ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ…. ಜೋಗ ಜಲಪಾತದ ವೈಭವ ಸವಿಯಿರಿಯೊಮ್ಮೆ
ಜೀವನಚೈತ್ರ ಚಿತ್ರದಲ್ಲಿ ಡಾ| ರಾಜಕುಮಾರ್ ಹಾಡಿರುವ “ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ…” ಹಾಡಿನಲ್ಲಿ “ಸಾಯೋತನಕ ಸಂಸಾರದೊಳಗೆ ಗಂಡಾಗುಂಡಿ, ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ…. ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ” ಎಂಬ ಸಾಲು ಬರುತ್ತವೆ. ಮೂಗೂರು ಮಲ್ಲಪ್ಪ ಬರೆದಿರುವ ಈ ಹಾಡು ಜೋಗ ಜಲಪಾತದ ಭವ್ಯತೆಯನ್ನ ಸಾರುತ್ತದೆ. ವಿಶ್ವದ ಅತ್ಯಂತ ನಯನಮನೋಹರ ಜಲಪಾತಗಳಲ್ಲಿ ಜೋಗ ಕೂಡ ಒಂದು. ಈ ಬಾರಿ ಮುಂಗಾರು ಮಳೆ ಭರ್ಜರಿಯಾಗಿ ಮತ್ತು ಭರಪೂರವಾಗಿ ಹುಯ್ದಿರುವುದರಿಂದ ಜೋಗದ ವೈಭವ ನೋಡಲು ಎರಡು ಕಣ್ಣು ಖಂಡಿತ ಸಾಲದು. ಇಂಥ ಜೋಗದ ಜಲಧಾರೆಯ ದೃಶ್ಯವನ್ನ ಡಿಪಿ ಸತೀಶ್ ಮತ್ತು ಅಶೋಕ್ ಹೆಗಡೆ ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ.
1/ 10


ಶಿವಮೊಗ್ಗದ ಜೋಗವು ಭಾರತದ ಎರಡನೇ ಹಾಗೂ ವಿಶ್ವದ ಐದನೇ ಅತೀ ಎತ್ತರದ ಜಲಪಾತವಾಗಿದೆ. ಇಲ್ಲಿರುವ ಜಲಪಾತ 900 ಅಡಿ ಎತ್ತರದ್ದಾಗಿದೆ.
3/ 10


ಬೆಂಗಳೂರಿನಿಂದ 400 ಕಿಮೀ ದೂರದಲ್ಲಿರುವ ಜೋಗಕ್ಕೆ ದೇಶ ವಿದೇಶಗಳಿಂದಲೂ ಪ್ರವಾಸಿಗರು ತಮ್ಮ ಕಣ್ತುಂಬಿಸಿಕೊಳ್ಳಲು ಬರುತ್ತಾರೆ.
6/ 10


ಸಾಹಸಿಗರ ನೆಚ್ಚಿನ ತಾಣಗಳಲ್ಲಿ ಜೋಗ ಜಲಪಾತವೂ ಒಂದು. ನಿಸರ್ಗಕ್ಕೆ ಅತ್ಯಂತ ಆಪ್ತವಾಗಿರುವ ಸ್ಥಳಗಳಲ್ಲಿ ಇದೂ ಒಂದು.
7/ 10


ಜೋಗದಿಂದ 10 ಕಿಮೀ ಹಿಂದಕ್ಕಿರುವ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಾಣವಾಗಿರುವುದರಿಂದ ಬೇಸಿಗೆಯಲ್ಲಿ ಜೋಗಕ್ಕೆ ನೀರಿನ ಪ್ರವಾಹ ಬರುವುದು ಕಡಿಮೆಯೇ. ಹೀಗಾಗಿ ಬೇಸಿಗೆಯಲ್ಲಿ ನೀರಿಲ್ಲದೇ ಜೋಗ ಭಣಗುಟ್ಟುತ್ತದೆ.
8/ 10


ಬ್ರಿಟನ್ನ ವೈಸ್ರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜೆ ಅವರು ಜೋಗದ ಸೌಂದರ್ಯವನ್ನು ನಿತ್ಯನೂತನವೆಂದು ಬಣ್ಣಿಸಿದ್ದಾರೆ.
9/ 10


ಬ್ರಿಟನ್ನ ಅನೇಕ ವೈಸ್ರಾಯ್ಗಳು, ಗವರ್ನರ್ ಜನರಲ್ಗಳು ಹಾಗೂ ಭಾರತದ ರಾಷ್ಟ್ರಪತಿಗಳು, ಪ್ರಧಾನಿಗಳು ಜೋಗಕ್ಕೆ ಭೇಟಿ ಕೊಡುವುದು ಸಾಮಾನ್ಯ.
Loading...