ವಿದೇಶದಲ್ಲಿ ಓದುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳು(Students) ಪಾರ್ಟ್ ಟೈಂ ಜಾಬ್(Part Time Jobs) ಮಾಡುತ್ತಿದ್ದಾರೆ. ಆದರೆ ಈ ಪ್ರವೃತ್ತಿ ಭಾರತದಲ್ಲಿ (India) ಕಡಿಮೆ. ಹಣಕಾಸಿನ ಅಗತ್ಯವಿರುವ ಕೆಲವು ವಿದ್ಯಾರ್ಥಿಗಳು ಮಾತ್ರ ಪಾರ್ಟ್ ಟೈಂ ಉದ್ಯೋಗಗಳನ್ನು ಮಾಡುತ್ತಾರೆ. ಆದರೆ ವಿದ್ಯಾರ್ಥಿಗಳು ಓದುವುದರ ಜೊತೆಗೆ, ಪಾರ್ಟ್ ಟೈಂ ಉದ್ಯೋಗ ಮಾಡುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು.
ಫ್ರೀಲ್ಯಾನ್ಸ್ ಬರವಣಿಗೆ:
ಪಾರ್ಟ್ ಟೈಂ ಕೆಲಸವನ್ನು ಬಯಸುವ ವಿದ್ಯಾರ್ಥಿಗಳಿಗೆ ಫ್ರೀಲ್ಯಾನ್ಸ್ ಬರವಣಿಗೆ ಅತ್ಯುತ್ತಮ ಅವಕಾಶವಾಗಿದೆ. ಫ್ರೀಲ್ಯಾನ್ಸ್ ಬರವಣಿಗೆಗೆ ಲ್ಯಾಪ್‌ಟಾಪ್ ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ಲ್ಯಾನ್ ಶ್ಕೆಡ್ಯೂಲ್ ಮಾಡಲು ಮತ್ತು ತಮ್ಮದೇ ಆದ ಗುರಿಗಳನ್ನು ಹೊಂದಲು ಸಾಧ್ಯವಾಗತ್ತದೆ. ಫ್ರೀಲ್ಯಾನ್ಸ್ ಬರಹಗಾರರು ವಿವಿಧ ರೀತಿಯ ವಿಷಯಗಳನ್ನು, ವಿಭಿನ್ನ ಶೈಲಿಗಳಲ್ಲಿ ಬರೆಯುವ ಮೂಲಕ ಹಣವನ್ನು ಗಳಿಸಬಹುದು. ಈ ಅನುಭವದೊಂದಿಗೆ ಪೂರ್ಣ ಸಮಯದ ಉದ್ಯೋಗವನ್ನೂ ಪಡೆಯಬಹುದು.
ಫೋಟೋಗ್ರಫಿ:
ಫೋಟೋಗ್ರಫಿ ಒಂದು ಹವ್ಯಾಸ. ಇದನ್ನು ಪಾರ್ಟ್ ಟೈಂ ಉದ್ಯೋಗವಾಗಿಯೂ ಪರಿವರ್ತಿಸಬಹುದು. ಫೋಟೋ ಪುಸ್ತಕಗಳನ್ನು ಪಬ್ಲಿಷ್ ಮಾಡುವುದು ಉತ್ತಮ ಆಯ್ಕೆಯಾಗಿದೆ. ಇದನ್ನು ಕೇವಲ 20 ಪುಟಗಳೊಂದಿಗೆ ಸಣ್ಣದಾಗಿ ಪ್ರಾರಂಭಿಸಬಹುದು. ಬ್ರಾಂಡ್ ಹೆಸರನ್ನು ಕಟ್ಟಲು ಮತ್ತು ಸ್ವಲ್ಪ ಹಣವನ್ನು ಗಳಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ಉತ್ಪನ್ನಗಳು ಮತ್ತು ಸೇವೆಗಳ ಮೂಲಕ ಸ್ಥಳೀಯವಾಗಿಯೂ ಬ್ಯುಸಿನೆಸ್ ಪ್ರಾರಂಭಿಸಬಹುದು. ಇದು ಮತ್ತೊಂದು ಆಯ್ಕೆಯಾಗಿದೆ. ಇದು ಕೇವಲ ಹಣಕಾಸಿನ ವಿಷಯದಲ್ಲಿ ಮಾತ್ರವಲ್ಲದೇ, ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುತ್ತದೆ.
ಆನ್‌ಲೈನ್ ಸೆಲ್ಲಿಂಗ್:
ಭಾರತದಲ್ಲಿ ಇ-ಕಾಮರ್ಸ್ ಉದ್ಯಮವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆನ್‌ಲೈನ್ ಬ್ಯುಸಿನೆಸ್ ಪ್ರಾರಂಭಿಸುವುದು ಎಂದಿಗಿಂತಲೂ ಈಗ ಸುಲಭವಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಆದಾಯವನ್ನು ಗಳಿಸಬಹುದು. ಕೈಯಿಂದ ಮಾಡಿದ ಕರಕುಶಲ ವಸ್ತುಗಳು ಅಥವಾ ಇತರ ವಿಶಿಷ್ಟ ವಸ್ತುಗಳನ್ನು ಮಾರಾಟ ಮಾಡಬಹುದು. ಆನ್‌ಲೈನ್ ಸೆಲ್ಲಿಂಗ್ನಲ್ಲಿ 2 ಪ್ರಯೋಜನಗಳಿವೆ. ಒಂದು ಬಾಡಿಗೆ ಪಾವತಿಸುವಂತಿಲ್ಲ. ಇನ್ನೊಂದು ಯಾರನ್ನೂ ಕೆಲಸಕ್ಕೆ ನೇಮಿಸಿಕೊಳ್ಳುವ ಅವಶ್ಯಕತೆ ಇರಲ್ಲ. ಕಡಿಮೆ ಹೂಡಿಕೆಯೊಂದಿಗೆ ಬ್ಯುಸಿನೆಸ್ ಪ್ರಾರಂಭ ಮಾಡಬಹುದು.
ಡೇಟಾ ಎಂಟ್ರಿ ಜಾಬ್ಸ್:
ಉತ್ತಮ ಟೈಪಿಂಗ್ ಕೌಶಲ್ಯವನ್ನು ಹೊಂದಿರುವ ಮತ್ತು ಡೆಡ್ಲೈನ್ನೊಳಗೆ ಕೆಲಸ ಮಾಡುವವರಿಗೆ ಡೇಟಾ ಎಂಟ್ರಿ ಅತ್ಯುತ್ತಮ ಪಾರ್ಟ್ ಟೈಂ ಉದ್ಯೋಗದ ಆಯ್ಕೆಯಾಗಿದೆ. ಈ ಉದ್ಯೋಗಗಳು ಪೂರ್ಣ ಸಮಯ, ಅರೆಕಾಲಿಕ ಮತ್ತು ಫ್ರೀಲ್ಯಾನ್ಸ್ ವಿಧಾನಗಳಲ್ಲಿ ಲಭ್ಯವಿದೆ. ಇವುಗಳಲ್ಲಿ ಹೆಚ್ಚಿನವು ಮನೆಯಿಂದ ಕೆಲಸ ಮಾಡುವ ಅವಕಾಶಗಳಾಗಿವೆ. ಸಾಮಾನ್ಯವಾಗಿ ಮೈಕ್ರೋಸಾಫ್ಟ್ ಆಫೀಸ್ ಅಥವಾ ಮೈಕ್ರೋಸಾಫ್ಟ್ ಎಕ್ಸೆಲ್ ಸ್ಪ್ರೆಡ್‌ಶೀಟ್‌ಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗ ಮಾಡಬಹುದು.