ಈಗಾಗಲೇ ಒಂದು ಚಿಕ್ಕ ವ್ಯಾಪಾರ ಇಲ್ಲವೇ ಉದ್ಯೋಗಮಾಡುತ್ತಿದ್ದು ಇನ್ನೂ ಹೆಚ್ಚಿನ ಆದಾಯಕ್ಕಾಗಿ ಏನು ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಹಾಗಾದರೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ನಿಮಗೆ ಅದ್ಭುತ ಅವಕಾಶವನ್ನು ನೀಡುತ್ತಿದೆ. IPPB ವ್ಯಾಪಾರ ಕರೆಸ್ಪಾಂಡೆಂಟ್ಗಳನ್ನು ನೇಮಿಸಿಕೊಳ್ಳುತ್ತಿದೆ. ಇದಕ್ಕೆ ನೀವು ಅಪ್ಲೈ ಮಾಡಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು.
ಆಸಕ್ತರು ಅರ್ಜಿ ಸಲ್ಲಿಸಬಹುದು. IPPB ತನ್ನ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸಲು ಮತ್ತು ಹೆಚ್ಚಿನ ಗ್ರಾಹಕರಿಗೆ ಸೇವೆ ಸಲ್ಲಿಸಲು ವ್ಯಾಪಾರ ಕರೆಸ್ಪಾಂಡೆಂಟ್ಗಳನ್ನು ನೇಮಿಸಿಕೊಳ್ಳುತ್ತಿದೆ. ನೀವು IPPB ಬಿಸಿನೆಸ್ ಕರೆಸ್ಪಾಂಡೆಂಟ್ ಆಗಲು ಬಯಸಿದರೆ ನಾನು ಏನು ಮಾಡಬೇಕು? ಯಾರು ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಅನುಮಾನ ನಿಮಗಿದ್ದರೆ ಇಲ್ಲಿ ನೀಡಿರುವ ಮೇಲ್ ಐಡಿ ಬಳಸಿ ರೆಸ್ಯೂಮ್ ಕಳಿಸಿ .
ನಿವೃತ್ತ ಬ್ಯಾಂಕ್ ನೌಕರರು, ನಿವೃತ್ತ ಶಿಕ್ಷಕರು, ನಿವೃತ್ತ ಸರ್ಕಾರಿ ನೌಕರರು, ಮಾಜಿ ಸೈನಿಕರು, ಸಾರ್ವಜನಿಕ ಕರೆ ಕಚೇರಿ ನಿರ್ವಾಹಕರು, ದಿನಸಿ ಅಂಗಡಿಗಳು, ಮೆಡಿಕಲ್ ಶಾಪ್ ಮ್ಯಾನೇಜರ್ಗಳು, ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಏಜೆಂಟ್ಗಳು, ವಿಮಾ ಏಜೆಂಟ್ಗಳು, ಪೆಟ್ರೋಲ್ ಪಂಪ್ ಮಾಲೀಕರು, ಸಾಮಾನ್ಯ ಸೇವಾ ಕೇಂದ್ರದ ವ್ಯವಸ್ಥಾಪಕರೂ ಸಹ ಅರ್ಜಿ ಸಲ್ಲಿಸಬಹುದು.