ಹೊಸ ವರ್ಷ 2023 ರಲ್ಲಿ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಸಿಗಲಿದೆ. ವರ್ಷದ ಮೊದಲ ತಿಂಗಳಿನಿಂದಲೇ ಅನೇಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅನೇಕ ಇಲಾಖೆಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಿವೆ. ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಕೇಂದ್ರೀಯ ವಿದ್ಯಾಲಯದಲ್ಲಿ ಅತೀ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಸಿಆರ್ಪಿಎಫ್, ಒಡಿಶಾ ಕಾನ್ಸ್ಟೇಬಲ್ ನೇಮಕಾತಿ, ಬಾರ್ಡರ್ ರೋಡ್ ಆರ್ಗನೈಸೇಶನ್, ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ನೇಮಕಾತಿ ಹೊರ ಬಿದ್ದಿದೆ. ಇಲ್ಲಿ ಹುದ್ದೆಯ ಕುರಿತಾದ ನೇಮಕಾತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ನಿಮ್ಮ ಆಯ್ಕೆ ಮತ್ತು ಅರ್ಹತೆಗೆ ಅನುಗುಣವಾಗಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ಪಿಯುಸಿ ಪಾಸಾದವರಿಗೂ ಸಹ ಉದ್ಯೋಗ ಇದೆ.
KVS ನೇಮಕಾತಿ 2023: ಕೇಂದ್ರೀಯ ವಿದ್ಯಾಲಯದಲ್ಲಿ 13,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ. ಕೇಂದ್ರೀಯ ವಿದ್ಯಾಲಯ ಅಸೋಸಿಯೇಷನ್ ಬೋಧಕ ಮತ್ತು ಬೋಧಕೇತರ ವರ್ಗದ ಹುದ್ದೆಗಳಿಗೆ ಬಂಪರ್ ನೇಮಕಾತಿಯನ್ನು ನಡೆಸುತ್ತಿದೆ. ಒಟ್ಟು 13,404 ಹುದ್ದೆಗಳು ಖಾಲಿ ಇವೆ. ಪಿಆರ್ಟಿ, ಟಿಜಿಟಿ, ಪಿಜಿಟಿ ಮತ್ತು ಬೋಧಕೇತರ ಹುದ್ದೆಗಳಿಗೆ ಆಸಕ್ತರು ಅರ್ಜಿ ಹಾಕಿ. ಜನವರಿ 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
MPPEB ನೇಮಕಾತಿ 2023 : 6755 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇವೆ. ಮಧ್ಯಪ್ರದೇಶದಲ್ಲಿ 6755 ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಅರ್ಜಿ ಪ್ರಕ್ರಿಯೆಯು ಜನವರಿ 5, 2023 ರಿಂದ ಪ್ರಾರಂಭವಾಗುತ್ತದೆ. ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿಯು ಮಧ್ಯಪ್ರದೇಶ ಗ್ರಾಮ ಲೆಕ್ಕಿಗ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. MPPEB ಗ್ರಾಮ ಲೆಕ್ಕಿಗ ನೇಮಕಾತಿ 2023 ಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ.
ಒಡಿಶಾ ಪೊಲೀಸ್ ನೇಮಕಾತಿ 2023: ಪಿಯುಸಿ ಪಾಸಾದವರಿಗೆ ಕಾನ್ಸ್ಟೇಬಲ್ ಹುದ್ದೆ. ಒಡಿಶಾ ಪೊಲೀಸ್ ಇಲಾಖೆಯಲ್ಲಿ ಪಿಯುಸಿ ಪಾಸಾದವರಿಗೆ ಬಂಪರ್ ಉದ್ಯೋಗ ಇದೆ. ಪೊಲೀಸ್ ಕಾನ್ಸ್ಟೇಬಲ್ ಆಗಬೇಕೆಂಬ ಕನಸಿದ್ದರೆ ಈಗಲೇ ಅರ್ಜಿ ಹಾಕಿ. ಆನ್ಲೈನ್ ಅರ್ಜಿ ಪ್ರಕ್ರಿಯೆ ಡಿಸೆಂಬರ್ 30, 2022ರಿಂದ ಪ್ರಾರಂಭವಾಗಿದೆ. ಒಡಿಶಾ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2023ರ ಅನುಸಾರ ಒಟ್ಟು 4790 ಹುದ್ದೆಗಳು ಖಾಲಿ ಇವೆ.
ಬಿಎಂಸಿಯಲ್ಲಿ 910 ಫೈರ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಹಾಕಿ. ಬಿಎಂಸಿಯಲ್ಲಿ ಪಿಯುಸಿ ಪಾಸಾದವರು ಫೈರ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಗ್ರೇಟರ್ ಮುಂಬೈ ನಗರ ಕಾರ್ಪೊರೇಷನ್ನಲ್ಲಿ ಈ ನೇಮಕಾತಿ ನಡೆಸಲಾಗುತ್ತಿದೆ. ಫೈರ್ಮ್ಯಾನ್ ಹುದ್ದೆಗಳಿಗೆ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಫೆಬ್ರವರಿ 4ರಂದು ಸಂದರ್ಶನ ನಡೆಯಲಿದೆ.
BRO ನೇಮಕಾತಿ- 567 ಹುದ್ದೆಗಳು ಖಾಲಿ ಇವೆ. ಬಾರ್ಡರ್ ರೋಡ್ ಆರ್ಗನೈಸೇಶನ್ ಸಂಸ್ಥೆಯ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ನಲ್ಲಿ ಒಟ್ಟು 567 ಖಾಲಿ ಹುದ್ದೆಗಳಿವೆ. ರೇಡಿಯೋ ಮೆಕ್ಯಾನಿಕ್, ಆಪರೇಟರ್ ಕಮ್ಯುನಿಕೇಷನ್, ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್ಪೋರ್ಟ್, ವೆಹಿಕಲ್ ಮೆಕ್ಯಾನಿಕ್, MSW, ಡ್ರಿಲ್ಲರ್ MSW, ಮೇಸನ್ MSW, ವೇಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. BRO ನೇಮಕಾತಿ 2023 ರ ಕಿರು ಅಧಿಸೂಚನೆಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.
CRPF ನಲ್ಲಿ ದೊಡ್ಡ ನೇಮಕಾತಿ ನಡೆಯುತ್ತಿದೆ: CRPF ನಲ್ಲಿ ಹೆಡ್ ಕಾನ್ಸ್ಟೇಬಲ್ ಮತ್ತು ASI ಹುದ್ದೆಗಳಿಗೆ ಬಂಪರ್ ನೇಮಕಾತಿ ನಡೆಯುತ್ತಿದೆ. ಸಿಆರ್ಪಿಎಫ್ನಲ್ಲಿ ಒಟ್ಟು 1400 ಕ್ಕೂ ಹೆಚ್ಚು ಹೆಡ್ ಕಾನ್ಸ್ಟೇಬಲ್ ಮತ್ತು ಎಎಸ್ಎ ಹುದ್ದೆಗಳಿವೆ. ಇದರಲ್ಲಿ 1315 ಹೆಡ್ ಕಾನ್ಸ್ ಟೇಬಲ್ ಹುದ್ದೆಗಳು ಹಾಗೂ 143 ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನವಾಗಿದೆ.