ಈ ನೇಮಕಾತಿಯಲ್ಲಿ ಭರ್ತಿ ಮಾಡಲಿರುವ ಹುದ್ದೆಗಳ ಹೆಸರನ್ನು ಕ್ಯಾಪ್ಜೆಮಿನಿ ಕಂಪನಿಯು ಬಹಿರಂಗಪಡಿಸಿದೆ. ಕಂಪನಿಯು ಮುಖ್ಯವಾಗಿ ಇನ್‌ವಾಯ್ಸ್ ಪ್ರೊಸೆಸಿಂಗ್, ಬ್ಯುಸಿನೆಸ್ ಅನಾಲಿಸ್ಟ್, ಡೇಟಾ ಅನಾಲಿಸ್ಟ್, ಮ್ಯಾನುಯಲ್ ಟೆಸ್ಟರ್, ಪ್ರಾಜೆಕ್ಟ್ ಮ್ಯಾನೇಜರ್, ಗ್ರಾಜುಯೇಟ್ ಸಾಫ್ಟ್‌ವೇರ್ ಎಂಜಿನಿಯರ್, ಜೂನಿಯರ್ ಬ್ಯುಸಿನೆಸ್ ಅನಾಲಿಸ್ಟ್, ಮೆಕ್ಯಾನಿಕಲ್ ಮತ್ತು ಫಿಸಿಕಲ್ ಇಂಜಿನಿಯರ್, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ ಇಂಟರ್ನ್, ಸ್ಕ್ರಮ್ ಮಾಸ್ಟರ್, ಕ್ಲೈಂಟ್ ಪಾರ್ಟ್‌ನರ್, ಫೈನಾನ್ಷಿಯಲ್ ಅನಾಲಿಸ್ಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಆಯಾ ಹುದ್ದೆಗೆ ಅನುಗುಣವಾಗಿ ಅಭ್ಯರ್ಥಿಗಳ ಅರ್ಹತೆ & ಅನುಭವವನ್ನು ಕೇಳಲಾಗುತ್ತದೆ.
ವರ್ಕ್ ಫ್ರಂ ಹೋಂ ಜಾಬ್ಸ್: ಕ್ಯಾಪ್ಜೆಮಿನಿ ಕಂಪನಿಯಲ್ಲಿ ಮನೆಯಿಂದ ಕೆಲಸ ಮಾಡುವ ಅವಕಾಶವವಿದೆ. ServiceNow ಟೆಸ್ಟರ್, ಸೇವಿಯಂಟ್ ಡೆವಲಪರ್, ಅಜೂರ್ ಡೇಟಾ ಇಂಜಿನಿಯರ್, ಸೋರ್ ಆರ್ಕಿಟೆಕ್ಟ್, MySQL ಡೇಟಾ ಬೇಸ್, ಸೇಲ್ಸ್‌ಫೋರ್ಸ್ ಲೈಟ್ನಿಂಗ್ ಡೆವಲಪರ್ ಮುಂತಾದ ಹುದ್ದೆಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಕಂಪನಿಯ ಅಧಿಕೃತ ವೆಬ್ಸೈಟ್ನ್ನು ಪರಿಶೀಲಿಸಬಹುದು.
ನೀವು ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ? ಹಾಗಿದ್ರೆ ಕ್ಯಾಪ್ಜೆಮಿನಿ ಕಂಪನಿಗೆ ಸೇರಿ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ. ಜೊತೆಗೆ ಗ್ರಾಹಕರ ಬೆಳವಣಿಗೆಗೆ ಕೊಡುಗೆ ನೀಡಿ. Capgemini ಯಲ್ಲಿ ಮುಕ್ತ-ಚಿಂತಕರು, ಉದ್ಯಮಿಗಳು, ಉದ್ಯಮ ತಜ್ಞರೊಂದಿಗೆ ಕೆಲಸ ಮಾಡಿ ಎಂದು ಕ್ಯಾಪ್ಜೆಮಿನಿ ಇಂಡಿಯಾ ಬ್ಯುಸಿನೆಸ್ ಯೂನಿಟ್ ಎಂಡಿ ಅನಂತ್ ಚಂದ್ರಮೌಳಿ ಹೇಳಿದ್ದಾರೆ.