ಕಚೇರಿ ಕಟ್ಟುವಾಗ, ಅದರ ಗಾತ್ರವನ್ನು ಲೆಕ್ಕಿಸದೇ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸುರಕ್ಷತಾ ಕ್ರಮಗಳು ಗಮನದಲ್ಲಿಟ್ಟುಕೊಳ್ಳಬೇಕು. ಮೇಲಧಿಕಾರಿಗಳೊಂದಿಗೆ ಸಂವಹನ ನಡೆಸುವ ನಿಯಮಗಳು ಮತ್ತು ಇತರ ಹಲವು ಅಂಶಗಳನ್ನು ಪರಿಗಣಿಸುವುದು ಅವಶ್ಯಕ. ನಿಮ್ಮ ಕಛೇರಿಯ ಕೆಲಸಗಾರರನ್ನು ಒತ್ತಡದಿಂದ ಮುಕ್ತವಾಗಿ ಮತ್ತು ಸುರಕ್ಷಿತವಾಗಿರಿಸಲು ನೀವು ಮಾಡಬೇಕಾಗಿರುವುದು ಈ ಕೆಳಗಿನ ಟಿಪ್ಸ್ಗಳನ್ನು ಫಾಲೋ ಮಾಡುವುದಾಗಿದೆ.
ಸುರಕ್ಷತಾ ಜಾಗೃತಿ ಸಮಿತಿ: ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಸುರಕ್ಷತಾ ಜಾಗೃತಿ ಸಮಿತಿಯನ್ನು ರಚಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಬೇಕು. ಉದಾಹರಣೆಗೆ, ನೌಕರರಿಂದ ಯಾವುದೇ ಅಪಘಾತ ಅಥವಾ ಯಾವುದೇ ದೂರು ಬಂದಾಗ, ಅವರನ್ನು ತನಿಖೆ ಮಾಡಲು ಸಮರ್ಥ ತಂಡವನ್ನು ರಚಿಸಬೇಕು, ಸಮಸ್ಯೆಯ ಮೂಲ ಕಾರಣವನ್ನು ಕಂಡುಹಿಡಿಯಬೇಕು ಮತ್ತು ಅದನ್ನು ಆಡಳಿತಕ್ಕೆ ವರದಿ ಮಾಡಬೇಕು. ಸಮಿತಿಯು ನಿಷ್ಪಕ್ಷಪಾತ ಮತ್ತು ಗೌಪ್ಯವಾಗಿರುವುದು ಅತ್ಯಗತ್ಯ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)