹೊಸ ಬಸ್ ನಿಲ್ದಾಣ, 6 ಸಾವಿರ ಹೊಸ ಬಸ್ ಖರೀದಿ

2025ರ ಹೊತ್ತಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳ್ಳಿ ಮಹೋತ್ಸವಕ್ಕೆ ಸಜ್ಜಾಗುತ್ತಿದೆ. ಆ ಹೊತ್ತಿಗೆ ಸಂಸ್ಥೆಯನ್ನು ನಷ್ಟ ಮುಕ್ತ ಸಂಸ್ಥೆಯನ್ನಾಗಿಸುವ ಗುರಿ ಹೊಂದಲಾಗಿದೆ. 

First published:

  • 17

    Kalaburagi: ಕಲಬುರಗಿಯಲ್ಲಿ 4 ಹೊಸ ಬಸ್ ನಿಲ್ದಾಣ, 6 ಸಾವಿರ ಹೊಸ ಬಸ್ ಖರೀದಿ

    ಕಲಬುರಗಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ನಗರದಲ್ಲಿ 4 ಹೈಟೆಕ್ ಬಸ್ ನಿಲ್ಧಾಣ ನಿರ್ಮಿಸುವ ಚಿಂತನೆ ನಡೆದಿದ್ದು, ಈಗಾಗಲೇ ಸ್ಥಳ ಗುರುತಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Kalaburagi: ಕಲಬುರಗಿಯಲ್ಲಿ 4 ಹೊಸ ಬಸ್ ನಿಲ್ದಾಣ, 6 ಸಾವಿರ ಹೊಸ ಬಸ್ ಖರೀದಿ

    ಮುಂದಿನ 3 ವರ್ಷದಲ್ಲಿ ಹಳೆ ಬಸ್​ಗಳನ್ನು ಗುಜರಿಗೆ ಹಾಕಿ 6,000 ಬಸ್ ಹೊಸದಾಗಿ ಖರೀದಿಸಿ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡುವ ಗುರಿ ಹೊಂದಿದ್ದೇವೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Kalaburagi: ಕಲಬುರಗಿಯಲ್ಲಿ 4 ಹೊಸ ಬಸ್ ನಿಲ್ದಾಣ, 6 ಸಾವಿರ ಹೊಸ ಬಸ್ ಖರೀದಿ

    2025ರ ಹೊತ್ತಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳ್ಳಿ ಮಹೋತ್ಸವಕ್ಕೆ ಸಜ್ಜಾಗುತ್ತಿದೆ. ಆ ಹೊತ್ತಿಗೆ ಸಂಸ್ಥೆಯನ್ನು ನಷ್ಟ ಮುಕ್ತ ಸಂಸ್ಥೆಯನ್ನಾಗಿಸುವ ಗುರಿ ಹೊಂದಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Kalaburagi: ಕಲಬುರಗಿಯಲ್ಲಿ 4 ಹೊಸ ಬಸ್ ನಿಲ್ದಾಣ, 6 ಸಾವಿರ ಹೊಸ ಬಸ್ ಖರೀದಿ

    1,850 ಸಿಬ್ಬಂದಿಗಳ ನೇಮಕಾತಿ ಪಾರದರ್ಶಕ ಮತ್ತು ಅಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದ್ದು, ಜೂನ್ ಅಂತ್ಯದ ವೇಳೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Kalaburagi: ಕಲಬುರಗಿಯಲ್ಲಿ 4 ಹೊಸ ಬಸ್ ನಿಲ್ದಾಣ, 6 ಸಾವಿರ ಹೊಸ ಬಸ್ ಖರೀದಿ

    ಬಸ್ ಖರೀದಿಗೆ ಕೆ.ಕೆ.ಆರ್.ಡಿ.ಬಿ. 40 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿದೆ. ಸಂಸ್ಥೆಯ ಪ್ರಗತಿಗೆ ರಾಜ್ಯ ಸರ್ಕಾರ 205 ಕೋಟಿ ರೂ. ವಿಶೇಷ ಅನುದಾನ ನೀಡಿದೆ. ಕೋವಿಡ್ ನಡುವೆಯೂ ನೌಕರರ ವೇತನ ಪಾವತಿಸಿದ್ದೇವೆ ಎಂದು ಅವರು ತಿಳಿಸಿದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Kalaburagi: ಕಲಬುರಗಿಯಲ್ಲಿ 4 ಹೊಸ ಬಸ್ ನಿಲ್ದಾಣ, 6 ಸಾವಿರ ಹೊಸ ಬಸ್ ಖರೀದಿ

    ಅಪಘಾತವಾದಲ್ಲಿ ಮರಣ ಹೊಂದಿದಲ್ಲಿ ನೌಕರರ ಅವಲಂಬಿತರಿಗೆ 50 ಲಕ್ಷ ರೂ. ವಿಮೆ ಪರಿಹಾರ ದೊರಕಿಸುವ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ನೌಕರರಲ್ಲಿ ಸಂಸ್ಥೆಯ ಬಗ್ಗೆ ಅಭಿಮಾನ ಮೂಡಿದ್ದು, ಮುಂದಿನ ದಿನದಲ್ಲಿ ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆಯಲಿದೆ ಎಂದು ರಾಜಕುಮಾರ ಪಾಟೀಲ ತೇಲ್ಕೂರ ಮಾಹಿತಿ ನೀಡಿದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Kalaburagi: ಕಲಬುರಗಿಯಲ್ಲಿ 4 ಹೊಸ ಬಸ್ ನಿಲ್ದಾಣ, 6 ಸಾವಿರ ಹೊಸ ಬಸ್ ಖರೀದಿ

    330 ಕೋಟಿ ರೂ ವೆಚ್ಚದಲ್ಲಿ 802 ಬಸ್ ಖರೀದಿಸಲಾಗುತ್ತಿದೆ. ಸಾಂಕೇತಿಕವಾಗಿ ಮಾರ್ಚ್ 28ಕ್ಕೆ 20 ಬಸ್ಗಳಿಗೆ ಚಾಲನೆ ನೀಡಲಾಗುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ 4500 ಬಸ್​ಗಳಿದ್ದು, 40 ಎ.ಸಿ. ಬಸ್ ಮತ್ತು 762 ಗ್ರಾಮೀಣ ಸಾರಿಗೆ ಸೇರಿದಂತೆ 802 ಬಸ್ ಹೊಸದಾಗಿ ಸೇರ್ಪಡೆಯಾಗಲಿವೆ. (ಸಾಂದರ್ಭಿಕ ಚಿತ್ರ

    MORE
    GALLERIES